ಭಾರತದಲ್ಲೇ ಮಂಗಳೂರಿನ ಅರ್ಜುನ್ ಸಾಧನೆ!
– ನೀಟ್ ಪರೀಕ್ಷೆಯಲ್ಲಿ ಮಂಗಳೂರಿನ ಅರ್ಜುನ್ ದೇಶಕ್ಕೆ ಮೊದಲ ರ್ಯಾಂಕ್
– ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನ ಅರ್ಜುನ್ ಕಿಶೋರ್ 720ರಲ್ಲಿ 720 ಅಂಕ ಸಾಧನೆ
NAMMUR EXPRESS NEWS
ಮಂಗಳೂರು: ನೀಟ್ ಫಲಿತಾಂಶ ಹೊರಬಿದ್ದಿದ್ದು ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನ ಅರ್ಜುನ್ ಕಿಶೋರ್ 720ರಲ್ಲಿ 720 ಅಂಕಗಳೊಂದಿಗೆ ದೇಶ ಹಾಗೂ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.
ಮೈಸೂರು ಮೂಲದ ಅರ್ಜುನ್ ಮಂಗಳೂರಿನ ವಳಚ್ಚಿಲ್ನಲ್ಲಿರುವ ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಇನ್ನು ಅರ್ಜುನ್ ಅವರ ಹೆತ್ತವರು ಕೂಡ ವೈದ್ಯರಾಗಿದ್ದಾರೆ.
ನಿರಂತರ ಸಾಧನೆಯ ಫಲ
ನಿರಂತರ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಎಕ್ಸ್ಪರ್ಟ್ ಕಾಲೇಜಿನ ಬೋಧಕ ವೃಂದ, ಪೋಷಕರಿಂದ ಪ್ರೋತ್ಸಾಹ ಸಿಕ್ಕಿದೆ. ಮುಂದೆ ಸರ್ಜನ್ ಆಗುವ ಆಸೆ ಹೊಂದಿರುವುದಾಗಿ ತಮ್ಮ ಫಲಿತಾಂಶದಲ್ಲಿನ ಸಾಧನೆ ಬಗ್ಗೆ ಅರ್ಜುನ್ ಹೇಳಿದ್ದಾರೆ.
ರಾಜ್ಯದ ಮೂವರು ವಿದ್ಯಾರ್ಥಿಗಳ ಸಾಧನೆ!
ಅರ್ಜುನ್ ಕಿಶೋರ್ ಸೇರಿದಂತೆ ರಾಜ್ಯದ ಮೂವರು ನೀಟ್ನಲ್ಲಿ ದೇಶಕ್ಕೆ ಅಗ್ರ ರ್ಯಾಂಕ್ ಪಡೆದುಕೊಂಡಿದ್ದಾರೆ. ಬೆಂಗಳೂರಿನ ವಿ. ಕಲ್ಯಾಣ್, ಶ್ರೇಯಸ್ ಜೋಸೆಫ್ ಈ ಸಾಧನೆ ಮಾಡಿರುವ ಕರ್ನಾಟಕದ ಮತ್ತಿಬ್ಬರು ವಿದ್ಯಾರ್ಥಿಗಳು. ದೇಶದಲ್ಲಿ 14 ವಿದ್ಯಾರ್ಥಿನಿಯರ ಸಹಿತ ಒಟ್ಟು 67 ವಿದ್ಯಾರ್ಥಿಗಳು ಮೊದಲ ರ್ಯಾಂಕ್ ಹಂಚಿಕೊಂಡಿದ್ದಾರೆ.
ಕರಾವಳಿ ಕಾಲೇಜುಗಳ ಸಾಧನೆ
ಕರಾವಳಿಯ ಎಕ್ಸ್ಪರ್ಟ್, ಕಾರ್ಕಳದ ಕ್ರಿಯೇಟಿವ್, ಮೂಡುಬಿದಿರೆಯ ಆಳ್ವಾಸ್, ವೈಬ್ರ್ಯಾಂಟ್, ಗುರುವಾಯನಕೆರೆ ಎಕ್ಸಲ್, ಮೂಡುಬಿದಿರೆ ಎಕ್ಸಲೆಂಟ್ ಸೇರಿ ಕರಾವಳಿಯ ಹತ್ತಾರು ಕಾಲೇಜುಗಳ ವಿದ್ಯಾರ್ಥಿಗಳು ನೀಟ್ ಹಾಗೂ ಸಿಇಟಿಯಲ್ಲಿ ಸಾಧನೆ ಮಾಡಿದ್ದಾರೆ