- ಮಾ.13ರಿಂದ ಪರೀಕ್ಷೆಗಳು ಆರಂಭ: ಮಕ್ಕಳ ಸಿದ್ಧತೆ
- ಧರ್ಮಸ್ಥಳ, ಉಡುಪಿಯಲ್ಲಿ ಉಚಿತ ಸಾಮೂಹಿಕ ವಿವಾಹ
NAMMUR EXPRESS NEWS
ಬೆಂಗಳೂರು: ದಿನಾಂಕ 06-03-2023ಯ ಸೋಮವಾರದಿಂದ ದಿನಾಂಕ 10- 03-2023ರ ಶುಕ್ರವಾರದವರೆಗೆ ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಿರ್ವಹಿಸಲಾಗುತ್ತದೆ. ವಿಶೇಷ ಶಾಳೆಗಳ ವಿದ್ಯಾರ್ಥಿಗಳಿಗೆ ಮಂಡಲಿಯಿಂದ ಸರಬರಾಜು ಮಾಡುವ ಪ್ರಶೋತ್ತರ ಪತ್ರಿಕೆಗಳನ್ನೇ ಬಳಸಿ, ಶಾಲಾ ಹಂತದಲ್ಲಿ ಹಿಂದಿನ ಸಾಲುಗಳಲ್ಲಿ ನಡೆಸಿದಂತೆ ಮೌಲ್ಯಾಂಕನ ನಡೆಸುವುದು ದು ತಿಳಿಸಿದೆ. ಉಳಿದಂತೆ ಮಾ.13ರಿಂದ 18ರವರೆಗೆ ವಿಷಯವಾರು ಪರೀಕ್ಷೆಗಳು ನಡೆಯಲಿವೆ ಎಂದು ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಂಗ್ರೆಸ್ ಎಂಪಿ, ಎಂಎಲ್ಎಗಳ ತಿಂಗಳ ವೇತನ ಕಡ್ಡಾಯ ದೇಣಿಗೆ
ನವದೆಹಲಿ: ಪಕ್ಷದ ಸಂಸದರು, ಶಾಸಕರು ಪ್ರತಿ ವರ್ಷ ತಮ್ಮ ಒಂದು ತಿಂಗಳ ವೇತನವನ್ನು ಪಕ್ಷದ ನಿಧಿಗೆ ದೇಣಿಗೆ ನೀಡುವುದನ್ನು ಕಾಂಗ್ರೆಸ್ ಕಡ್ಡಾಯಗೊಳಿಸಿದೆ. ಇದಲ್ಲದೆ ಮನೆಮನೆಗೆ ತೆರಳಿ ಹಾಗೂ ಆನ್ಲೈನ್ ಅಭಿಯಾನದ ಮೂಲಕ ಹಣ ಸಂಗ್ರಹಿಸಿ ಪಕ್ಷದ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಅದು ನಿರ್ಧರಿಸಿದೆ. ಪಕ್ಷದ ಪ್ರತಿಯೊಬ್ಬ ಸಾಮಾನ್ಯ ಸದಸ್ಯರಿಗೆ ಕೂಡ ದೇಣಿಗೆ ಮೊತ್ತವನ್ನು ನಿಗದಿಪಡಿಸಲಾಗಿದೆ. ಪ್ರತಿ ತೆರಿಗೆದಾರ ಸದಸ್ಯ ವಾರ್ಷಿಕ 1,000 ರೂಪಾಯಿ ನೀಡಬೇಕು. ಸರಪಂಚ್, ಗ್ರಾಮ ಪಂಚಾಯತಿ ಮುಖ್ಯಸ್ಥರು, ಬ್ಲಾಕ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯಸ್ಥರು ಕೂಡ ತಮಗೆ ಬರುವ ಗೌರವ ಧನವನ್ನು ಪಕ್ಷದ ನಿಧಿಗೆ ನೀಡುವಂತೆ ಕಡ್ಡಾಯಗೊಳಿಸಲಾಗಿದೆ.
ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನಿಂದ
ಉಚಿತ ಸಾಮೂಹಿಕ ವಿವಾಹ
ಮೊಗವೀರ ಕುಲರತ್ನ, ಕೊಡುಗೈ ದಾನಿಗಳಾದ ಉಡುಪಿ ಅಂಬಲಪಾಡಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಅವರು ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಸಹಕಾರದಲ್ಲಿ ಹಮ್ಮಿಕೊಂಡಿರುವ 14ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭವು ಮೇ 3ರ ಬುಧವಾರ ಸಂಜೆ 6-40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನೆರವೇರಲಿದೆ. ಕಳೆದ 13 ವರ್ಷಗಳಲ್ಲಿ 355 ಜೋಡಿಗಳ ವಿವಾಹ ನೆರವೇರಿಸಲಾಗಿದೆ. ಈ ಉಚಿತ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲಿಚ್ಚಿಸುವ ಮೊಗವೀರ ಸಮಾಜದ ಬಂಧುಗಳು ಉಡುಪಿ ಜಿಲ್ಲೆ ಮೊಗವೀರ ಯುವ ಸಂಘಟನಾ ಕಛೇರಿ (08202532099) ಮೊ:9844044848 ಹಾಗೂ ಆಯಾಯ ಊರಿನ ಮೊಗವೀರ ಮಹಾಜನ ಸಂಘದಕಛೇರಿಯನ್ನು ಸಂಪರ್ಕಿಸಲುಕೋರಿದೆ
ಮೇ.3: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಡ ಕುಟುಂಬಗಳ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಕಳೆದ 51 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮ ಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹದ ಪುಣ್ಯ ಕಾರ್ಯವನ್ನು ನೆರವೇರಿಸುತ್ತಾ ಬರುತ್ತಿದ್ದಾರೆ. ಇದುವರೆಗೆ 12576 ಜೋಡಿಗಳ ವಿವಾಹವು ಶ್ರೀ ಕ್ಷೇತ್ರದಲ್ಲಿ ನಡೆದಿದ್ದು 2023ನೇ ಸಾಲಿನ ಉಚಿತ ಸಾಮೂಹಿಕ ವಿವಾಹ ಸಮಾರಂಭವು ಮೇ 3ರ ಬುಧವಾರ ಸಂಜೆ 6-40ರ ಗೋಧೂಳಿ ಲಗ್ನ
ಸುಮುಹೂರ್ತದಲ್ಲಿ ನೆರವೇರಲಿದೆ. ಇಲ್ಲಿ ವಿವಾಹವಾಗುವ ವರನಿಗೆ ಧೋತಿ, ಶಾಲು, ಅಂಗಿ ಹಾಗೂ ವಧುವಿಗೆ ಸೀರೆ, ರವಿಕೆಕಣ ಮತ್ತು ಮಂಗಲ ಸೂತ್ರವನ್ನು ನೀಡಲಾಗುತ್ತದೆ. ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲು ಇಚ್ಚಿಸುವವರು ಏಪ್ರಿಲ್ 24ರೊಳಗೆ ಹೆಸರು ದಾಖಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 08256-266644 ಮತ್ತು 9663 464648 ಸಂಪರ್ಕಿಸಬಹುದು. ಹಾಗೂ ಆಯಾಯ ಊರುಗಳಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಬಿ.ಸಿ ಟ್ರಸ್ಟ್ ಯೋಜನಾ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.