-ದಿನ ನಿತ್ಯಾ ಮಕ್ಕಳಬಳಿ ಇದೆಯಾ ಮೊಬೈಲ್
–ನಿಮ್ಮ ಮಕ್ಕಳ ಆರೋಗ್ಯದ ಮೇಲೆ ಇರಲಿ ನಿಗಾ
ಮಕ್ಕಳು ಮಿತಿಮೀರಿ ಮೊಬೈಲ್ ಬಳಸುವುದರಿಂದ ಕಣ್ಣಿನ ಸಮಸ್ಯೆ, ಮೈಗ್ರೇನ್ ಇದ್ದವರಿಗೆ ತಲೆನೋವು ಹೆಚ್ಚಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಕ್ಯಾನ್ಸರ್ ನಂತಹ ಖಾಯಿಲೆಗಳು ಬರುತ್ತದೆ ಎಂಬ ಹೇಳಿಕೆಗಳಿಗೆ ಯಾವುದೇ ಪುರಾವೆಗಳಿಲ್ಲ. ಇದು ಭಯ ಸೃಷ್ಟಿಸುವ ಪ್ರಯತ್ನ ಎಂದು ಮಕ್ಕಳ ಮನೋವೈದ್ಯೆ ಡಾ.ದಿವ್ಯಾ ಹೇಳುತ್ತಾರೆ.
ಮೊಬೈಲ್ನ ಅತಿ ಬಳಕೆಯಿಂದ ಖಿನ್ನತೆ, ಆತಂಕ, ನಿದ್ರೆಯ ಸಮಸ್ಯೆ, ಹಸಿವಿನ ಸಮಸ್ಯೆಗಳು ತಲೆದೋರುತ್ತವೆ ಎಂದು ಮಕ್ಕಳ ತಜ್ಞರು ಹೇಳುತ್ತಾರೆ. ಮಕ್ಕಳಿಗೆ ದಿನಕ್ಕೆ ಎರಡು ಗಂಟೆಗಿಂತ ಹೆಚ್ಚು ಮೊಬೈಲ್ ನೀಡಬಾರದು. ಮನೆಯಲ್ಲಿ ಅವರಿಗೆ ವೈವಿಧ್ಯಮಯ ಚಟುವಟಿಕೆಗಳಿಗೆ ಅವಕಾಶ ನೀಡಬೇಕು.
ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ಮಾಡುವ ಚಟುವಟಿಕೆ ಮತ್ತು ಕುಟುಂಬ ಸದಸ್ಯರೊಂದಿಗೆ ಸೇರಿ ಮಾಡುವ ಚಟುವಟಿಕೆಗಳಿಗೆ ಅವಕಾಶ ನೀಡಬೇಕು. ಸಂಗೀತ ಕಲಿಯುವುದು, ಕಥೆ ಕೇಳುವುದು,,ಕುಟುಂಬ ಸದಸ್ಯರೊಂದಿಗೆ ಸೇರಿ ಮಾಡುವ ಚಟುವಟಿಕೆಗಳಿಗೆ ಅವಕಾಶ ನೀಡಬೇಕು. ಚಿತ್ರಕಲೆ, ಅಜ್ಜ, ಅಜ್ಜಿ ಜೊತೆ ಸೇರಿ ಆಡುವ ಬೋರ್ಡ್ ಆಟಗಳು, ಆಡುಗೆ ಮಾಡುವುದು ಹೀಗೆ ವೈವಿಧ್ಯಮಯ ಚಟುವಟಿಕೆಗೆ ಅವಕಾಶ ನೀಡಬೇಕು ಎಂದು ಮಕ್ಕಳ ಮನೋವೈದ್ಯರು, ಮಕ್ಕಳ ತಜ್ಞರು ಅಭಿಪ್ರಾಯ ಪಡುತ್ತಾರೆ.