ವಿಜ್ಞಾನ ವಿಭಾಗ: ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದ ವಾಗ್ದೇವಿ ಪಿಯು ಕಾಲೇಜಿನ ಸುಚಿಂತ್ ಎಸ್
– 600 ಕ್ಕೆ 593 ಅಂಕಗಳನ್ನು ಪಡೆದು ಸಾಧನೆ
– ತೀರ್ಥಹಳ್ಳಿ ವಾಗ್ದೇವಿ ಪಿಯು ಕಾಲೇಜು ಬೆಸ್ಟ್
NAMMUR EXPRESS NEWS
ತೀರ್ಥಹಳ್ಳಿ: 2023-24ನೆಯ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮರು ಮೌಲ್ಯ ಮಾಪನ ಫಲಿತಾಂಶ ಪ್ರಕಟಗೊಂಡಿದ್ದು ಅದರಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್ ಅನ್ನು ವಾಗ್ದೇವಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸುಚಿಂತ್ ಎಸ್ ಪಡೆದಿದ್ದಾರೆ. 588 ಅಂಕಗಳನ್ನು ಪಡೆದು ರಾಜ್ಯಕ್ಕೆ ಹತ್ತನೆಯ ರ್ಯಾಂಕ್ ಪಡೆದಿದ್ದು, ಈ ಫಲಿತಾಂಶದಿಂದ ತೃಪ್ತಿ ಹೊಂದದ ಇವನು ಜೀವಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳಿಗೆ ಮರುಮಾವುಲ್ಯಮಾಪನವನ್ನು ಮಾಡಿಸಿದಾಗ ಜೀವಶಾಸ್ತ್ರದಲ್ಲಿ ಎರಡು ಅಂಕಗಳನ್ನು ಪಡೆದು ನೂರಕ್ಕೆ ನೂರು ಅಂಕಗಳನ್ನು ಹಾಗೂ ಇಂಗ್ಲೀಷ್ ನಲ್ಲಿ ಮೂರು ಅಂಕಗಳನ್ನು ಪಡೆದು ನೂರಕ್ಕೆ 95
ಅಂಕಗಳನ್ನು ಪಡೆದಿರುವುದು ಸಂತಸದ ವಿಷಯವಾಗಿದೆ.
ಒಟ್ಟು 600 ಕ್ಕೆ 593 ಅಂಕಗಳನ್ನು ಪಡೆದು ರಾಜ್ಯಕ್ಕೆ 6ನೇ ರ್ಯಾಂಕನ್ನು ಪಡೆದು ಕಾಲೇಜಿಗೆ ತಾಲ್ಲೂಕಿಗೆ ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿರುತ್ತಾನೆ. ಇವನ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು,ಸದಸ್ಯರು ಹಾಗು ಪೋಷಕರಾದ ಶ್ರೀ ಸುಶೀಲ್ ಕುಮಾರ್ – ಶ್ರೀಮತಿ ವಾಣಿ ಸುಶೀಲ್ ಕುಮಾರ್ ಮತ್ತು ಉಪನ್ಯಾಸಕ ವೃಂದ ಅಭಿನಂದಿಸಿರುತ್ತಾರೆ.
ಸುಚಿಂತ್ ಎಸ್
593/600
CHEM – 100
MATH – 100
BIO – 100
SAN – 100
PHY – 98
ENG – 95