ಎಕ್ಸೆಲ್ ಗುರುವಾಯನಕೆರೆ ಜೆಇಇಯಲ್ಲೂ ಸಾಧನೆ!
– 53 ಮಂದಿ ವಿದ್ಯಾರ್ಥಿಗಳು ಶೇ.90 ಅಂಕದ ಸಾಧನೆ
– ಪರೀಕ್ಷೆ ಬರೆದ 72 ವಿದ್ಯಾರ್ಥಿಗಳು ಕೂಡಾ ಅಡ್ವಾನ್ಸ್ ಬರೆಯಲು ಅರ್ಹತೆ
NAMMUR EXPRESS NEWS
ಬೆಳ್ತಂಗಡಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ರಾಷ್ಟ್ರ ಮಟ್ಟದಲ್ಲಿ ಐಐಟಿ, ಎನ್.ಐ.ಐ.ಟಿ ಪ್ರವೇಶಕ್ಕಾಗಿ ನಡೆಸುವ ಜೆ ಇ ಇ , ಮೈನ್ಸ್ ಪರೀಕ್ಷೆಯಲ್ಲಿ ಕರಾವಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಭೌತ ವಿಜ್ಞಾನ ವಿಷಯದಲ್ಲಿ ಪ್ರಜ್ವಲ್ 100 ಅಂಕಗಳನ್ನು ಪಡೆಯುವುದರೊಂದಿಗೆ ಶೇ. 99.8869, ಮಹಮ್ಮದ್ ನೌಮನ್ ಶೇಖ್ 99.1163, ಚಿನ್ಮಯ್ ವೈ ಕೆ 98.8201 ಅಭಿಷೇಕ್ 98.70 , ತನ್ಮಯಿ ಶ್ಯಾನುಭಾಗ್ 98.51 , ಮಹಾದೇವ ಸ್ವಾಮಿ 97.5002, ಶಾಶ್ವತ್ ಎಸ್.ಪಿ – 96.69 , ತನ್ವಿ ಆರ್. ಟಿ 96.56 , ಸಿದ್ಧಾರ್ಥ್ ಎಚ್. ಆರ್ 96.47 , ರಿಶ್ವಿತ್ ಶೆಟ್ಟಿ 97.26 , ಧ್ಯಾನ್ 98.64, ವಿವೇಕ್ ವಿನಾಯಕ 96.56, ರಾಹುಲ್ ಸಿ 95.02, ವೈಭವ ಕೆ ಎಂ 94.70, ರೇವಂತ್ 95.31, ಇಂದ್ರೇಶ್ 95.44 ಪರ್ಸಂಟೇಲ್ ಪಡೆದು ಕೊಂಡಿದ್ದಾರೆ.
ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಅಡ್ವಾನ್ಸ್ ಪರೀಕ್ಷೆ ಅರ್ಹತೆ
ಜೆ ಇ ಇ ಮೈನ್ಸ್ ಬರೆದ 72 ವಿದ್ಯಾರ್ಥಿಗಳ ಪೈಕಿ 53 ಮಂದಿ ಶೇ 90ಕ್ಕಿಂತ ಹೆಚ್ಚು ಪರ್ಸಂಟೇಲ್ ಪಡೆದು ಕೊಂಡಿದ್ದಾರೆ. ಪರೀಕ್ಷೆ ಬರೆದ 72 ವಿದ್ಯಾರ್ಥಿಗಳು ಕೂಡಾ ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ. ದಕ್ಷಿಣ ಭಾರತದ ಖ್ಯಾತನಾಮರಾದ ಪ್ರಾಧ್ಯಾಪಕರು ಎಕ್ಸೆಲ್ ನಲ್ಲಿ ಉಪನ್ಯಾಸಕರಾಗಿರುವುದರಿಂದ ಪ್ರತಿ ವರ್ಷ ಅತ್ಯುತ್ತಮ ಫಲಿತಾಂಶ ದೊರಕುತ್ತಿದೆ. ಇಂಟಿಗ್ರೇಟೆಡ್ ಸಿಸ್ಟಂನಲ್ಲಿ ವಿದ್ಯಾಭ್ಯಾಸ ದೊರಕುವುದರಿಂದ ಎಕ್ಸೆಲ್ ನಲ್ಲಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಅತ್ಯುತ್ತಮ ಸಾಧಕರಾಗಿ ಹೊರ ಹೊಮ್ಮುತ್ತಿದ್ದಾರೆ. ಸಾಧಕರನ್ನು ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಸ್ಪರ್ಧಾತ್ಮಕ ಪರೀಕ್ಷೆಗಳ ಸಂಯೋಜಕರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.