ಮಂಜುಬಾಬು ಪೂಜಾರ್ ಅವರಿಗೆ ಅತ್ಯುತ್ತಮ ಮುಖ್ಯ ಶಿಕ್ಷಕ ಪ್ರಶಸ್ತಿ
– ತೀರ್ಥಹಳ್ಳಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ
ಮಲೆನಾಡಿನ ಸರ್ಕಾರಿ ಶಾಲೆಗಳ ಸಬಲೀಕರಣದ ಕ್ರಾಂತಿಗೆ ನಾಂದಿ ಹಾಡಿದ ಮಲೆನಾಡು ಮೆಚ್ಚಿದ ಶಿಕ್ಷಕ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಅವರಿಗೆ ಶೈಕ್ಷಣಿಕ ನಾಯಕತ್ವ, ಅತ್ಯುತ್ತಮ ಆಡಳಿತ, ಶಾಲೆಯ ಸಮಗ್ರ ಪ್ರಗತಿಗೆ ಶ್ರಮಿಸಿದ್ದಕ್ಕಾಗಿ ತೀರ್ಥಹಳ್ಳಿ ತಾಲೂಕಿನ ಅತ್ಯುತ್ತಮ ಪ್ರೌಢಶಾಲಾ ಮುಖ್ಯ ಶಿಕ್ಷಕ ಪ್ರಶಸ್ತಿಯನ್ನು ಶಿಕ್ಷಣ ಇಲಾಖೆ ನೀಡಿ ಗೌರವಿಸಿದೆ.
ಮಂಜು ಬಾಬು ಅವರ ಬದ್ದತೆ, ದೂರದೃಷ್ಟಿ, ಆಲೋಚನೆ, ಕಠಿಣ ಶ್ರಮ, ಅವರ ಶಾಲೆಯ ಶಿಕ್ಷಕರ ತಂಡದ ಕಾರ್ಯಕ್ಕೆ, ಊರಿನವರ, ಪೋಷಕರ, ಮಕ್ಕಳ, ದಾನಿಗಳ, ಸಹಕಾರಕ್ಕೆ, ಪ್ರೋತ್ಸಾಹ ಕ್ಕೆ ಸಿಕ್ಕ ಗೌರವ ಇದಾಗಿದೆ. ಈಗಾಗಲೇ ನಮ್ಮೂರ್ ಎಕ್ಸ್ಪ್ರೆಸ್ ಎಕ್ಸ್ಲೆನ್ಸ್ ಅವಾರ್ಡ್, ಪ್ರಜಾವಾಣಿ ಪ್ರಶಸ್ತಿ ಸೇರಿ ಹತ್ತಾರು ಪ್ರಶಸ್ತಿಯನ್ನು ಅವರು ಗಳಿಸಿದ್ದಾರೆ.
ಸೀಬಿನಕೆರೆ ಶಾಲೆಗೆ ಉತ್ತಮ ಶಾಲೆ ಪ್ರಶಸ್ತಿ
2023-24 ನೇ ಸಾಲಿನ ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಉತ್ತಮ ಶಾಲೆ ಪ್ರಶಸ್ತಿಗೆ ಸೀಬಿನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ. ಶಿಕ್ಷಕರ ದಿನದಂದು ಈ ಪ್ರಶಸ್ತಿಯನ್ನು ಶಾಲೆಯ ಶಿಕ್ಷಕರಿಗೆ ವಿತರಣೆ ಮಾಡಲಾಯಿತು.
ಎಸ್.ಡಿ.ಎಂ.ಸಿ ಪದಾಧಿಕಾರಿಗಳು,,ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದದವರು, ದಾನಿಗಳ ಸಹಕಾರದಲ್ಲಿ ಈ ಶಾಲೆ ಹೊಸ ಸಾಧನೆ ಮಾಡುತ್ತಿದೆ.
ಆಗುಂಬೆ ಎಸ್.ವಿ. ಎಸ್ ಶಾಲೆ ಚಾಂಪಿಯನ್!
ಎಸ್, ವಿ,ಎಸ್ ಅನುದಾನಿತ ಪ್ರೌಢಶಾಲೆ ಆಗುಂಬೆ 2023- 24ನೇ ಸಾಲಿನ ವಲಯ ಮತ್ತು ತಾಲೂಕು ಮಟ್ಟದ ಬಾಲಕರ ಕ್ರೀಡಾಕೂಟದಲ್ಲಿ ಭಾಗವಹಿಸಿ, ವಲಯ ಮಟ್ಟದಲ್ಲಿ ಬಾಲ್ ಬ್ಯಾಡ್ಮಿಂಟನ್ ಪ್ರಥಮ,ಕಬ್ಬಡಿ ಪ್ರಥಮ,ತ್ರೋಬಾಲ್ ದ್ವಿತೀಯ ಸ್ಥಾನ ಗಳಿಸಿ,ಹಾಗೂ ಕಬ್ಬಡಿಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಬಾಲಕರ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಶಾಲಾ ವಿದ್ಯಾರ್ಥಿಗಳ ಈ ಸಾಧನೆಯನ್ನು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಜಿತೇಂದ್ರ ಕುಮಾರ್ ಟಿ.ಆರ್. ಇವರನ್ನು ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು,ಎಸ್ಡಿಎಂಸಿಯ ಅಧ್ಯಕ್ಷರು ಮತ್ತು ಸದಸ್ಯರು, ಶಾಲಾ ಆಡಳಿತ ಮಂಡಳಿ, ಶಾಲಾ ಪೋಷಕವೃಂದ, ಬಿಸಿಎಂ ಹಾಸ್ಟೆಲಿನ ಮೇಲ್ವಿಚಾರಕರು ಮತ್ತು ಸಿಬ್ಬಂದಿ ವರ್ಗ, ಹಾಗೂ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಮಂಡಗದ್ದೆ ಹೋಬಳಿಯಲ್ಲಿ ದಬ್ಬಣಗದ್ದೆ ಉತ್ತಮ ಶಾಲೆ
2023-24 ನೇ ಸಾಲಿನ ಮಂಡಗದ್ದೆ ಹೋಬಳಿ ಮಟ್ಟದ ಉತ್ತಮ ಶಾಲೆ ಪ್ರಶಸ್ತಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಬ್ಬಣಗದ್ದೆ ಆಯ್ಕೆಯಾಗಿದೆ. ದಬ್ಬಣಗದ್ದೆ ಗ್ರಾಮದ ಸಮಸ್ತ ಗ್ರಾಮಸ್ಥರು/ ಶಾಲಾ ಮುಖ್ಯ ಶಿಕ್ಷಕರು/ ಶಿಕ್ಷಕರು./ಅತಿಥಿ ಶಿಕ್ಷಕಿಯರು/ಪೋಷಕರು/SDMC /ದಾನಿಗಳು/ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು/ವಿವಿಧ ಸಂಘಗಳು/ವಿಧ್ಯಾರ್ಥಿಗಳು/ಅಡುಗೆಯವರು/ಸಲಹೆ ಸಹಕಾರ ನೀಡಿದ ಇಲಾಖಾ ಅಧಿಕಾರಿಗಳು, ಮಕ್ಕಳು, ಸರ್ವರಿಗೂ ಮುಖ್ಯ ಶಿಕ್ಷಕರಾದ ಆನಂದ್ ಕುಮಾರ್ ಧನ್ಯವಾದ ಹೇಳಿದ್ದಾರೆ.