- ಮೇ 16ರಂದು ಶಾಲೆಗಳು ಪುನರಾರಂಭ
- ಕರೋನಾ ಮಾರ್ಗಸೂಚಿ ಮರೆತ ಸರ್ಕಾರ..!?
NAMMUR EXPRESS NEWS
ಬೆಂಗಳೂರು: ಕರ್ನಾಟಕದಲ್ಲಿ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆಗೊಂಡಿದ್ದು ಮೇ 16ರಂದು ಶಾಲೆಗಳು ಆರಂಭವಾಗಲಿವೆ.
ಶೈಕ್ಷಣಿಕ ವರ್ಷದಲ್ಲಿ 60 ಸರ್ಕಾರಿ ರಜಾ ದಿನಗಳಿದ್ದು 270 ದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ದಸರಾಗೆ 14 ದಿನ ರಜೆ ಘೋಷಿಸಲಾಗಿದೆ. ಪಠ್ಯೇತರ ಚಟುವಟಿಕೆಗಳಿಗೆ 10 ದಿನ, ಪರೀಕ್ಷೆ ಮತ್ತು ಸಿಸಿ ಮೌಲ್ಯಂಕ ವಿಶ್ಲೇಷಣೆ 12 ದಿನ ನೀಡಲಾಗಿದ್ದು ಪ್ರಸಕ್ತ ವರ್ಷದ ಬೋಧನಾ ಕಲಿಕೆ ಪ್ರಕ್ರಿಯೆ 228 ದಿನ ಇರಲಿದೆ.
ಕರೋನಾ ಕಾರಣದಿಂದ 3 ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸಲು ಆಗಿರಲಿಲ್ಲ, ಶಾಲಾ ಕರ್ತವ್ಯದ ಮೊದಲನೆ ಅವಧಿ ಮೇ 16ರಿಂದ ಅ.2 ರ ವರೆಗೆ ಇರಲಿದೆ ಎರಡನೇ ಅವಧಿ ಅ.17 ನಿಂದ 2023ರ ಎ.10 ರ ವರೆಗೆ ಇರಲಿದೆ. ಅ.3 ರಿಂದ 16 ರವರೆಗೆ ದಸರಾ ರಜೆ ಇರಲಿದ್ದು, ಎ.11 ರಿಂದ ಮೇ 28ರವರೆಗೆ ಬೇಸಿಗೆ ರಜೆ ಇರಲಿದೆ.
ಸರ್ಕಾರದ ನಿಯಮವೇನು..?
ಮಕ್ಕಳ ಶಾಲಾ ಪ್ರವೇಶಾತಿಯನ್ನು ಮೇ 16ಕ್ಕೆ ಆರಂಭಿಸಿ, ಜೂ.31ರೊಳಗೆ ಮುಕ್ತಾಯ ಮಾಡಬೇಕು. ಬೌದ್ಧಿಕವಾಗಿ ಪ್ರಾರಂಭಿಸಲು ಪರಿಸ್ಥಿತಿ ಸಹಕಾರಿಯಾಗದಿದ್ದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು. ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ಮೇಳ ಆಯೋಜಿಸಬೇಕು. ಮುಷ್ಕರ ಅಥವಾ ಇನ್ನಿತರ ಕಾರಣಗಳಿಂದ ಶಾಲೆಗಳಿಗೆ ರಜೆ ಘೋಷಣೆಯದಲ್ಲಿ, ಆ ಅವಧಿಯ ಶಾಲಾ ಕರ್ತವ್ಯದ ದಿನಗಳನ್ನು ಮುಂದಿನ ರಜಾದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಶಾಲೆಗಳನ್ನು ನಡೆಸಲಾಗುತ್ತದೆ. ಆ ಮೂಲಕ ನಿಗದಿಪಡಿಸಿದ ಶಾಲಾ ಕರ್ತವ್ಯದ ದಿನಗಳು ಕಡಿಮೆಯಾಗದಂತೆ ಸರಿದೂಗಿಸಿಕೊಳ್ಳಲು ಆಯಾ ಜಿಲ್ಲಾ ಉಪನಿರ್ದೇಶಕರು ಕ್ರಮವಹಿಸಬೇಕು. ಸಾವಿತ್ರಿಬಾಯಿ ಫುಲೆ, ವಿವೇಕಾನಂದ ಜಯಂತಿ ಕನಕದಾಸ ಜಯಂತಿ ಸೇರಿ ವಿವಿಧ ದಾರ್ಶನಿಕರ ಜಯಂತಿ ಆಚರಣೆಗೆ ಆದೇಶ ನೀಡಲಾಗಿದೆ.
ಹೊಸ ವೇಳಾಪಟ್ಟಿಗೆ ಪಟ್ಟು!
ಅಕ್ಟೋಬರ್ ಅವಧಿಯಲ್ಲಿ 22 ದಿನ ಬೋಧನೆ ಮಾಡಬೇಕು, ಮಧ್ಯವಾರ್ಷಿಕ ಪರೀಕ್ಷೆ ನಡೆಸಬೇಕು ಎಂದು ಹೇಳಲಾಗಿದೆ, ಆದರೆ ದಸರಾ ಮತ್ತು ದೀಪಾವಳಿ ರಜೆ 16 ದಿನಗಳು ಇರಲಿದ್ದು ಎಲ್ಲಿಂದ ಬೋಧನೆ ಮಾಡಲು ಸಾಧ್ಯವೆಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಪ್ರಶ್ನಿಸಿವೆ. ಶಿಕ್ಷಣ ಇಲಾಖೆ ವೇಳಾಪಟ್ಟಿ ರೂಪಿಸುವಾಗ ಎಚ್ಚರಿಕೆವಹಿಸಬೇಕು, ಅವರೇ ರಜೆ ನೀಡಿ ಪಾಠವನ್ನು ಮಾಡಿ ಎಂದರೆ ಹೇಗೆ ಮಾಡಲು ಸಾಧ್ಯ? ತಕ್ಷಣ ಪರಿಷ್ಕೃತ ವೇಳಾಪಟ್ಟಿ ರೂಪಿಸಬೇಕೆಂದು ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಆಗ್ರಹಿಸಿದ್ದಾರೆ.
ಕರೋನಾ ಮರೆತ ಸರ್ಕಾರ
ಕರೋನಾ 4ನೇ ಅಲೆ ಸುಳಿವು ಇದೆ. ಆದ್ರೆ ಸರ್ಕಾರ ಎಲ್ಲಿಯೂ ಎಚ್ಚರ ವಹಿಸಿದಂತೆ ಕಾಣುತ್ತಿಲ್ಲ. ಮಕ್ಕಳ ಬಗ್ಗೆ ಎಚ್ಚರ ಅಗತ್ಯ.