- ಗುಂಡಿಯಲ್ಲಿ ಬಿದ್ದ 3 ವಿದ್ಯಾರ್ಥಿಗಳ ಶವಪತ್ತೆ!
- ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ದುರ್ಘಟನೆ
ಹಾವೇರಿ: ಸರ್ಕಾರ ಮತ್ತು ಕಾಮಗಾರಿ ಹಿಡಿದವನ ನಿರ್ಲಕ್ಷ್ಯದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಅಗೆಯಲಾಗಿದ್ದ ಗುಂಡಿಯಲ್ಲಿ ಬಿದ್ದು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಶನಿವಾರ ಸಂಭವಿಸಿದೆ.
ಬ್ಯಾಡಗಿ ಪಟ್ಟಣದ ಎರಡನೇ ನಂಬರ ಶಾಲೆಯ ಕಾಮಗಾರಿ ಪ್ರಗತಿ ಹಂತದಲ್ಲಿತ್ತು. ಅಲ್ಲಿಯೇ ದೊಡ್ಡದೊಂದು ಗುಂಡಿಯನ್ನು ಅಗೆಯಲಾಗಿತ್ತು. ಕರೋನಾದ ಹಿನ್ನೆಲೆಯಲ್ಲಿ ಶಾಲೆಗಳು ಇನ್ನೂ ಆರಂಭವಾಗದೇ ಇರುವ ಹಿನ್ನೆಲೆಯಲ್ಲಿ ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದ ಗುಂಡಿಯಲ್ಲಿ ಬಿದ್ದಿದ್ದರು. ಹತ್ತು ಅಡಿಗೂ ಹೆಚ್ಚು ಆಳವಾದ ಗುಂಡಿಯಿದ್ದ ಕಾರಣ ಮಕ್ಕಳು ಸಾವನ್ನು ಕಂಡಿದ್ದಾರೆ. ಆಳೆತ್ತರದ ಗುಂಡಿ ನಿರಂತರ ಮಳೆಯಿಂದಾಗಿ ತುಂಬಿ ತುಳುಕುತ್ತಿದ್ದು ಅದರಲ್ಲೇ ಮಕ್ಕಳು ಬಿದ್ದಿದ್ದಾರೆ. ಶಾಲೆಯ ಮೈದಾನದಲ್ಲಿ ಮಕ್ಕಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಗುತ್ತಿಗೆದಾರರು, ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಮೃತ ಮಕ್ಕಳಲ್ಲಿ ಇಬ್ಬರು ಹಾವೇರಿಯವರಾಗಿದ್ದು, ಒಬ್ಬರು ಬ್ಯಾಡಗಿಯರಾಗಿದ್ದಾರೆ. ಸರ್ಕಾಋ ತಲಾ 5 ಲಕ್ಷ ಪರಿಹಾರ ನೀಡಿದೆ. ಸ್ಥಳೀಯ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಲಾ 25,000 ರೂ.ಪರಿಹಾರ ನೀಡಿದ್ದಾರೆ.