- ಡಾ.ಯು.ಆರ್. ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ
- ತೀರ್ಥಹಳ್ಳಿ ಪಟ್ಟಣ, ಹಳ್ಳಿಗಳಲ್ಲಿ ಆಚರಣೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು.
ತಹಶೀಲ್ದಾರ್ ಹಾಗೂ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಅಮೃತ್ ಆತ್ರೇಶ್ ಹೆಚ್.ಆರ್ ಧ್ವಜಾರೋಹಣ ಮಾಡಿದರು. ಪ.ಪಂ.ಅಧ್ಯಕ್ಷೆ ಶಬನಂ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ರಂಗಾಯಣ ನಿರ್ದೇಶಕ ಸಂದೇಶಜವಳಿ, ಅಧಿಕಾರಿಗಳಾದ ಪ ಪಂ ಮುಖ್ಯ ಅಧಿಕಾರಿ ಕುರಿಯ ಕೋಸ್, ಕ್ಷೇತ್ರ ಶಿಕ್ಷಣಾಧಿಕಾರಿ ಆನಂದಕುಮಾರ್, ತಾ ಪಂ ಕಾರ್ಯನಿರ್ವಹಣಾಧಿಕಾರಿ ಶೈಲಾ ಎನ್, ಡಿವೈಎಸ್ಪಿ ಶಾಂತವೀರ, ಡಾ. ಸುಧಾ ಇತರರು ಇದ್ದರು.
ಜನಪ್ರತಿನಿಧಿಗಳು, ಅಧಿಕಾರಿಗಳು, ಪಟ್ಟಣ ಪಂಚಾಯತ್ ಸದಸ್ಯರುಗಳು, ರಾಜ್ಯ ಮಟ್ಟದ ನಿಗಮ ಮಂಡಗಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಲ್ಲೂಕಿನ ಎಲ್ಲಾ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ನಾಗರೀಕರು, ಶಾಲಾ ಮಕ್ಕಳು, ಪೋಷಕರು ಪಾಲ್ಗೊಂಡಿದ್ದರು. ತೀರ್ಥಹಳ್ಳಿ ತಾಲೂಕಿನ ಅನೇಕ ಸಾಧಕರನ್ನು ಇದೇ ವೇಳೆ ಸನ್ಮಾನ ಮಾಡಲಾಯಿತು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತುಮಕೂರಲ್ಲಿ ಧ್ವಜಾರೋಹಣ ಮಾಡಬೇಕಾಗಿದ್ದರಿಂದ ತೀರ್ಥಹಳ್ಳಿಗೆ ಆಗಮಿಸಿಲ್ಲ.
ಎಲ್ಲಾ ಕಡೆ ಸ್ವಾತಂತ್ರ್ಯ ಸಂಭ್ರಮ
ತೀರ್ಥಹಳ್ಳಿಯ ಪಟ್ಟಣದ ಎಲ್ಲಾ ಕಡೆ ಸ್ವಾತಂತ್ರ್ಯ ಸಂಭ್ರಮ ಕಂಡು ಬಂದಿತು. ಅಂಗಡಿಗಳು, ಕಚೇರಿಗಳು, ಆಟೋ ಬಸ್ ನಿಲ್ದಾಣ ಸಿಂಗಾರಗೊಂಡಿದ್ದವು.