- ಎಣ್ಣೆ ಹೊಡೆದು ಕಾಲೇಜಿಗೆ ಬಂದ ವಿದ್ಯಾರ್ಥಿಗಳು!
- ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನ ವಿಡಿಯೋ ವೈರಲ್
- ಮಂಗಳೂರು ಕಿಸ್ಸಿಂಗ್ ಪ್ರಕರಣ: 8 ಮಂದಿ ಅರೆಸ್ಟ್
- ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ!
NAMMUR EXPRESS NEWS
ಶಿವಮೊಗ್ಗ/ಮಂಗಳೂರು: ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಡಹಗಲೇ ಮದ್ಯ ಸೇವಿಸಿ ಕಾಲೇಜಿನ ಮುಂದೆಯೇ ಬಿದ್ದು ಒದ್ದಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೊತೆಗೆ ಇಡೀ ವಿದ್ಯಾರ್ಥಿ ವರ್ಗ ತಲೆ ತಗ್ಗಿಸುವಂತಾಗಿದೆ.
ಮೂವರು ಕಾಲೇಜು ವಿದ್ಯಾರ್ಥಿಗಳು ಮದ್ಯ ಸೇವಿಸಿ ಗಾಳಿಯಲ್ಲಿ ತೂರಾಡುತ್ತಿದ್ದು, ಕಾಲನ್ನು ಮುಂದೆಯೂ ಹಾಕಲಾರದೆ, ಹಿಂದೆಯೂ ಹಾಕಲಾರದೆ ನಶೆಯಲ್ಲಿ ವಿದ್ಯಾರ್ಥಿಗಳು ಒದ್ದಾಡುತ್ತಿದ್ದಾರೆ. ಮತ್ತಿನಲ್ಲಿ ಕ್ಯಾಂಪಸ್ನಲ್ಲಿ ಎಲ್ಲಂದರಲ್ಲಿ ವಾಲಾಡುತ್ತಾ ಬಿದ್ದಿದ್ದಾರೆ. ಇದನ್ನು ಸಹಪಾಠಿ ವಿದ್ಯಾರ್ಥಿಗಳಿಂದ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಕಾಲೇಜು ಸಂಸ್ಥೆಯ ಹೆಸರಿನ ಟ್ಯಾಗ್ ಲೈನ್ನಲ್ಲಿ ವೈರಲ್ ಮಾಡಲಾಗಿದೆ.
ಪೊಲೀಸರು ತನಿಖೆ ನಡೆಸಿದ್ದು, ತನಿಖೆಯಲ್ಲಿ ವಿದ್ಯಾರ್ಥಿಗಳು ಸಾಗರ ರಸ್ತೆಯಲ್ಲಿರುವ ಬಾರ್ ಒಂದರಲ್ಲಿ ಮದ್ಯ ಸೇವನೆ ಮಾಡಿಕೊಂಡು ಬಸ್ ಹತ್ತಲು ಕಾಲೇಜಿನ ಹತ್ತಿರ ಬಂದಾಗ ಕಾಲೇಜಿನ ಗೇಟ್ ನಲ್ಲಿ ತಡೆದು ಅವರ ಪೋಷಕರಿಗೆ ಈ ವಿಚಾರವನ್ನು ತಿಳಿಸಿ, ಕಾಲೇಜು ಆಡಳಿತ ಮಂಡಳಿಯು ಪೋಷಕರೊಂದಿಗೆ ವಿದ್ಯಾರ್ಥಿಗಳಿಗೆ ಈ ವಿಷಯವಾಗಿ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಮಂಗಳೂರಿನ ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಇಡೀ ವಿದ್ಯಾರ್ಥಿ ಹಾಗೂ ಪೋಷಕ ವರ್ಗ ತಲೆ ತಗ್ಗಿಸುವಂತೆ ಮಾಡಿದೆ. ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಕಿಸ್ಸಿಂಗ್ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಕಿಸ್ಸಿಂಗ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಿಸ್ಸಿಂಗ್ ಸ್ಪರ್ಧೆ ಮಾಡಿದ್ದು, ವಿಡಿಯೋ ಮಾಡಿದ ವಿದ್ಯಾರ್ಥಿಯ ಬಂಧನ ಮಾಡಲಾಗಿದೆ. ಕಿಸ್ಸಿಂಗ್ನಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣ ಪಡೆಯುತ್ತಿದ್ದರು ಎನ್ನಲಾಗಿದೆ. ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ಎದುರೇ ಕಿಸ್ ಮಾಡಿರುವುದು ಭಾರೀ ಸಂಚಲನ ಮೂಡಿಸಿದ್ದು
ಪಂದ್ಯದ ನಿಯಮದಂತೇ ವಿದ್ಯಾರ್ಥಿ, ವಿದ್ಯಾರ್ಥಿನಿ ಎಲ್ಲರ ಎದುರೇ ಚುಂಬನ ಮಾಡಿದ್ದು, ಇದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಪ್ರತಿಷ್ಠಿತ ಖಾಸಗಿ ಕಾಲೇಜಿನ ಕಿಸ್ಸಿಂಗ್ ಸ್ಪರ್ಧೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಲವರ ಆಕ್ರೋಶಕ್ಕೂ ಕಾರಣವಾಗಿತ್ತು. ಈ ವಿದ್ಯಾರ್ಥಿಗಳು ಅನೈತಿಕ ಸಂಬಂಧ ಕೂಡ ಇದ್ದಿದ್ದು ಬಯಲಾಗಿದೆ.
ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ!: ರಾಯಚೂರು ಜಿಲ್ಲೆಯಲ್ಲಿ ನಾಲ್ವರು ಪಿಯು ವಿದ್ಯಾರ್ಥಿನಿಯರು ಕಾಲೇಜಿಗೆ ಚಕ್ಕರ್ ಹಾಕಿ ಏಕಾಏಕಿ ನಾಪತ್ತೆಯಾಗಿದ್ದು ಇದೀಗ ಇಬ್ಬರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇವರು ಗೋವಾ ಪ್ರವಾಸ ಹೋಗಿದ್ದರು ಎನ್ನಲಾಗಿದೆ.
ಪೋಷಕರು, ಕಾಲೇಜು, ನಿಯಮ ನಿಯಂತ್ರಣ ಬೇಕು!
ಯುವ ಸಮುದಾಯ ಹಾದಿ ತಪ್ಪಿದೆ. ಯಾವುದೇ ಜೀವನದ ಗುರಿ ಇಲ್ಲದೆ ಅನೇಕರು ಸಾಮಾಜಿಕ ಜಾಲ ತಾಣ, ಚಟ, ಬೇಡದ ವಿಷಯಕ್ಕೆ ಹೆಚ್ಚು ಗಮನ ಕೊಡಲಾಗುತ್ತಿದೆ. ಶಿಕ್ಷಣ, ಅಧ್ಯಯನ, ಸಾಧನೆ, ಸಾಮಾಜಿಕ ಮೌಲ್ಯ ಇಂದಿನ ಯುವ ಜನತೆಯಲ್ಲಿ ಮಾಯವಾಗಿದೆ. ಪೋಷಕರು, ಶಿಕ್ಷಕರು, ಸಮಾಜ ಮಕ್ಕಳು, ಯುವ ಜನತೆಯನ್ನು ನಿಯಂತ್ರಣ ಮಾಡದಿದ್ದಲ್ಲಿ ದೇಶಕ್ಕೆ ಭವಿಷ್ಯ ಮಂಕಾಗಲಿದೆ. ಜೊತೆಗೆ ವಯುಕ್ತಿಕ ಸುಖಿ ಬದುಕು ಬೀದಿಗೆ ಬರಲಿದೆ. ಮೊಬೈಲ್, ಸೋಶಿಯಲ್ ಮೀಡಿಯಾ, ಬೇಡದ ಆಕರ್ಷಣೆಗೆ ಕಡಿವಾಣ ಬೇಕಿದೆ.