ಟಿವಿ ವಿಚಾರಕ್ಕೆ ಗಂಡ ಹೆಂಡತಿ ಗಲಾಟೆ: ಬಾವಿಗೆ ಹಾರಿ ಇಬ್ಬರು ಸಾವು!
– ಕಾರ್ಕಳದಲ್ಲಿ ನಡೆದ ಘಟನೆ: ಇಬ್ಬರು ಮಕ್ಕಳು ಅನಾಥ
– ಮೂಡಿಗೆರೆಯಲ್ಲಿ ಬಸ್ಸಿಗೆ ಅಡ್ಡ ನಿಂತ ಕಾಡಾನೆ!
– ಯುವತಿಯರ ಸ್ನಾನ ದೃಶ್ಯ ಸೆರೆ: ಕಾಮುಕ ಅರೆಸ್ಟ್!
NAMMUR EXPRESS NEWS
ಕಾರ್ಕಳ: ಟಿವಿ ವಿಚಾರಕ್ಕಾಗಿ ದಂಪತಿಗಳ ಮಧ್ಯೆ ಜಗಳವಾಗಿ ಸಾವಿನಲ್ಲಿ ಅಂತ್ಯ ಕಂಡಿರುವ ಘಟನೆ ಜೂ. 25ರಂದು ಕಾರ್ಕಳ ತಾಲೂಕು ನಲ್ಲೂರು ಎಂಬಲ್ಲಿ ನಡೆದಿದೆ. ಮೃತಪಟ್ಟ ದಂಪತಿಗಳು ಯಲ್ಲಾಪುರ ಮೂಲದವರು ಎಂದು ತಿಳಿದು ಬಂದಿದೆ.
ಇಮ್ಯಾನುಲ್ ಸಿದ್ದಿ (40) ಹಾಗೂ ಯಶೋಧಾ (32) ಎಂಬವರೇ ಸಾವಿಗೀಡಾದ ದಂಪತಿ. ಭಾನುವಾರ ಬೆಳಿಗ್ಗೆ ಟಿವಿ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳ ಮಧ್ಯೆ ಜಗಳವಾಗಿದ್ದು, ಈ ವೇಳೆ ಯಶೋಧಾ ತೋಟದಲ್ಲಿದ್ದ ಬಾವಿಗೆ ಹಾರಿದರು. ಯಶೋಧಾರನ್ನು ರಕ್ಷಿಸಲು ತೆರಳಿದ್ದ ಪತಿ ಇಮ್ಯಾನುಲ್ ಕೂಡ ನೀರುಪಾಲಾದವರು. ಕಳೆದ ಎರಡು ವರ್ಷಗಳಿಂದ ಇಮ್ಯಾನುಲ್, ಯಶೋಧಾ ದಂಪತಿ ನಲ್ಲೂರಿನ ತೋಟವೊಂದರಲ್ಲಿ ಕೆಲಸಕ್ಕಿದ್ದರು. ದಂಪತಿ ಸಾವಿನಿಂದ ಇದೀಗ 10 ವರ್ಷದ ಬಾಲಕ ಹಾಗೂ 9 ವರ್ಷದ ಬಾಲಕಿ ಅನಾಥರಾಗಿದ್ದಾರೆ.
ಡಿವೈಎಸ್ಪಿ ಅರವಿಂದ್ ಕಲಗುಜ್ಜಿ, ಗ್ರಾಮಾಂತರ ಪೊಲೀಸ್ ಠಾಣೆ ಎಸ್ಐ ತೇಜಸ್ವಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಸರ್ಕಾರಿ ಬಸ್ ಗೆ ಅಡ್ಡನಿಂತ ಒಂಟಿ ಸಲಗ:
ಒಂಟಿ ಸಲಗವೊಂದು ಕೆಎಸ್ ಆರ್ ಟಿಸಿ ಬಸ್ ಗೆ ಅಡ್ಡನಿಂತ ಘಟನೆ ಮೂಡಿಗೆರೆ ತಾಲೂಕಿನ ಕೊಲ್ಲಿಬೈಲ್ ಗ್ರಾಮದಲ್ಲಿ ನಡೆದಿದೆ.ಚಿಕ್ಕಮಗಳೂರು–ಮೂಡಿಗೆರೆ ರಸ್ತೆಯ ಕೊಲ್ಲಿಬೈಲ್ ನ ಕಾಫಿ ಡೇ ಮಾಲೀಕ ದಿ. ಸಿದ್ಧಾರ್ಥ್ ಹೆಗ್ಡೆ ವನದ ಬಳಿ ಆನೆ ಏಕಾಏಕಿ ರಸ್ತೆಗೆ ಅಡ್ಡವಾಗಿ ಬಂದಿದ್ದು, ಬಸ್ಸಿಗೆ ಎದುರಾಗಿ ನಿಂತಿದೆ.
ಆನೆಯನ್ನು ಕಂಡು ಬಸ್ ಚಾಲಕ ಬಸ್ ನಿಲ್ಲಿಸಿದ್ದು, ಈ ವೇಳೆ ಪ್ರಯಾಣಿಕರು ಆತಂಕದಿಂದ ಕೂಗಿಕೊಂಡಿದ್ದಾರೆ. ಜನರ ಕೂಗಾಟ ಕೇಳಿ ಗಲಿಬಿಲಿಗೊಂಡ ಆನೆ ರಸ್ತೆ ಬದಿಯಿಂದ ಸ್ಥಳದಿಂದ ಓಡಿ ಹೋಗಿದೆ.
ಯುವತಿಯರ ಸ್ನಾನ ದೃಶ್ಯ ಸೆರೆ: ಕಾಮುಕ ಅರೆಸ್ಟ್!
ಪಿಜಿಯಲ್ಲಿ ಯುವತಿಯರು ಸ್ನಾನ ಮಾಡುತ್ತಿರುವನ್ನು ವಿಡಿಯೋ ಮಾಡುತ್ತಿದ್ದ ವಿಕೃತ ಕಾಮುಕ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಶೋಕ್ ಎನ್ನುವಾತ ಬೆಂಗಳೂರಿನ ಮಹದೇವಪುರ ಹೂಡಿಯಲ್ಲಿರುವ ಪಿಜಿನಲ್ಲಿ ವಾಸವಾಗಿದ್ದ. ಈತ ಸುತ್ತಮುತ್ತಲಿನ ಲೇಡಿಸ್ ಪಿಗಳನ್ನೇ ಹುಡುಕಿ ಯುವತಿಯರು ಸ್ನಾನ ಮಾಡುವುದನ್ನು ವಿಡಿಯೋ ಮಾಡುತ್ತಿದ್ದ. ಹೀಗೆ ಯುವತಿಯರ ಸ್ನಾನ ಮಾಡುವುದನ್ನು ವಿಡಿಯೋ ಮಾಡಿಕೊಂಡು ನೋಡುತ್ತ ತನ್ನ ಕಾಮದ ತೀಟೆ ತೀರಿಸಿಕೊಳ್ಳುತ್ತಿದ್ದ. ತಾನು ಇದ್ದ ಮಹಿಳಾ ಪಿಜಿಯ ಕಿಟಕಿಗಳ ಮೂಲಕ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಸದ್ಯ ಕಾಮುಕನನ್ನು ಸ್ಥಳೀಯರು ಜೂನ್ 21ರಂದು ರೆಡ್ಹ್ಯಾಂಡ್ ಆಗಿ ಹಿಡಿದು ಮಹದೇವಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ಮೊಬೈಲ್ ಅಲ್ಲಿ 7 ವಿಡಿಯೋಗಳು ಸಿಕ್ಕಿವೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023