ತುಂಬಿ ಹರಿಯುವ ಹಳ್ಳಕ್ಕೆ ಬಿದ್ದು ಮಗು ಸಾವು!
- ಉಡುಪಿ ಜಿಲ್ಲೆ ಬೈಂದೂರಲ್ಲಿ ನಡೆದ ಘಟನೆ
- ರಾಜ್ಯದಲ್ಲಿ ಈ ಮಳೆಗಾಲದಲ್ಲಿ ಅತೀ ಹೆಚ್ಚು ಸಾವು
- ಮಳೆಗಾಲ: ಮಕ್ಕಳ ಬಗ್ಗೆ ಹುಷಾರು ಹುಷಾರು..!
NAMMUR EXPRESS NEWS
ಬೈಂದೂರು: ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಒಂದನೇ ವಾರ್ಡ್ ನಲ್ಲಿ ಸನ್ನಿಧಿ(7) ಶಾಲೆಯಿಂದ ಮನೆಗೆ ಬರುವಾಗ ಕಾಲು ಸಂಕದಿಂದ ತುಂಬಿ ಹರಿಯುತ್ತಿರುವ ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದಾಳೆ. ಇದೀಗ ಈ ಘಟನೆ ಇಡೀ ದೇಶದ ಗಮನ ಸೆಳೆದಿದೆ.
ಸ.ಹಿ.ಪ್ರಾ ಶಾಲೆ ಚಪ್ಪರಿಕೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಸನ್ನಿಧಿ ಸಂಜೆ ಶಾಲೆ ಬಿಟ್ಟು ಮನೆಗೆ ಬರುವಾಗ ಬಿಜಮಕ್ಕಿ ಎಂಬಲ್ಲಿ ಕಾಲು ಸಂಕವಿದ್ದು ಈ ಕಾಲು ಸಂಕ ದಾಟುವಾಗ ಮಗು ಆಯಾತಪ್ಪಿ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದೆ. ಈ ಸಾವಿಗೆ ಹೋಣೆಗಾರರು ಯಾರು? ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ಕೊಡುವ ರಾಜಕಾರಣಿಗಳ ಅಥವಾ ಕೋಟಿ ಕೋಟಿ ಹಣ ಮಾಡುವ ಕೆಲವು ಭ್ರಷ್ಟ ಅಧಿಕಾರಿಗಳ ವಿರುದ್ಧ ಜನ ಇದೀಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ ಸಂಕಷ್ಟ ಯಾರಿಗೆ ಬೇಕು..?
2018ರಲ್ಲಿ ಈ ಭಾಗದ ಕಷ್ಟ ಸಮಸ್ಯೆಗಳನ್ನು ಸಾಕಸ್ಟು ವರದಿಗಳನ್ನು ಮಾಡಿ ಜನಪ್ರತಿನಿಧಿಗಳ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದರೂ ಈವರೆಗೆ ಬೇಡದ ಕಾಮಗಾರಿಗೆ, ಕಮಿಷನ್ ಹಣದ ಹಿಂದೆ ಬಿದ್ದಿರುವ ರಾಜಕಾರಣಿಗಳು ಈ ಬಗ್ಗೆ ಗಮನ ಕೊಡುತ್ತಿಲ್ಲ. ಈ ಬಗ್ಗೆ ಈಗ ಬೈಂದೂರು, ಉಡುಪಿ ಭಾಗದಲ್ಲಿ ಜನ ಹೋರಾಟ ಶುರುವಾಗಿದೆ.