ವಾಗ್ದೇವಿ ಪಿಯು ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮತ್ತೊಂದು ಸ್ಥಾನ
– ದ್ವಿತೀಯ ಪಿಯುಸಿ ಪರೀಕ್ಷೆ 2 ರಲ್ಲಿ ಅನನ್ಯಗೆ ರಾಜ್ಯಕ್ಕೆ ಒಂಬತ್ತನೇ ಸ್ಥಾನ
NAMMUR EXPRESS NEWS
ತೀರ್ಥಹಳ್ಳಿ : ದ್ವಿತೀಯ ಪಿಯುಸಿ ಪರೀಕ್ಷೆ 2ರ ವಿಜ್ಞಾನ ವಿಭಾಗದಲ್ಲಿ ತೀರ್ಥಹಳ್ಳಿ ವಾಗ್ದೇವಿ ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಬಿ ಆರ್ 600ಕ್ಕೆ 590 ಅಂಕಗಳಿಸಿ ರಾಜ್ಯಕ್ಕೆ ಒಂಬತ್ತನೇ ಸ್ಥಾನ ಪಡೆದಿದ್ದಾರೆ. ಅನನ್ಯ ತೀರ್ಥಹಳ್ಳಿ ಸಮೀಪದ ಭಾರತೀಪುರದ ರಾಘವೇಂದ್ರ, ವಾಣಿ ದಂಪತಿಗಳ ಪುತ್ರಿ. ಈ ವರ್ಷ ವಾಗ್ಗೇವಿ ಕಾಲೇಜು ಈ ಬಾರಿ ಒಟ್ಟು ರಾಜ್ಯಕ್ಕೆ ಮೂರು ಸ್ಥಾನ ಪಡೆದಿದ್ದು ವಾಣಿಜ್ಯ ಹಾಗೂ ವಿಜ್ಞಾನ ಎರಡು ವಿಭಾಗದಲ್ಲಿ ಕೂಡ ರಾಜ್ಯಕ್ಕೆ ಆರನೇ ರ್ಯಾಂಕ್ ಹಾಗೂ ವಿಜ್ಞಾನ ವಿಭಾಗದಲ್ಲಿ ಒಂಬತ್ತನೆ ರ್ಯಾಂಕ್ ಪಡೆದಿದೆ. ವಾಣಿಜ್ಯ ವಿಭಾಗದಲ್ಲಿ ಕೃತಿಕಾ ಹೆಬ್ಬಾರ್ ಆರನೇ ರ್ಯಾಂಕ್ , ಹಾಗೂ ವಿಜ್ಞಾನ ವಿಭಾಗದಲ್ಲಿ ಸುಚಿಂತ್ ಎಸ್ 593 ಅಂಕಗಳನ್ನು ಪಡೆದು ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದಿದ್ದಾರೆ. ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.