ಎಸ್. ಎಸ್. ಎಲ್. ಸಿ ಫಲಿತಾಂಶಕ್ಕೆ ಕ್ಷಣಗಣನೆ
– ಮೇ 8 ಅಥವಾ 9ರಂದು ಫಲಿತಾಂಶ ಪ್ರಕಟ
– ಫಲಿತಾಂಶ ನೋಡೋದು ಹೇಗೆ… ಇಲ್ಲಿದೆ ಡೀಟೇಲ್ಸ್!
NAMMUR EXPRESS NEWS
ಬೆಂಗಳೂರು: ಬಹು ನಿರೀಕ್ಷೆಯಿಂದ ಕಾಯುತ್ತಿರುವ ಎಸ್ ಎಸ್ ಎಲ್ ಸಿ ಫಲಿತಾಂಶ ಮೇ 8 ಅಥವಾ 9ಕ್ಕೆ ಪ್ರಕಟವಾಗುವ ಎಲ್ಲಾ ಸಾಧ್ಯತೆಗಳಿವೆ. ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ (KSEAB) ತನ್ನ ಅಧಿಕೃತ ವೆಬ್ಸೈಟ್ kseab.karnataka.gov.in ನಲ್ಲಿ 10 ನೇ ತರಗತಿ ಅಥವಾ SSLC ಫಲಿತಾಂಶಗಳನ್ನು ಈ ವಾರವೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಫಲಿತಾಂಶಗಳನ್ನು karresults.nic.in ನಲ್ಲಿಯೂ ಪರಿಶೀಲಿಸಬಹುದು. ಫಲಿತಾಂಶಗಳು ಮೇ 8 ಇಲ್ಲವೇ 9ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪರೀಕ್ಷಾ ಮಂಡಳಿ ಮೂಲಗಳಿಂದ ಖಚಿತ ಮಾಹಿತಿ ಸಿಕ್ಕಿದೆ.ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಈಗಾಗಲೇ ಸಂಪೂರ್ಣಗೊಂಡಿದೆ.
ಹೀಗಾಗಿ ಪರೀಕ್ಷಾ ಮಂಡಳಿ ಫಲಿತಾಂಶದ ಸರ್ವ ಸಿದ್ದತೆ ಮಾಡಿಕೊಂಡಿದೆ. ಎರಡನೇ ಹಂತದ ಲೋಕಸಭೆ ಚುನಾವಣೆ ಕಾರಣ ಫಲಿತಾಂಶ ತಡವಾಗುತ್ತಿದೆ. ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿದೆ. ಇದರ ಫಲಿತಾಂಶ ಈ ವಾರದಲ್ಲಿ ಪ್ರಕಟವಾಗಲಿದೆ. ಮತದಾನದ ಮುಗಿದ ಎರಡು ದಿನದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮೇ 8 ಬುಧವಾರ ಇಲ್ಲವೇ ಮೇ 9ರಂದು ಗುರುವಾರ ಪ್ರಕಟವಾಗುವ ಸಾಧ್ಯತೆ ಇದೆ. ಮೇ 10 ರಂದು ಬಸವ ಜಯಂತಿ ಇರುವ ಕಾರಣ ಮೇ 9ರೊಳಗೆ ಫಲಿತಾಂಶ ಪ್ರಕಟ ಆಗಲಿದೆ.
ರಿಸಲ್ಟ್ ಚೆಕ್ ಮಾಡೋದು ಹೇಗೆ?
* ಫಲಿತಾಂಶ ಬಿಡುಗಡೆಯಾದಾಗ, ವಿದ್ಯಾರ್ಥಿಗಳು ಈ ಕೆಳಗಿನ ಹಂತಗಳನ್ನು ಬಳಸಿಕೊಂಡು ತಮ್ಮ ರಿಸಲ್ಟ್ ಪರಿಶೀಲಿಸಬಹುದು.
* ಅಧಿಕೃತ ವೆಬ್ಸೈಟ್ kseab.karnataka.gov.in ಗೆ ಭೇಟಿ ನೀಡಿ.
* ಮುಖಪುಟದಲ್ಲಿ, SSLC ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.
* ಲಾಗಿನ್ ಪುಟದಲ್ಲಿ ಕೇಳಿದಂತೆ ರೋಲ್ ಸಂಖ್ಯೆ ಮತ್ತು ಹೆಸರಿನಂತಹ ವಿವರಗಳನ್ನು ನಮೂದಿಸಿ.
* ಹೊಸ ಪುಟದಲ್ಲಿ ನಿಮ್ಮ ಫಲಿತಾಂಶವನ್ನು ಪರಿಶೀಲಿಸಿ.