–ಊಟವಾದ ತಕ್ಷಣ ಈ ಕೆಲಸಗಳನ್ನು ಮಾಡಬೇಡಿ.
ಆಹಾರ ಸೇವನೆಯಿಂದ ಪೋಷಕಾಂಶ ನಮ್ಮ ದೇಹ ಸೇರುತ್ತದೆ. ಆಹಾರ ಶಕ್ತಿಯನ್ನು ನೀಡುತ್ತದೆ. ನಾವು ಸೇವಿಸಿದ ಆಹಾರದ ಸಂಪೂರ್ಣ ಪೋಷಕಾಂಶ ನಮ್ಮ ದೇಹ ಸೇರ ಬೇಕೆಂದರೆ ಊಟವಾದ ನಂತರ ನಾವು ಕೆಲವೊಂದು ತಪ್ಪುಗಳನ್ನು ಮಾಡಬಾರದು.
ಸಾಮಾನ್ಯವಾಗಿ ಊಟವಾದ ತಕ್ಷಣ ಅನೇಕರು ನೀರನ್ನು ಕುಡಿಯುತ್ತಾರೆ. ಇದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗದೇ ಕಿಣ್ವದ ಮೇಲೆ ಪರಿಣಾಮ ಬೀರುತ್ತದೆ. ಊಟವಾದ ಒಂದು ಗಂಟೆ ನಂತರ ನೀರು ಕುಡಿಯಬೇಕು ಅಗತ್ಯವೆನಿಸಿದರೆ ಮಾತ್ರಾ ಊಟದ ಮಧ್ಯೆ ಸ್ವಲ್ಪ ನೀರು ಸೇವನೆ ಮಾಡಿ.
ಆಹಾರ ಸೇವನೆ ಮಾಡಿದ ತಕ್ಷಣ ಟೀ, ಕಾಫಿ, ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಬೇಡಿ. ಇದರಿಂದ ದೇಹಕ್ಕೆ ಕಬ್ಬಿಣದಾಂಶದ ಕೊರತೆಯಾಗುತ್ತದೆ ಮತ್ತು ರಕ್ತ ಹೀನತೆ ಉಂಟಾಗಬಹುದು..
ಕೆಲವರು ಆಹಾರ ಸೇವನೆ ಮಾಡಿದ ತಕ್ಷಣ ಧೂಮಪಾನ ಮಾಡುತ್ತಾರೆ. ಇದು ಆರೋಗ್ಯಕ್ಕೆ ತುಂಬ ಹಾನಿಕಾರಕ. ಆಹಾರ ಸೇವನೆ ಮಾಡಿದ ತಕ್ಷಣ ಒಂದು ಸಿಗರೇಟ್ ತೆಗೆದುಕೊಳ್ಳುವುದು 10ಸಿಗರೇಟ್ ಸೇರಿದಂತೆ ಆಗುತ್ತದೆ.
ಇನ್ನು ಕೆಲವರು ಆಹಾರ ಸೇವನೆ ಮಾಡಿದ ತಕ್ಷಣ ಸ್ನಾನ ಮಾಡುತ್ತಾರೆ. ಇದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಮತ್ತು ರಕ್ತ ಪರಿಚಲನೆ ಮೇಲೆ ಇದು ಪರಿಣಾಮ ಬೀರುತ್ತದೆ.