NAMMUR EXPRESS NEWS
ಹೆಬ್ರಿ: ಕಠಿಣ ಪರಿಶ್ರಮ, ಸಮಯಪಾಲನೆ ಹಾಗೂ ಏಕಾಗ್ರತೆಯಿಂದ ವಿಷಯ ಮನನ ಮಾಡಿದಾಗ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಲು ಸಾಧ್ಯ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಉಪನ್ಯಾಸಕ ಡಾ. ಸಿ.ಕೆ. ಮಂಜುನಾಥ್ ಹೇಳಿದರು.
ಹೆಬ್ರಿಯ ಎಸ್ಆರ್ ಪದವಿಪೂರ್ವ ಕಾಲೇಜಿನಲ್ಲಿ ನೀಟ್, ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಡೆದ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಸ್ಆರ್ ಸಮೂಹ ಶಿಕ್ಷಣ ಸಂಸ್ಥೆಯ
ಅಧ್ಯಕ್ಷ ಎಚ್. ನಾಗರಾಜ ಶೆಟ್ಟಿ ಅಧ್ಯಕ್ಷತೆ ಮಾತನಾಡಿ ‘ವಿದ್ಯಾರ್ಥಿಗಳ ಕೌಶಲ, ಪ್ರತಿಭೆಯನ್ನು ಗುರುತಿಸಿ ಹೊರ ತೆಗೆಯುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಹೆತ್ತವರ ತ್ಯಾಗವನ್ನು ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಂಡು ಓದಿನತ್ತ ಹೆಚ್ಚು ಗಮನ ನೀಡಬೇಕು. ವಿದ್ಯಾರ್ಥಿಗಳು ಸ್ವಪ್ರಯತ್ನದಿಂದಲೂ ಉತ್ತಮ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಉಪನ್ಯಾಸಕರು ಸಿದ್ಧರಾಗಿರುತ್ತಾರೆ’ ಎಂದರು.
ಉಪ ಪ್ರಾಂಶುಪಾಲ ಗುರುಪ್ರಸಾದ್ ಭಟ್, ನೀಟ್ ಸಿಇಟಿ ಸಮನ್ವಯಾಧಿಕಾರಿ ಹರಿಪ್ರಸಾದ್ ಇದ್ದರು. ಉಪನ್ಯಾಸಕಿ ಭಾಗ್ಯಶ್ರೀ ಐತಾಳ್ ನಿರೂಪಿಸಿದರು.
Related Posts
Add A Comment