- ಕೆಲ ಖಾಸಗಿ ಆಸ್ಪತ್ರೆಗಳ ವಿರುದ್ಧ ಸರ್ಕಾರ ಗರಂ
- ರಾಜ್ಯದಲ್ಲಿ ಗರಿಷ್ಠ ಕರೋನಾ ಕೇಸ್
- ಮಳೆ ಬಿಸಿಲಿನ ಆಟ: ಹದಗೆಟ್ಟಿದೆ ಅರೋಗ್ಯ
NAMMUR EXPRESS NEWS
ಬೆಂಗಳೂರು: ಇತ್ತೀಚೆಗೆ ಕೆಲ ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರ ದಾಖಲಾತಿ ನಿರಾಕರಿಸಿರುವ ಪ್ರಕರಣ ಇದೀಗ ಸರ್ಕಾರದ ಗಮನಕ್ಕೆ ಬಂದಿದೆ.
ಕರೋನಾ ಸೋಂಕು ಇರುವವರನ್ನು ತಮ್ಮ ಆಸ್ಪತ್ರೆಗಳಲ್ಲಿ ದಾಖಲು ಮಾಡದ ಸಂಸ್ಥೆಗಳ ಮೇಲೆ ಕೆಪಿಎಂಇ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು.ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲ ಖಾಸಗಿ ಆರೋಗ್ಯ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು ಎಂದು ಅರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ರಾಜ್ಯದಲ್ಲಿ ಶುಕ್ರವಾರ 2,032 ಜನರಿಗೆ ಕರೋನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ 5 ಜನರ ಸಾವನ್ನಪ್ಪಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಇಬ್ಬರು, ಧಾರವಾಡ , ಕೊಪ್ಪಳ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರು ಕರೋನಾದಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ 10,395 ಇದ್ದು, ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ರೇಟ್ ಶೇಕಡಾ 6.63 ಇದೆ. ಬೆಂಗಳೂರಿನಲ್ಲಿಂದು 1,202 ಜನರಿಗೆ ಕರೋನಾ ಸೋಂಕು ದೃಢ ಪಟ್ಟಿದೆ.
ರಾಜ್ಯದಲ್ಲಿ ಮಳೆ, ಬಿಸಿಲು ಕಾರಣ ವಾತಾವರಣ ಹದಗೆಟ್ಟಿದೆ. ಎಲ್ಲರಿಗೂ ಜ್ವರ ಶೀತ ಹೆಚ್ಚಾಗಿದೆ.