ಸಿ.ಬಿ.ಎಸ್. ಇ. ಪರೀಕ್ಷೆಯಲ್ಲೂ ಅಮೃತ ಭಾರತಿ ಸಾಧನೆ
– ಅಮೃತ ಭಾರತಿ ವಿದ್ಯಾಕೇಂದ್ರ ಶೇ.100 ಫಲಿತಾಂಶ ದಾಖಲು
– 90ರಲ್ಲಿ ,20 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್,59 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ
NAMMUR EXPRESS NEWS
ಹೆಬ್ರಿ: ಹೆಬ್ರಿಯ ಪ್ರತಿಷ್ಠಿತ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಕೇಂದ್ರ ಸಿ. ಬಿ.ಎಸ್. ಇ. ಪರೀಕ್ಷಾ ಫಲಿತಾಂಶ ದಲ್ಲಿ 100 ಶೇಕಡಾದ ಅಮೋಘ ಸಾಧನೆ ಮಾಡಿದೆ. ಸಂಸ್ಥೆಯ ಅನನ್ಯ ಸಿ.ಕೆ. 96.6 ಶೇಕಡಾ ಸಾಧನೆಯೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆಡಿದ್ದಾಳೆ. ಪ್ರಖ್ಯಾತ ಪೀ. ನಾಯಕ್ ಶೇ.95.6 , ಪ್ರಶುಲ್ ಸಂತೋಷ್ ಶೆಟ್ಟಿ ಶೇ.94 , ಶ್ರೀದತ್ತ ಶೇ.91.4 , .ಪ್ರಾಪ್ತಿ ಶೇ.91 ನಿಹಾಲ್ ಶೇ 90 ಶೇಕಡಾ ಅಂಕ ಗಳನ್ನು ಗಳಿಸಿರುತ್ತಾರೆ. ಪರೀಕ್ಷೆ ಬರೆದ 90 ವಿದ್ಯಾರ್ಥಿಗಳಲ್ಲಿ ,20 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ,(ಡಿಸ್ಟಿಂಕ್ಷನ್) 59 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಯೊಂದಿಗೆ ಉತ್ತಿರ್ಣರಾಗಿರುತ್ತಾರೆ . ಸಾಧಕ ವಿದ್ಯಾರ್ಥಿ ಗಳಿಗೆ ಆಡಳಿತ ಮಂಡಳಿ , ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು , ಶಿಕ್ಷಕ ಶಿಕ್ಷಕೇತರ ವೃಂದ ಅಭಿನಂದನೆ ಗಳನ್ನು ಸಲ್ಲಿಸಿರುತ್ತಾರೆ.