ತೀರ್ಥಹಳ್ಳಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ 100% ಫಲಿತಾಂಶ
– 2024-25ನೇ ಸಾಲಿನ ದಾಖಲಾತಿ ಆರಂಭ
– ಆಂಗ್ಲ ಮಾಧ್ಯಮದಲ್ಲಿ ರಜತ, ಕನ್ನಡ ಮಾಧ್ಯಮದಲ್ಲಿ ಸಿಂಚನ ಟಾಪರ್
– SSLC ಪರೀಕ್ಷೆ 86 ವಿದ್ಯಾರ್ಥಿಗಳು ಬರೆದಿದ್ದು 86 ಮಂದಿ ಕೂಡ ಉತ್ತೀರ್ಣರಾಗಿದ್ದಾರೆ.
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಸರ್ಕಾರಿ ಬಾಲಿಕಾ ಪ್ರೌಢಶಾಲೆ 2024ನೇ ಸಾಲಿನ ಎಸ್ .ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಶೇ 100% ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಅತ್ಯುನ್ನತ ಶ್ರೇಣಿ 17, ಉನ್ನತ ಶ್ರೇಣಿ 52 ವಿದ್ಯಾರ್ಥಿಗಳು ಪಡೆದಿದ್ದಾರೆ. ಶಾಲೆಯ ಅತೀ ಹೆಚ್ಚು ಅಂಕವನ್ನು ಆಂಗ್ಲ ಮಾಧ್ಯಮದಲ್ಲಿ ರಜತ, ಡಿ 615. (ಶೇ98.4.%,) ಕನ್ನಡ ಮಾಧ್ಯಮದಲ್ಲಿ ಸಿಂಚನ ಡಿ 572. ಶೇ.91.52.% ಪಡೆದಿದ್ದಾರೆ. ಸರ್ಕಾರಿ ಬಾಲಕಿಯರ ಪ್ರೌಢಶಾಲೆ ತೀರ್ಥಹಳ್ಳಿ 2024-25ರ ಶಾಲಾ ದಾಖಲಾತಿ ಪ್ರಾರಂಭವಾಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯ ಪಲಿತಾಂಶದಲ್ಲಿ ಗುಣಾತ್ಮಕ ಪಲಿತಾಂಶ ಬಂದಿದೆ.
ಶಾಲೆಯಲ್ಲಿ ದೊರೆಯುವ ಸೌಲಭ್ಯಗಳು
ನುರಿತ ಶಿಕ್ಷಕರಿಂದ ಇಂಗ್ಲಿಷ್ ಬೋಧನೆ, ಅನುಭವಿ ಶಿಕ್ಷಕರು, ವಿದ್ಯಾರ್ಥಿ ವೇತನ, ಕ್ಷೀರ ಭಾಗ್ಯ ಯೋಜನೆ , ಉಚಿತ ಪಠ್ಯ ಪುಸ್ತಕ, ಪ್ರತಿಭಾ ಕಾರಂಜಿ, ಎರಡು ಜೊತೆ ಉಚಿತ ಸಮವಸ್ತ್ರ, ಸ್ಮಾರ್ಟ್ ಕ್ಲಾಸ್, ಉಚಿತ ಶೂ ಸಾಕ್ಸ್, ಉಚಿತ ವೈದ್ಯಕೀಯ ತಪಾಸಣೆ, ಅಕ್ಷರ ದಾಸೋಹ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಕ್ರೀಡೆಗಳಿಗೆ ಉತ್ತೇಜನ, ಕಂಪ್ಯೂಟರ್ ಶಿಕ್ಷಣ ಈ ರೀತಿಯ ಸೌಲಭ್ಯಗಳು ದೊರೆಯುತ್ತದೆ.
ಉಪ ಪ್ರಾಂಶುಪಾಲರು, ಶಿಕ್ಷಕ/ಸಿಬ್ಬಂದಿವರ್ಗ, ಅಧ್ಯಕ್ಷರು ಮತ್ತು ಸದಸ್ಯರು ಎಸ್.ಡಿ.ಎಂ.ಸಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ತೀರ್ಥಹಳ್ಳಿ