- ಮೇ 19ರಂದು ಫಲಿತಾಂಶ : ವಿದ್ಯಾರ್ಥಿಗಳಿಗೆ ಕಾತುರ
- ಭಯ ಬೇಡ, ಸೋತವರೇ ಗೆದ್ದಿದ್ದು ಹೆಚ್ಚು…!
NAMMUR EXPRESS NEWS
ಬೆಂಗಳೂರು: 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಗುರುವಾರ (ಮೇ 19) ಪ್ರಕಟವಾಗಲಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗುರುವಾರ ಮಧ್ಯಾಹ್ನ 12.30ಕ್ಕೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಫಲಿತಾಂಶ ಪಕಟಿಸಲಿದ್ದಾರೆ. ಬಳಿಕ ವಿವಿಧ ವೆಬ್ಸೈಟ್ಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ನಡೆದಿದ್ದ ಪರೀಕ್ಷೆಯಲ್ಲಿ ರಾಜ್ಯದ ಒಟ್ಟು 15,387 ಶಾಲೆಗಳ 8.73 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಫಲಿತಾಂಶ ನೋಡೋದು ಹೇಗೆ?
ಫಲಿತಾಂಶವನ್ನು http://kseeb. kar.nic.in. http://sslc. karnataka.gov.in, http:// karresults.nic.in ವೆಬ್ ಸೈಟ್ಗಳಲ್ಲಿ ವೀಕ್ಷಿಸಬಹುದಾಗಿದೆ. ನಂತರ ಮೊಬೈಲ್ ಸಂಖ್ಯೆಗೂ ಸಂದೇಶ ತಲುಪಲಿದೆ.
ಭಯ ಬೇಡ, ಸೋತವನೆ ಗೆಲ್ಲೋದು!
ಫಲಿತಾಂಶ ಏನೇ ಇರಲಿ, ಭಯ ಬೇಡ, ಕಡಿಮೆ ಅಂಕ ಬಂದರೆ, ಮೊದಲಿಗರರಾಗದಿದ್ದರೆ ಆತಂಕ ಬೇಡ, ಪ್ರಪಂಚದಲ್ಲಿ ಸೋತವನೆ ಗೆದ್ದಿರೋದು ಹೆಚ್ಚು. ಹಾಗಾಗಿ ಮತ್ತೆ ಹೆಚ್ಚಿನ ಪ್ರಯತ್ನ ಮಾಡಿ.
ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು