ಈಗ ಶಾಲಾ ಕಾಲೇಜು ಪ್ರವೇಶದ ಸಮಯ
– ಜೂನ್ 1ರಿಂದ ಶಾಲೆಗಳು ಪ್ರಾರಂಭ
– ಮೇ 8ಕ್ಕೆ ಎಸ್ ಎಸ್ ಎಲ್ ಸಿ ಫಲಿತಾಂಶ?
– ಕಾಲೇಜು, ಶಾಲೆ ಪ್ರವೇಶಕ್ಕೆ ಕ್ಯೂ!
NAMMUR EXPRESS NEWS
ಶಾಲಾ ಕಾಲೇಜುಗಳಿಗೆ ಈಗಾಗಲೇ ಬೇಸಿಗೆ ರಜಾ ಆರಂಭವಾಗಿದೆ ಆದರೆ ಯಾವಾಗಿನಿಂದ ಶಾಲೆ, ಕಾಲೇಜು ಮತ್ತೆ ಆರಂಭವಾಗುತ್ತದೆ ಎಂಬ ಕುತೂಹಲ ಹಲವಾರು ವಿದ್ಯಾರ್ಥಿಗಳಲ್ಲಿದೆ.ಈಗಾಗಲೇ ಹಲವೆಡೆ ಶಾಲಾ, ಕಾಲೇಜು, ಇತರೆ ಕೋರ್ಸ್ ಅಡ್ಮಿಷನ್ ಪ್ರಾರಂಭವಾಗಿದೆ. ಪದವಿಪೂರ್ಶ ಶಿಕ್ಷಣ ಇಲಾಖೆಯಿಂದ 2023- 24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ ಈಗ ಮತ್ತೆ ಪರಿಷ್ಕರಿಸಿದ ವೇಳಾಪಟ್ಟಿಯನ್ನು ಬಿಡಗಡೆ ಮಾಡಲಾಗಿದೆ. ಹೊಸದಾಗಿ ಈಗ ಬಿಡುಗಡೆಯಾದ ವೇಳಾಪಟ್ಟಿ ಪ್ರಕಾರ ಮತ್ತೆ ಯಾವಾಗ ಆರಂಭವಾಗಲಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಜೂನ್ 1, 2023ರಿಂದ ಶಾಲೆಗಳು ಆರಂಭಗೊಳ್ಳಲಿದೆ. ಪ್ರಥಮ ಪಿಯುಸಿಗೆ ಮೇ.22ರಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ಸಂಬಂಧ ಪರಿಷ್ಕೃತ ಸುತ್ತೋಲೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪ್ರಕಟಿಸಿದ್ದಾರೆ. ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಹಿತದೃಷ್ಠಿಯಿಂದ ಪರಿಷ್ಕೃತ ವೇಳಾಪಟ್ಟಿಯನ್ನು ಮತ್ತೆ ಬಿಡುಗಡೆ ಮಾಡಲಾಗಿದೆ ಇದರ ಪ್ರಕಾರ ಜೂನ್ 1 ರಿಂದ ಆರಂಭವಾಗಲಿದೆ. ಪರಿಷ್ಕೃತ ಶೈಕ್ಷಣಿಕ ವೇಳಾಪಟ್ಟಿಯಂತೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಯನ್ನು ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.
ಅಡ್ಮಿಷನ್ ಆರಂಭವಾದ ತಕ್ಷಣ ಹೀಗೆ ಮಾಡಿ:
ವಿದ್ಯಾರ್ಥಿಗಳಿಗೆ ಇದರ ಅನುಸಾರವೇ ತರಗತಿಗಳು ಆರಂಭವಾಗಲಿದೆ ಮಧ್ಯಂತರ ರಜೆ ದೊರೆಯಲಿದೆ. ನೀವು ಈ ಬಾರಿ ಹತ್ತನೇ ತರಗತಿ ಪರೀಕ್ಷೆ ಬರೆದು ಕಾಲೇಜು ಮೆಟ್ಟಿಲು ಹತ್ತುವ ತವಕದಲ್ಲಿದ್ದರೆ ಈ ಮಾಹಿತಿ ನಿಮಗೆ ತುಂಬಾ ಉಪಯುಕ್ತವಾಗಲಿದೆ. ಅಡ್ಮಿಷನ್ಗೆ ಬೇಕಾದ ದಾಖಲಾತಿಗಳು ಮತ್ತು ನಿಮ್ಮ ಹಳೆಯ ಅಂಕಪಟ್ಟಿಗಳನ್ನು ಸಿದ್ಧಪಡಿಸಿಕೊಂಡಿರಿ ನಂತರ ಆದಷ್ಟು ಬೇಗ ನಿಮಗೆ ಯಾವ ಕಾಲೇಜಿನಲ್ಲಿ ಸೀಟ್ ಬೇಕು ಎಂದಿದೆಯೋ ಅಲ್ಲಿ ಅಡ್ಮಿಷನ್ ಮಾಡಿಸಿ. ಈ ಬಾರಿ ಹೊಸ ಶಿಕ್ಷಣ ನೀತಿ ಚೌಕಟ್ಟಿನಲ್ಲಿ ಹೊಸ ನಿಯಮ ಬಿಡುಗಡೆಯಾಗಿರುವುದು ನಿಮಗೆಲ್ಲಾ ತಿಳಿದೇ ಇದೆ. ಇನ್ಮುಂದೆ ಪಿಯುಸಿ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮಿಷ್ಟದ ಕೋರ್ಸ್ ಮಾಡಹುದು. ಯಾವ ವಿಷಯವನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶ ಅವರಿಗಿರುತ್ತದೆ.