ಹಳ್ಳಿ ಹುಡುಗಿ ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯಕ್ಕೆ ಟಾಪರ್!
– ಬಾಗಲಕೋಟೆ ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ
– ರಾಜ್ಯಕ್ಕೆ 76.91 ಫಲಿತಾಂಶ: 7 ಮಂದಿಗೆ ದ್ವಿತೀಯ ಸ್ಥಾನ:
NAMMUR EXPRESS NEWS
ಬೆಂಗಳೂರು: 2023-24ನೇ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಬಾಗಲಕೋಟೆ ಜಿಲ್ಲೆಯ ಮುಧೋಳದ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು 625/625ಕ್ಕೆ ಅಂಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು 7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ
ಮೊದಲ ಸ್ಥಾನ
ಅಂಕಿತಾ ಬಸಪ್ಪ ಕೊನ್ನೂರು (ಬಾಗಲಕೋಟೆ) 625/625 (ಪ್ರಥಮ
ಎರಡನೇ ಸ್ಥಾನ
ಮೇದಾ ಪಿ ಶೆಟ್ಟಿ (ಬೆಂಗಳೂರು) 625ಕ್ಕೆ 624 ಅಂಕ
ಹರ್ಷಿತಾ ಡಿಎಂ (ಮಧುಗಿರಿ) 625ಕ್ಕೆ 624 ಅಂಕ
ಚಿನ್ಮಯ್ (ದಕ್ಷಿಣ ಕನ್ನಡ) 625ಕ್ಕೆ 624 ಅಂಕ
ಸಿದ್ದಾಂತ್ (ಚಿಕ್ಕೊಡಿ) 625ಕ್ಕೆ 624 ಅಂಕ
ದರ್ಶನ್ (ಶಿರಸಿ) 625ಕ್ಕೆ 624 ಅಂಕ
ಚಿನ್ಮಯ್ (ಶಿರಸಿ) 625ಕ್ಕೆ 624 ಅಂಕ
ಶ್ರೀರಾಮ್ (ಶಿರಸಿ) 625ಕ್ಕೆ 624 ಅಂಕ
ಎಸ್ಎಸ್ಎಲ್ಸಿ ಟಾಪರ್ ಅಂಕಿತಾ ಐಎಎಸ್ ಆಗುವಾಸೆ!
ಎಸ್ಎಸ್ಎಲ್ಸಿ ಟಾಪರ್ ಅಂಕಿತಾ ಕೊನ್ನೂರು ಪ್ರತಿಕ್ರಿಯಿಸಿದ್ದು, ಪಿಯುಸಿಯಲ್ಲಿ ವಿಜ್ಞಾನ ವಿಭಾಗ ತೆಗೆದುಕೊಳ್ಳುತ್ತೇನೆ. ಭವಿಷ್ಯದಲ್ಲಿ ನಾನು ಐಎಎಸ್ ಮಾಡುವ ಕನಸು ಹೊಂದಿದ್ದೇನೆ ಎಂದು ಹೇಳಿದ್ದಾರೆ. ಹಾಸ್ಟೆಲ್ನಲ್ಲಿ ಓದುತ್ತಿದ್ರಿಂದ ಮೊಬೈಲ್ ಬಳಕೆಗೆ ಅವಕಾಶ ಇರಲಿಲ್ಲ. ಪಠ್ಯಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದಾಗ ಮಾತ್ರ ಯೂಟ್ಯೂಬ್ನಲ್ಲಿ ಸರ್ಚ್ ಮಾಡುತ್ತಿದ್ದೆ. ಹಾರ್ಡ್ವರ್ಕ್ ಮಾಡಿದ್ರೆ ಸಕ್ಸಸ್ ಆಗಲು ಸಹಾಯವಾಗುತ್ತೆ ಎಂದು ಹೇಳಿದ್ದಾರೆ.
ಯಾರಿಗೆ ಯಾವ ಸ್ಥಾನ?
ಉಡುಪಿ ಪ್ರಥಮ ಸ್ಥಾನ(94%) ಪಡೆದಿದೆ. ದ್ವಿತೀಯ ಸ್ಥಾನ ದಕ್ಷಿಣ ಕನ್ನಡ(92.12%) ಜಿಲ್ಲೆಗೆ ಸಿಕ್ಕಿದ್ದು ಶಿವಮೊಗ್ಗ (88.67%) ಮೂರನೇ ಸ್ಥಾನ ಪಡೆದಿದೆ. 7 ವಿದ್ಯಾರ್ಥಿಗಳಿಗೆ 625ಕ್ಕೆ 624 ಅಂಕಗಳು ಬಂದಿವೆ. ದಕ್ಷಿಣ ಕನ್ನಡದ ಚಿನ್ಮಯ್, ಚಿಕ್ಕೋಡಿಯ ಸಿದ್ದಾಂತ್, ಮಧುಗಿರಿಯ ಹರ್ಷಿತಾ ಡಿ. ಎಂ, ಬೆಂಗಳೂರಿನ ವೇದಾ ಪಿ ಶೆಟ್ಟಿ, ಉಡುಪಿಯ ಸಹನಾ, ಶಿರಸಿಯ ದರ್ಶನ್, ಚಿನ್ಮಯ್, ಸಿದ್ದಾಂತ್ ಕೂಡಾ ದ್ವೀತಿಯ ಸ್ಥಾನದಲ್ಲಿದ್ದಾರೆ.
ರಾಜ್ಯಕ್ಕೆ 76.91 ಫಲಿತಾಂಶ
2024ರ ಮಾ.25ರಿಂದ 2024ರ ಏಪ್ರಿಲ್ 6ರವರೆಗೆ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆ-1ರಲ್ಲಿ 441910 ವಿದ್ಯಾರ್ಥಿಗಳು, 428058 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 6,31,204 ವಿದ್ಯಾರ್ಥಿಗಳು ಪಾಸ್ ಆಗಿದ್ದು ಈ ಬಾರಿ ರಾಜ್ಯಾದ್ಯಂತ 76.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.