ಶಿವಮೊಗ್ಗ ಜಿಲ್ಲೆಗೆ ತೀರ್ಥಹಳ್ಳಿ ವಾಗ್ದೇವಿ ಟಾಪರ್!
– ತೀರ್ಥಹಳ್ಳಿಯ ವಾಗ್ದೇವಿ ಶಾಲೆಯ ಸಾಧನೆ
– ಸತತ 17 ವರ್ಷಗಳಿಂದ 100% ಫಲಿತಾಂಶ
– ತೀರ್ಥಹಳ್ಳಿಗೆ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದೆಲ್ಲೆಡೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ತೀರ್ಥಹಳ್ಳಿಯ ವಾಗ್ದೇವಿ ಶಾಲೆಯಲ್ಲಿ 115 ಜನ ವಿದ್ಯಾರ್ಥಿಗಳಿದ್ದು,115 ಜನ ವಿದ್ಯಾರ್ಥಿಗಳು ಕೂಡ ಉತ್ತಿರ್ಣಗೊಂಡಿದ್ದಾರೆ. ಸತತವಾಗಿ 17 ವರ್ಷ ಶೇ.100ರ ಫಲಿತಾಂಶ ದಾಖಲು ಮಾಡಿದೆ. 14 ಜನ ವಿದ್ಯಾರ್ಥಿಗಳು 600 ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ್ದು, ಕೃತಿಕಾ ಕೆ ಅವರು 621(99.36)ಅಂಕ ಪಡೆದು ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದಿದ್ದಾರೆ. ಛಾಯಾ ಎಸ್ ಅವರು 620(99.2) ಅಂಕ ಪಡೆದು ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದಿದ್ದಾರೆ. ಒಟ್ಟು 76 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ತೀರ್ಥಹಳ್ಳಿಯ ವಾಗ್ದೇವಿ ಶಾಲೆಯು ಸತತ 17 ವರ್ಷಗಳಿಂದ 100% ರಿಸಲ್ಟ್ ಪಡೆದುಕೊಂಡಿದೆ.
ಪ್ರಥಮ ಸ್ಥಾನ ಪಡೆದ ವಾಗ್ಗೇವಿ ಆಂಗ್ಲಮಾಧ್ಯಮ ಪ್ರೌಢಶಾಲೆ
ಎರಡು ರ್ಯಂಕ್ ಹಾಗೂ ಶೇಕಡಾ 100 ಫಲಿತಾಂಶವನ್ನು ಪಡೆಯುವುದರ ಮೂಲಕ ಜಿಲ್ಲೆಗೆ ಮತ್ತೊಮ್ಮೆ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಕ್ಕೆ 2 ರಾಂಕ್ ಗಳನ್ನು ನೀಡಿರುತ್ತದೆ. ರಂಜದಕಟ್ಟೆಯ ಕೃಷ್ಣಮೂರ್ತಿ ಪ್ರಭು ಹಾಗೂ ವಿದ್ಯಾ ಪ್ರಭು ಇವರ ಪುತ್ರಿ ಕೃತಿಕಾ ಕೆ 625 ಕ್ಕೆ 621 ಅಂಕಗಳನ್ನು ಪಡೆದು ರಾಜ್ಯಕ್ಕೆ 5 ನೇ ರಾಂಕ್ ಹಾಗೂ ಯಡೇಹಳ್ಳಿಕೆರೆಯ ಎ.ಆರ್. ಷಣ್ಮುಗಂ ಹಾಗೂ ಆಶಾ ಎಂ ಇವರ ಪುತ್ರಿ ಛಾಯಾ ಎಸ್ 625 ಕ್ಕೆ 620 ಅಂಕಗಳನ್ನು ಪಡೆದು ರಾಜ್ಯಕ್ಕೆ 6 ನೇಯ ರಾಂಕ್ ಅನ್ನು ಪಡೆದಿದ್ದಾರೆ.
76 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯನ್ನು, 39 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರ ಈ ಸಾಧನೆಯನ್ನು ವಾಗ್ಗೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಪೋಷಕರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.
ತೀರ್ಥಹಳ್ಳಿಗೆ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು