ಅಡಿಕೆ ಬೆಳೆಗೆ ರೋಗದ ಜತೆಗೆ ಈಗ ಕೀಟದ ಹಾವಳಿ!
* ದಾವಣಗೆರೆ, ಚಿತ್ರದುರ್ಗ ಭಾಗದಲ್ಲಿ ಅಡಿಕೆಯಲ್ಲಿ ಥ್ರಿಪ್ಸ್ ಹುಳದ ಬಾಧೆ
* ಮತ್ತೊಂದು ಕಡೆ ರಿಂಗ್ಸ್ಪಾಟ್ ವೈರಸ್: ರೈತರೇ ಎಚ್ಚರ
NAMMUR EXPRESS NEWS
ದಾವಣಗೆರೆ: ಈಚೆಗೆ ಕೆಲವು ಸಮಯಗಳಿಂದ ಅಡಿಕೆ ಬೆಳೆಯ ಮೇಲೆ ಕೀಟಗಳ ಹಾವಳಿ, ರೋಗಗಳ ಹಾವಳಿ ಹೆಚ್ಚುತ್ತಿದೆ. ಎಲ್ಲದಕ್ಕೂ ಪ್ರಮುಖವಾದ ಕಾರಣ ಹವಾಮಾನ. ಇದೀಗ ಇನ್ನೊಂದು ಕೀಟವು ಅಡಿಕೆಗೆ ಹಾವಳಿ ನೀಡಲು ಪ್ರಾರಂಭವಾಗಿದೆ. ಥ್ರಿಪ್ಸ್ ಎಂದು ಕರೆಯಲ್ಪಡುವ ಕೀಟವು ಇದೀಗ ಅಡಿಕೆಯ ಮೇಲೆ ಕಾಟವನ್ನು ದಾವಣಗೆರೆಯಲ್ಲಿ ಥ್ರಿಪ್ಸ್ ಪ್ರಾರಂಭಿಸಿದೆ. ಹುಳದ ಬಾಧೆ ಆರಂಭವಾಗಿದೆ.
ಕಳೆದ ಕೆಲವು ಸಮಯಗಳಿಂದ ಅಡಿಕೆಗೆ ಎಲೆಚುಕ್ಕಿ ರೋಗವು ತೀವ್ರವಾಗಿ ಬಾಧಿಸುತ್ತಿದೆ. ಈ ಬಾರಿಯೂ ಕೂಡ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಕಾಣಿಸದ ಎಲೆಚುಕ್ಕಿ ರೋಗ ಈಚೆಗೆ 10 ದಿನಗಳಿಂದ ಅಲ್ಲಲ್ಲಿ ತೀವ್ರವಾಗಿ ಕಾಣಿಸುತ್ತದೆ. ಅದರ ನಡುವೆ ರಿಂಗ್ಸ್ಪಾಟ್ ವೈರಸ್ ಕೂಡ ಶಿರಸಿ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಬಾಧಿಸುತ್ತಿದೆ.
1956ರಲ್ಲಿ ಕರ್ನಾಟಕ ಮತ್ತು 1959 ರಲ್ಲಿ ಕೇರಳ ರಾಜ್ಯದ ಕೆಲವು ಅಡಿಕೆ ಬೆಳೆಯುವ ಪ್ರದೇಶದಲ್ಲಿ ಈ ಮೊದಲು ಥ್ರಿಪ್ಸ್ ಕೀಟದ ಬಾಧೆಯನ್ನು ವರದಿ ಮಾಡಲಾಗಿದೆ, ಹಲವು ನಂತರ ಮತ್ತೊಮ್ಮೆ ಈ ರಸ ಹೀರುವ ಕೀಟವನ್ನು ಅಡಿಕೆ ಸಸಿಗಳ ಸೋಗೆಯಲ್ಲಿ ಗಮನಿಸಲಾಗಿದೆ. ದ್ರಾಕ್ಷಿ, ದಾಳಿಂಬೆ, ಕ್ರೋಟನ್, ಗುಲಾಬಿ, ಮೆಣಸು, ಗೇರು ಸೇರಿದಂತೆ ಹಲವು ಬೆಳೆಗಳಿಗೆ ಈ ಕೀಟವು ಬಾಧಿಸುತ್ತದೆ. 11 ರಿಂದ 33 ದಿನಗಳ ಜೀವನ ಚಕ್ರ ಇರುವ ಈ ಕೀಟವು, ಅಡಿಕೆ ಎಲೆಯ ಅಡಿಭಾಗದಿಂದ ರಸಹೀರಿದಾಗ, ಎಲೆ ಬಿಳುಚುವುದು (ಬೆಳ್ಳಿಯ ಮಚ್ಚೆಗಳು) ಕಂಡುಬರುತ್ತದೆ. ನಂತರ ಎಲೆಯು ಹಳದಿ ಮಿಶ್ರಿತ ಕಂದು ಬಣ್ಣಕ್ಕೆ ತಿರುಗಿ, ಒಣಗುತ್ತವೆ. ಇದರಿಂದ ಎಲೆಗಳು ಸುಕ್ಕುಗಟ್ಟಲು ಕಾರಣ.ಹಾಗೂ ಬೆಳವಣಿಗೆಯನ್ನು ಕುಂಠಿತಗೊಳಿಸಲಾಗುತ್ತದೆ ಎಂದು ಅಧ್ಯಯನಗಳು ತಿಳಿಸುತ್ತದೆ. ಹೆಚ್ಚು ಸಮಯದಲ್ಲಿ ಈ ಕೀಟದ ಹಾವಳಿ ಎಂದು ವರದಿಯಾಗಿದೆ.