ರಾಜ್ಯದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ!
– ರಾಜ್ಯದ ಜಿಲ್ಲಾವಾರು ಫಲಿತಾಂಶ ಏನು?
– ರಾಜ್ಯದ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಎಸ್. ಎಸ್. ಎಲ್. ಸಿ ಫಲಿತಾಂಶ ಪ್ರಕಟವಾಗಿದ್ದು, ಮತ್ತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಮೊದಲ ಎರಡು ಸ್ಥಾನ ಅಂಕಿತಾ, ಮೇಧಾ, ಹರ್ಷಿತಾ ಕ್ರಮವಾಗಿ 625,624 ಮತ್ತು 624 ಅಂಕಗಳನ್ನು ಗಳಿಸಿದ್ದಾರೆ. ಅವರು ಬಾಗಲಕೋಟೆ,ಬೆಂಗಳೂರು ದಕ್ಷಿಣ ಮತ್ತು ಮಧುಗಿರಿಯವರಾಗಿದ್ದಾರೆ. ಕಳೆದ ವರ್ಷಕ್ಕಿಂತ ವಿದ್ಯಾರ್ಥಿಗಳ ತೇರ್ಗಡೆಯ ಶೇಕಡಾವಾರು ಫಲಿತಾಂಶದಲ್ಲಿ ಶೇ.10ರಷ್ಟು ಕುಸಿತ ಕಂಡುಬಂದಿದೆ. ಹೊಸ ನಿಯಮ, ಅರ್ಹತಾ ಅಂಕಗಳು 35% ರಿಂದ 25% ಕ್ಕೆ ಇಳಿಕೆ. ಗ್ರೇಸ್ ಅಂಕಗಳು 10% ರಿಂದ 20% ಕ್ಕೆ ಹೆಚ್ಚಳವಾಗಿದೆ.
ಶೂನ್ಯ ಫಲಿತಾಂಶ:
ಈ ವರ್ಷ ಒಟ್ಟು 8,59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ 6,31,204 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯದ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಈ ಬಾರಿಯ ಫಲಿತಾಂಶ ಪ್ರಮಾಣ ಶೇ 73.40 ಆಗಿದ್ದು, ಕಳೆದ ಬಾರಿಗಿಂತ ಶೇ 10ರಷ್ಟು ಕಡಿಮೆ ಆಗಿದೆ. ಕಳೆದ ವರ್ಷ ಶೇ 83.89ರಷ್ಟು ಫಲಿತಾಂಶ ದಾಖಲಾಗಿತ್ತು. ಜಿಲ್ಲೆಯ ಒಟ್ಟು ಫಲಿತಾಂಶ ಶೇ 92.12ರಷ್ಟಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 29,701 ವಿದ್ಯಾರ್ಥಿಗಳಲ್ಲಿ 27,360 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಒಟ್ಟು ಉತ್ತೀರ್ಣ ಶೇಕಡಾವಾರು 73.40%
1.ಉಡುಪಿ – ಶೇ 94
2.ದಕ್ಷಿಣ ಕನ್ನಡ- ಶೇ 92. 12
3.ಶಿವಮೊಗ್ಗ -ಶೇ 88.67
4.ಕೊಡಗು – 88.67
5.ಉತ್ತರ ಕನ್ನಡ- ಶೇ 86.54
6.ಹಾಸನ- 86.28
7.ಮೈಸೂರು-ಶೇ 85.5
8.ಶಿರಸಿ-8 84.64
9.ಬೆಂಗಳೂರು ಗ್ರಾಮೀಣ-ಶೇ 83.67
10.ಚಿಕ್ಕಮಗಳೂರು-ಶೇ 83.39
11.ವಿಜಯಪುರ-ಶೇ 79.82
12.ಬೆಂಗಳೂರು ದಕ್ಷಿಣ-ಶೇ 79
13.ಬಾಗಲಕೋಟೆ-ಶೇ 77.92
14.ಬೆಂಗಳೂರು ಉತ್ತರ-ಶೇ 77.09
15.ಹಾವೇರಿ- ಶೇ 75.85
16.ತುಮಕೂರು-ಶೇ 75.16
17.ಗದಗ-ಶೇ 74.76
18.ಚಿಕ್ಕಬಳ್ಳಾಪುರ- ಶೇ 73.61
19.ಮಂಡ್ಯ- ಶೇ.73.59
20.ಕೋಲಾರ- ಶೇ. 73.57
21.ಚಿತ್ರದುರ್ಗ-ಶೇ 72.85
22.ಧಾರವಾಡ-ಶೇ 72.67
23.ದಾವಣಗೆರೆ-ಶೇ 72.49
24.ಚಾಮರಾಜನಗರ-ಶೇ 71.59
25.ಚಿಕ್ಕೋಡಿ-ಶೇ 69.82
26.ರಾಮನಗರ- ಶೇ. 69.53
27.ವಿಜಯನಗರ-ಶೇ 65.61
28.ಬಳ್ಳಾರಿ-ಶೇ 64.99
29.ಬೆಳಗಾವಿ- 64.93
30.ಮಧುಗಿರಿ-ಶೇ 62.44
31.ರಾಯಚೂರು-ಶೇ 61.2
32.ಕೊಪ್ಪಳ-ಶೇ 61.16
33.ಬೀದರ್-ಶೇ 57.52
34.ಕಲಬುರಗಿ-ಶೇ 53.04
35. ಯಾದಗಿರಿ- ಶೇ 50.59