NAMMUR EXPRESS NEWS
ಬೆಂಗಳೂರು: ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) 2023-24ನೇ ಸಾಲಿನ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ಪ್ರೊಬೆಷನರಿ ಆಫೀಸರ್ ಮ್ಯಾನೇಜ್ಮೆಂಟ್ ಟ್ರೇನಿ ಹುದ್ದೆ ಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಈ ಬಾರಿ 12 ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ಒಟ್ಟು 6342 ಹುದ್ದೆಗಳನ್ನು ಭರ್ತಿ ಮಾಡಲು ಐಬಿಪಿಎಸ್ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸು ತಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 02ರಿಂದ ಅವಕಾಶ ನೀಡಲಾಗಿದೆ. ಕೆನರಾ ಬ್ಯಾಂಕ್ 2500
ಹುದ್ದೆಗಳಿಗೆ, ಯುಕೋಬ್ಯಾಂಕ್ 2094 ಆಫೀಸರ್ಗಳನ್ನು ಐಬಿಪಿಎಸ್ ಮೂಲಕ ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 22 ಕೊನೆಯ ದಿನ. ಕಳೆದ ವರ್ಷ 4135 ಹುದ್ದೆಗಳಿಗೆ ನೇಮಕ ನಡೆಸಿರುವ ಐಬಿಪಿಎಸ್ ಈ ಬಾರಿ 6342 ಹುದ್ದೆಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಈ ನೇಮಕ ಸಂಬಂಧ ಇದೇ ಅಕ್ಟೋಬರ್ನಲ್ಲಿ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ನವೆಂಬರ್ನಲ್ಲಿ ನಡೆಸಲಾಗುವುದು ಎಂದು ಐಬಿಪಿಎಸ್ ತಿಳಿಸಿದೆ.
6342 ಬ್ಯಾಂಕ್ ಆಫೀಸರ್ಗಳ ಹುದ್ದೆಗೆ ಐಬಿಪಿಎಸ್ ಅಧಿಸೂಚನೆ
Related Posts
Add A Comment