ಗುರುಗಳ ಸೇವೆಗೆ ನಮ್ಮ ಸಲಾಂ!
ಪ್ರತಿವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. 1962ರಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ದಿನ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಕಾರಣಕರ್ತರು. “ಶಿಕ್ಷಕರು ಯಾವುದೇ ದೇಶದ ಅತ್ಯುತ್ತಮ ಮೆದುಳುಗಳಾಗಬೇಕು” ಎಂದು ಅಂದು ಡಾ. ರಾಧಾಕೃಷ್ಣನ್ ಕರೆ ನೀಡಿದ್ದರು. ರಾಧಾಕೃಷ್ಣನ್ ಅವರ ಜನ್ಮದಿನವಾದ ಈ ದಿನವನ್ನು ನಾವು ಅವರ ಆಸೆಯನ್ವಯ ಶಿಕ್ಷಕರ ದಿನವಾಗಿ ಆಚರಿಸುತ್ತಿದ್ದೇವೆ. ದೇಶದ ಭವಿಷ್ಯವಾದ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ ನಾವೆಲ್ಲರೂ ನೀಡೋ ಒಂದು ಸಣ್ಣ ಗೌರವವಾಗಿದೆ.
ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಸಹಾ ಒಂದು ಕಾರಣವಿದೆ. ಒಮ್ಮೆ ರಾಧಾಕೃಷ್ಣನ್ ಅವರ ಪ್ರೀತಿಯ ವಿದ್ಯಾರ್ಥಿಗಳು ಬಳಿ ಬಂದು ತಮ್ಮ ಹುಟ್ಟಿದ ಹಬ್ಬವನ್ನು ಬಲು ವಿಜೃಂಭಣೆಯಿಂದ ಆಚರಿಸುವುದಾಗಯೂ, ತಾವು ಖಂಡಿತಾ ಬರಬೇಕು ಎಂದು ಆಹ್ವಾನಿಸಿದರಂತೆ. ಅದಕ್ಕುತ್ತರವಾಗಿ ಶಿಕ್ಷಕರ ಬಗ್ಗೆ ಅಪಾರವಾದ ಗೌರವ ಹೊಂದಿದ್ದ ಡಾ. ರಾಧಾಕೃಷ್ಣನ್ ರವರು ತಮ್ಮ ಹುಟ್ಟಿದ ದಿನವನ್ನು ತನ್ನ ಹುಟ್ಟುಹಬ್ಬವನ್ನಾಗಿ ಆಚರಿಸುವ ಬದಲು ‘ಶಿಕ್ಷಕರ ದಿನ’ವೆಂದೇಕೆ ಆಚರಿಸಬಾರದು? ಇದರಿಂದ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದರಂತೆ. ಹಾಗೇ ಅವರ ಇಚ್ಛೆಯನುಗುಣ ಈ ದಿನವನ್ನು ಶಿಕ್ಷಕರಿಗಾಗಿ ಸಮರ್ಪಿಸಿ ಶಿಕ್ಷಕರ ದಿನವನ್ನಾಗಿ ಆಚರಿಸುತ್ತೇವೆ.
ಆಕೃತಿ ರಹಿತ ಕಲ್ಲುಬಂಡೆಯನ್ನು ಶಿಲ್ಪಿಯೊಬ್ಬ ಕೆತ್ತಿ ಸುಂದರವಾದ ಮೂರ್ತಿ ತಯಾರು ಮಾಡುವುದಕ್ಕಿಂತ ಕಷ್ಟ ಸಾಧ್ಯವಾದ ಕೆಲಸ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುವುದು. ಹೌದು ಈಗಷ್ಟೇ ಪ್ರಪಂಚದತ್ತ ದಾಪುಗಾಲಿಡೋ ಮಕ್ಕಳಿಗೆ ವಿದ್ಯಾರ್ಥಿಗಳೆಂಬ ಪಟ್ಟ ಕಟ್ಟಿ, ಆಟ ಪಾಠಗಳ ಮೂಲಕ ಹತೋಟಿಯಲ್ಲಿಟ್ಟುಕೊಂಡು ಚಂಚಲ ಚಿತ್ತದ ವಿದ್ಯಾರ್ಥಿಯ ಬುದ್ಧಿಯನ್ನು ತಿದ್ದಿ ಅವನನ್ನು ಸತ್ಪ್ರಜೆಯಾಗಿಸುವುದು ಪ್ರಯಾಸದ ಕೆಲಸ. ಇಂಥ ಮಹಾ ಕಾರ್ಯವನ್ನು ಶಿಕ್ಷಕರು ಮಾತ್ರ , ಕೇವಲ ಶಿಕ್ಷಕರು ಮಾತ್ರ ಮಾಡಬಲ್ಲರು.
ಹೊರ ಪ್ರಪಂಚದ ಜ್ಞಾನ, ನಡವಳಿಕೆ, ಮಾತುಗಾರಿಕೆ, ಗುರಿ, ದೈರ್ಯ, ಆತ್ಮ ಸ್ಥೈರ್ಯ, ಎದೆಗಾರಿಕೆ, ಸಹಾಯಪ್ರಜ್ಞೆ, ಅನುಕಂಪ ಹತ್ತುಹಲವು ಉತ್ತಮವಾದ ಗುಣಗಳನ್ನು ಏನೂ ತಿಳಿಯದ ಒಂದ ಮುಗ್ಧ ಮಗುವಿಗೆ ತಿಳಿಹೇಳೋ ಕಾರ್ಯ ಶಿಕ್ಷಕರದು.
ತಂದೆ ತಾಯಿ ಪೋಷಕರ ಹೊರತಾಗಿ ನಮ್ಮ ಬಗ್ಗೆ ಅತ್ಯಂತ ಕಾಳಜಿ, ಬದುಕು ರೂಪಿಸಬೇಕೆಂಬ ತುಡಿತ ಇರುವುದು ಶಿಕ್ಷಕನಿಗೆ ಮಾತ್ರ.
ಅ,ಆ ಎಂಬ ವರ್ಣಮಾಲೆಯಿಂದ ಆರಂಭವಾಗಿ ಉನ್ನತ ಶಿಕ್ಷಣ ನೀಡೋವರೆಗೂ ಪ್ರತಿಯೊಬ್ಬ ಶಿಕ್ಷಕನೂ ನಿಜವಾಗಿಯೂ ತನ್ನ ಶಕ್ತಿ ಮೀರಿ ವಿದ್ಯಾರ್ಥಿಗಳ ಬೆಳವಣಿಗೆಗೆ ಶ್ರಮಿಸುತ್ತಾರೆ. ಹಾಗೇ ಶಿಕ್ಷಕರ ಮೇಲೆ ಅಭಿಮಾನವಿರಲಿ, ಗೌರವವಿರಲಿ, ಅವರ ಮುಂದೆ ನಾವೆಷ್ಟೇ ಬೆಳೆದರು ತಲೆಬಾಗೋ ಗುಣವಿರಲಿ.
“ಒಂದು ಪ್ರಜ್ವಲಿಸುವ ದೀಪ ಮಾತ್ರ ಇನ್ನೊಂದು ದೀಪವನ್ನು ಬೆಳಗಿಸಬಲ್ಲುದು”
ಪ್ರತಿಯೊಬ್ಬ ಶಿಕ್ಷಕರಿಗೂ ಶಿಕ್ಷಕರ ದಿನದ ಶುಭಾಶಯಗಳು
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.