- ಸಾವರ್ಕರ್ ಭಾವಚಿತ್ರ ತೆರವು ಪ್ರಕರಣ: ಓರ್ವನಿಗೆ ಚಾಕು ಇರಿತ
- ಮತ್ತೆ ಮಲೆನಾಡ ನಗರದಲ್ಲಿ ಅಶಾಂತಿ..!
NAMMUR EXPRESS NEWS
ಶಿವಮೊಗ್ಗ ನಗರದ ಸಿಟಿಮಾಲ್ ನಲ್ಲಿ ಸಾವರ್ಕರ್ ಪೋಟೋ ವಿವಾದ ಬೆನ್ನಲ್ಲೆ ಸೋಮವಾರ ಮತ್ತೆ ವಿವಾದ ಭುಗಿಲೆದ್ದಿದೆ. ಸಾವರ್ಕರ್ ಭಾವಚಿತ್ರವನ್ನೂ ತೆರವುಗೊಳಿಸಿದರು ಎಂಬ ಕಾರಣಕ್ಕೇ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು
ಅಮೀರ್ ಅಹಮದ್ ಸರ್ಕಲ್ ಬಳಿ ಹಾಕಲಾಗಿದ್ದ ಸಾವರ್ಕರ್ ಪೋಟೋವನ್ನು ತೆಗಿದಿದ್ದು ವಿವಾದಕ್ಕೆ ಕಾರಣವಾಗಿದೆ.
ಭಾವಚಿತ್ರ ತೆಗೆದ ಕಾರಣಕ್ಕೆ ಎರಡು ಗುಂಪುಗಳು ಪರಸ್ಪರ ಜಮಾಯಿಸಿದ್ದರಿಂದ ಪೊಲೀಸರು ಗುಂಪು ಚದುರಿಸಲು ಲಾಠಿ ಪ್ರಹಾರ ಮಾಡಿದರು
ಭಾವಚಿತ್ರ ತೆಗೆದ ಕಾರಣಕ್ಕೆ ಎರಡು ಗುಂಪುಗಳು ಪರಸ್ಪರ ಜಮಾಯಿಸಿದ್ದರಿಂದ ಪೊಲೀಸರ ಗುಂಪು ಚದುರಿಸಲು ಲಾಠಿ ಪ್ರಹಾರ ಮಾಡಿದರು
ಇನ್ನೂ ಸ್ಥಳದಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಚಾಕು ಇರಿತ: ಮಲೆನಾಡು ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಗಲಾಟೆಯ ಬೆನ್ನಲ್ಲೇ ಮತ್ತಷ್ಟು ಗಲಾಟೆ ನಡೆಯುತ್ತಿದೆ. ಶಿವಮೊಗ್ಗದ ಬಜಾರ್ನಲ್ಲಿ ಓರ್ವನಿಗೆ ಚಾಕು ಇರಿಯಲಾಗಿದೆ. . ಶಿವಮೊಗ್ಗದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಹಿಂದೂಪರ ಸಂಘಟನೆ ಕಾರ್ಯ ಕಾರ್ಯಕರ್ತರು ವೀರ ಸಾವರ್ಕರ್ ಭಾವಚಿತ್ರ ಹಾಕಿದ್ದರು. ಇದಕ್ಕೆ ವಿರೋಧವಾಗಿ ಮುಸ್ಲಿಂ ಸಮುದಾಯದವರು ಟಿಪ್ಪು ಭಾವಚಿತ್ರ ಹಾಕಿದ್ದರು. ಆಗ ಗಲಾಟೆ ಶುರುವಾಗಿತ್ತು. ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಇದೇ ಗಲಾಟೆಯ ಮುಂದುವರೆದ ಭಾಗವಾಗಿ ಮನೆ ಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿಯಲಾಗಿದೆ ಅಂತ ಹೇಳಲಾಗುತ್ತಿದೆ.