- ಆನ್ ಲೈನ್ ಗೂ ಸಾಮಾನ್ಯ ಶಿಕ್ಷಣದಷ್ಟೇ ಮಾನ್ಯತೆ
NAMMUR EXPRESS NEWS
ನವದೆಹಲಿ: ಆನ್ಲೈನ್ ಮತ್ತು ದೂರ ಶಿಕ್ಷಣ ಮುಖಾಂತರ ಪಡೆದುಕೊಳ್ಳುವ ಎಲ್ಲಾ ಪದವಿ, ಸ್ನಾತಕೋತ್ತರ ಪದವಿಗಳನ್ನು ಸಾಮಾನ್ಯ ವಿಧಾನದ ಪದವಿಗಳಿಗೆ ಸಮಾನವಾಗಿ ಪರಿಗಣಿಸಬೇಕು ಎಂದು ಯುಜಿಸಿ ಹೇಳಿದೆ.
ಉನ್ನತ ಪದವಿ ನೀಡುವ ಶಿಕ್ಷಣ ಸಂಸ್ಥೆಗಳು ಆಯೋಗದ ನಿಯಮಗಳಿಗೆ ಒಳಪಟ್ಟಿದ್ದರೆ ಅವು ನೀಡುವ ಎಲ್ಲಾ ಪದವಿಗಳನ್ನು ಸಮಾನವಾಗಿ ಪರಿಗಣಿಸ ಬೇಕು ಎಂದು ಇತ್ತೀಚಿನ ಅಧಿಸೂಚನೆ ಯಲ್ಲಿ ಯುಜಿಸಿ ಸ್ಪಷ್ಟಪಡಿಸಿದೆ. ದೂರ ಶಿಕ್ಷಣ ಅಥವಾ ಆನ್ ಲೈನ್ ಮುಖಾಂತರ ಪಡೆದುಕೊಳ್ಳುವ ಪದವಿ, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಮುಂತಾದ ಎಲ್ಲಾ ಪದವಿಗಳು ಸಾಂಪ್ರದಾಯಿಕ ಶಿಕ್ಷಣದಷ್ಟೇ ಮಹತ್ವ ಹೊಂದಿವೆ ಎಂದು ಯುಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ.