ತೀರ್ಥಹಳ್ಳಿಯ ಸಹ್ಯಾದ್ರಿ ಪ್ರೌಢಶಾಲೆ ಮತ್ತೆ ಮೇಲುಗೈ!
– ಶೇ.100ರ ಫಲಿತಾಂಶ ದಾಖಲೆ: ಮಕ್ಕಳಿಗೆ ಅಭಿನಂದನೆ
– ಪತ್ರಕರ್ತ ಅನಿಲ್, ಭಾಗ್ಯ ಅನಿಲ್ ಪುತ್ರಿ ವಿಧಿತ ಗೌಡ ಟಾಪರ್
NAMMUR EXPRESS NEWS
ತೀರ್ಥಹಳ್ಳಿ: ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ತೀರ್ಥಹಳ್ಳಿ ಪಟ್ಟಣದ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿರುವ ಸಹ್ಯಾದ್ರಿ ಪ್ರೌಢಶಾಲೆಯು ಪ್ರತಿ ವರ್ಷದಂತೆ ಈ ಬಾರಿಯು ಶೇ.100% ಫಲಿತಾಂಶ ಪಡೆದು ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೇ ಗುಣಾತ್ಮಕ ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ೪೭ ವಿದ್ಯಾರ್ಥಿಗಳಲ್ಲಿ ೨೪ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, ಉಳಿದ ೨೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕು|| ವಿಧಿತ ಗೌಡ ೬೦೨/೬೨೫ ಪಡೆಯುವ ಮೂಲಕ ಟಾಪರ್ ಆಗಿ ಹೊರ ಹೊಮ್ಮಿರುತ್ತಾರೆ.
ಸಾಧಕ ಮಕ್ಕಳಿಗೆ ಆಡಳಿತ ಮಂಡಳಿ ಅಭಿನಂದನೆ
ಸಂಸ್ಥೆಗೆ ಶೇ. ೧೦೦ ಫಲಿತಾಂಶ ನೀಡುವುದರ ಮೂಲಕ ತಾಲ್ಲೂಕಿನ ಪ್ರೌಢಶಾಲೆಗಳ ಗುಣಾತ್ಮಕ ಫಲಿತಾಂಶದಲ್ಲಿ ಮೇಲುಗೈ ಸಾಧಿಸುವ ಮೂಲಕ ತೀರ್ಥಹಳ್ಳಿ ತಾಲ್ಲೂಕು ಹಾಗೂ ಶಿಕ್ಷಣ ಸಂಸ್ಥೆಗೆ ಮತ್ತು ಪೋಷಕರಿಗೆ ಕೀರ್ತಿ ತಂದಿರುವ ಈ ಸಾಧಕ ವಿದ್ಯಾರ್ಥಿಗಳನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷರು ಹಾಗೂ ನಿರ್ದೇಶಕರು,ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಅಧ್ಯಾಪಕರು ಮತ್ತು ಭೋಧಕೇತರ ವೃಂದದವರು ಹಾರ್ಧಿಕವಾಗಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಪತ್ರಕರ್ತ ಅನಿಲ್, ಭಾಗ್ಯ ಅನಿಲ್ ಪುತ್ರಿ ವಿಧಿತ ಗೌಡ ಸಾಧನೆ!
ಸಹ್ಯಾದ್ರಿ ಶಾಲೆಗೆ ಟಾಪರ್ ಆಗಿದ್ದು ಈಕೆ ಖ್ಯಾತ ಪತ್ರಕರ್ತ ವಿಧಾತ ಅನಿಲ್ ಹಾಗೂ ಪತ್ರಕರ್ತೆ ಭಾಗ್ಯ ಅನಿಲ್ ಪುತ್ರಿ. ಸಹ್ಯಾದ್ರಿ ಐಸಿಎಸ್ಸಿ ಶಾಲೆಯಲ್ಲಿ ಎರಡನೇ ಮಗಳು ವಿದಿಷಾ 7ನೇ ತರಗತಿ ಓದುತ್ತಿದ್ದಾಳೆ.