ಎಸ್.ಎಸ್.ಎಲ್.ಸಿ: ಜಿಲ್ಲೆಗೆ ತೀರ್ಥಹಳ್ಳಿ ತಾಲೂಕು ಪ್ರಥಮ!
– ವಾಗ್ದೇವಿ ಶಾಲೆಗೆ ರಾಜ್ಯದಲ್ಲಿ ಎರಡು ಸ್ಥಾನ: ಸರ್ಕಾರಿ ಶಾಲೆಗಳ ಸಾಧನೆ
– ಸರ್ಕಾರಿ ಶಾಲೆಗಳ ಪೈಕಿ ತೀರ್ಥಹಳ್ಳಿ ಬಾಲಿಕಾ ಪ್ರೌಢಶಾಲೆಯ ರಜತ ಟಾಪರ್
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯಲ್ಲೇ ತೀರ್ಥಹಳ್ಳಿ ತಾಲೂಕು ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿದೆ. 21 ಸರಕಾರಿ ಪ್ರೌಢಶಾಲೆಗಳು, 2 ಅನುದಾನಿತ ಶಾಲೆಗಳು, 6 ಖಾಸಗಿ ಶಾಲೆಗಳು ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ಪಡೆದಿದ್ದಾರೆ. 1580 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು 1544 ಮಕ್ಕಳು ತೇರ್ಗಡೆಗೊಂಡಿದ್ದಾರೆ.
ವಾಗ್ದೇವಿ ಶಾಲೆಗೆ ರಾಜ್ಯದಲ್ಲಿ ಎರಡು ಸ್ಥಾನ!
ತೀರ್ಥಹಳ್ಳಿ ಪಟ್ಟಣದ ವಾಗ್ದೇವಿ ಶಾಲೆಯ ರಂಜದಕಟ್ಟೆ ಗ್ರಾಮದ ಕೆ.ಕೃತಿಕ 621 ಅಂಕಪಡೆದು ರಾಜ್ಯಕ್ಕೆ 5ನೇ ಸ್ಥಾನ, ತೀರ್ಥಹಳ್ಳಿ ಪಟ್ಟಣದ ಯಡೇಹಳ್ಳಿಕೆರೆ ಬಡಾವಣೆಯ ಎಸ್.ಛಾಯಾ 620 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ ಪಡೆದುಕೊಂಡಿದ್ದಾರೆ.
ಸರ್ಕಾರಿ ಶಾಲೆಗಳ ಪೈಕಿ ಬಾಲಿಕಾ ಪ್ರೌಢಶಾಲೆಯ ರಜತ ಟಾಪರ್
ತೀರ್ಥಹಳ್ಳಿ ಪಟ್ಟಣದ ಸರಕಾರಿ ಬಾಲಿಕಾ ಪ್ರೌಢಶಾಲೆ ವಿದ್ಯಾರ್ಥಿನಿ ತೀರ್ಥಹಳ್ಳಿ ಪಟ್ಟಣದ ಡಿ. ರಜತ 615 ಅಂಕ ಪಡೆದು ಸರಕಾರಿ ಶಾಲೆಗಳಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ತಾಲೂಕಿನ ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರಿದ್ದಾರೆ. ಈ ವಿದ್ಯಾರ್ಥಿಗಳು ಶೇ. 97.72 ರಷ್ಟು ಫಲಿತಾಂಶ ದಾಖಲಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಬಿಳುಕೊಪ್ಪ, ಬಾವಿ ಕೈಸರು, ರಾಮಕೃಷ್ಣ ಪುರ, ಮಳಲಿಮಕ್ಕಿ, ಕೊಂಡ್ಲುರು, ತನಿಕಲ್, ಕುಡುಮಲ್ಲಿಗೆ, ಮತ್ತಿಗಾರ್, ತೂದೂರು, ಡಿ.ರಜತ ಗುಡ್ಡೆಕೊಪ್ಪ ಮೇಳಿಗೆ, ತೀರ್ಥಹಳ್ಳಿ ಪಟ್ಟಣದ ಸರಕಾರಿ ಬಾಲಿಕಾ ಪ್ರೌಢಶಾಲೆ, ಕಟ್ಟೇಹಕ್ಕಲು, ಕನ್ನಂಗಿ, ಕೋಡ್ಲು, ಆರಗ, ಕಡ್ತುರು, ಬಸವಾನಿ, ಹೆದ್ದೂರು, ಮೋರಾರ್ಜಿ ದೇಸಾಯಿ ವಾಟಗಾರು, ಅಂಬೇಡ್ಕರ್ ಕೆರೆಹಳ್ಳಿ ಸರಕಾರಿ ಪ್ರೌಢಶಾಲೆಗಳು ಶೇ.100 ಫಲಿತಾಂಶ ಪಡೆದಿವೆ.
ಖಾಸಗಿ ಶಾಲೆಗಳ ಸಾಧನೆ!
ಖಾಸಗಿ ಅನುದಾನಿತ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ವಿಶ್ವತೀರ್ಥ ಕಮ್ಮರಡಿ ಪ್ರೌಢ ಶಾಲೆ, ಖಾಸಗಿ ಶಾಲೆಗಳಾದ ಪಟ್ಟಣದ ವಾಗ್ದೇವಿ ಆಂಗ್ಲ ಮಾಧ್ಯಮ, ಸಹ್ಯಾದ್ರಿ ಆಂಗ್ಲ ಮಾಧ್ಯಮ, ಪ್ರಜ್ಞಾಭಾರತಿ ಚಿಟ್ಟೆಬೈಲು, ಎವಿಎಂ ಆಗುಂಬೆ, ಬೆಜ್ಜವಳ್ಳಿ ಮಲೆನಾಡು ಶಾಲೆಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿವೆ.
ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಶಾಲೆ ಮಕ್ಕಳ ಸಾಧನೆ
ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಮಾಧ್ಯಮದ ವಿದ್ಯಾರ್ಥಿ ರಜತ ಡಿ ಅವರು 625 ಕ್ಕೆ 615 ಅಂಕಗಳಿಸಿದ್ದು, ಧನುಶ್ ವಿ 607 ಅಂಕ, ಹೆಚ್ ವಿ ವರುಣ್ ಪ್ರಭು 605 ಅಂಕ, ಸುಮೇದ ಪಿಟಿ 605 ಅಂಕ, ಅಮೂಲ್ಯ ಆರ್ 604 ಅಂಕ, ಅವನಿ ಆರ್ 602 ಅಂಕ ಹಾಗೂ ಸರ್ಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮದ ಶಶಾಂಕ್ ಕುಮಾರ್ ಎಸ್ ಕೆ 604 ಅಂಕ ಗಳಿಸಿದ್ದಾರೆ.