ಮೇ 9ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ!
– 8.69 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ
– ಫಲಿತಾಂಶ ನೋಡುವ ವೆಬ್ ಸೈಟ್ ಯಾವುದು?
NAMMUR EXPRESS NEWS
ಬೆಂಗಳೂರು: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಿಸಲು ಕೊನೆಗೂ ಕರ್ನಾಟಕ ಪರೀಕ್ಷಾ ಮಂಡಳಿ ಡೇಟ್ ಫಿಕ್ಸ್ ಮಾಡಿ, ಮುಹೂರ್ತ ಇಟ್ಟಿದೆ. 8.69 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ ಮಾಡುವ ಫಲಿತಾಂಶ ಮೇ 9ರ ಬೆಳಗ್ಗೆ 10:30ಕ್ಕೆ ಬಿಡುಗಡೆಯಾಗಲಿದೆ. 2023 & 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 4.41 ಲಕ್ಷ ಬಾಲಕರು, 4.28 ಲಕ್ಷ ಬಾಲಕಿಯರು ಸೇರಿದ್ದರು. ಈಗ ಇವರೆಲ್ಲರ ಭವಿಷ್ಯ ನಿರ್ಧಾರ ಮಾಡುವ ಫಲಿತಾಂಶವು ಬಿಡುಗಡೆ ಆಗಲು ಕೆಲವೇ ಗಂಟೆ ಬಾಕಿ ಇದೆ. ಮೇ 09 ರಂದು ಎಸ್ ಎಸ್ ಎಲ್ ಸಿ ಫಲಿತಾಂಶ ಬಿಡುಗಡೆ ಆಗಲಿದೆ ಎಂದು ಅಧಿಕೃತ ಘೋಷಣೆ ಮಾಡಲಾಗಿದೆ.
ಎಸ್ ಎಸ್ ಎಲ್ ಸಿ ಫಲಿತಾಂಶ ನೋಡುವ ವೆಬ್ಸೈಟ್!
ಫಲಿತಾಂಶ ನೋಡಲು ನೀವು kseeb.kar.nic.in ಮತ್ತು karresults.nic.in ವೆಬ್ಸೈಟ್ಗೆ ಭೇಟಿ ನೀಡಲು ತಿಳಿಸಲಾಗಿದೆ. ಹಾಗೇ ಕೆಲವು ಶಾಲೆಗಳಲ್ಲಿ ಫಲಿತಾಂಶ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಕೂಡ ಮಾಡಲಾಗಿದ್ದು. ಬೆಳಗ್ಗೆ, ಕರ್ನಾಟಕ ಪರೀಕ್ಷಾ ಮಂಡಳಿಯು ಸುದ್ದಿಗೋಷ್ಠಿ ನಡೆಸಲಿದೆ. ಆ ನಂತರ ಎಸ್ಎಸ್ಎಲ್ಸಿ ಫಲಿತಾಂಶ ಅಧಿಕೃತವಾಗಿ ರಿಲೀಸ್ ಆಗಲಿದೆ.
ಕರ್ನಾಟಕ ರಾಜ್ಯವೇ ಬೆಸ್ಟ್!
ಶೈಕ್ಷಣಿಕ ಗುಣಮಟ್ಟ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ದೊಡ್ಡ ಹೆಸರು ಪಡೆದಿದೆ. ಹೀಗಾಗಿ ಕರ್ನಾಟಕದ ಎಸ್ಎಸ್ಎಲ್ ಫಲಿತಾಂಶವು, ಇಡೀ ದೇಶದ ಗಮನವನ್ನ ಸೆಳೆದಿದೆ. ಯಾಕಂದ್ರೆ ಕರ್ನಾಟಕದಲ್ಲಿ ಅದ್ರಲ್ಲೂ ನಮ್ಮ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಕೂಡ ಓದುತ್ತಿದ್ದಾರೆ. ಇದೀಗ 2023 & 2024ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ ಆಗಲಿದೆ. ಹೀಗಾಗಿ ನಾಳೆ ಬಹುಮುಖ್ಯ ಸುದ್ದಿಗೋಷ್ಠಿ ನಡೆಸಲು ಇದೀಗ ಕರ್ನಾಟಕ ಪರೀಕ್ಷಾ ಮಂಡಳಿ ಸಿದ್ಧತೆ ನಡೆಸಿದೆ. ಅಲ್ಲದೆ ಈ ಕುರಿತು ಅಧಿಕೃತವಾಗಿ ನೋಟಿಫಿಕೇಷನ್ ಕೂಡ ನೀಡಲಾಗಿದೆ.