- ಆರೋಗ್ಯ ಸೇವೆಗೆ “ಕಿರಣ್ ಹೆಲ್ತ್ ಕೇರ್” ಸಿದ್ಧ
- ಡಾ.ಗಣೇಶ ನಾಯಕ್ ಮಾಲಿಕತ್ವದ ಆಸ್ಪತ್ರೆ
ತೀರ್ಥಹಳ್ಳಿ: ಆರೋಗ್ಯ ಮತ್ತು ಚಿಕಿತ್ಸೆ ಸೇವೆಗಳಲ್ಲಿ ಕರಾವಳಿ ಮತ್ತು ಮಲೆನಾಡು ಮುಂಚೂಣಿಯಲ್ಲಿದೆ. ಈ ನಡುವೆ ಕರಾವಳಿ ಮ್ತು ಮಲೆನಾಡಿನ ಸಂಪರ್ಕ ಕೊಂಡಿಯಾಗಿರುವ ತೀರ್ಥಹಳ್ಳಿಯಲ್ಲಿ ಇದೀಗ ಕಿರಣ್ ಹೆಲ್ತ್ ಕೇರ್ ಎಂಬ ಹೈಟೆಕ್ ಆಸ್ಪತ್ರೆ ಶುಭಾರಂಭ ಮಾಡಿದೆ.
ದಶಕಗಳ ಕಾಲ ಆರೋಗ್ಯ ಸೇವೆಯನ್ನು ಮಲೆನಾಡಿನ ಜನತೆಗೆ ನೀಡಿರುವ ಕಿರಣ್ ಕ್ಲಿನಿಕ್ನ ಡಾ.ಗಣೇಶ್ ನಾಯಕ್ ಮಾಲಿಕತ್ವದ ಈ ಆಸ್ಪತ್ರೆ ಅತ್ಯಾಧುನಿಕ ಹಾಗೂ ಹೈಟೆಕ್ ಸೌಲಭ್ಯ ಹೊಂದಿದೆ. ಜೊತೆಗೆ ಶಾಂತ ಪ್ರದೇಶದಲ್ಲಿದ್ದು, ನ.20ರಂದು ಉದ್ಘಾಟನೆಗೊಂಡಿದೆ. ಆಸ್ಪತ್ರೆಯ ಉದ್ಘಾಟಕರಾಗಿ ಡಾ.ವೆಂಕಟೇಶ್ (FMMC,Manipal) ಹಾಗೂ ಮುಖ್ಯ ಅತಿಥಿಗಳಾಗಿ ಟಿ.ವಿ.ಗಜೇಂದ್ರನಾಥ್ ಮತ್ತು ಹೇಮಲತಾ ಕೊರಣ್ಣನವರ್ ಆಗಮಿಸಿದ್ದರು. ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ಸೇರಿದಂತೆ ಗಣ್ಯಾತಿಗಣ್ಯರು ಹೊಸ ಆಸ್ಪತ್ರೆ ಯಶಸ್ಸಿಗೆ ಶುಭ ಕೋರಿದ್ದಾರೆ.
ತೀರ್ಥಹಳ್ಳಿಯ ಕೊಪ್ಪ ಸರ್ಕಲ್ನಿಂದ ಹಳೇ ಕೋರ್ಟ್ ಮಾರ್ಗದಲ್ಲಿ ಆರಂಭವಾಗಿರುವ ಕಿರಣ್ ಹೆಲ್ತ್ಕೇರ್ ಆರೋಗ್ಯ ಸೇವೆಗಳನ್ನು ಜನತೆಗೆ ನೀಡಲು ಸಿದ್ಧವಾಗಿದೆ. ಕರಾವಳಿ, ಶಿವಮೊಗ್ಗದ ಆಸ್ಪತ್ರೆಗಳಂತೆ ಎಲ್ಲಾ ವಿಭಾಗದ ಸೇವೆ ನೀಡಲು ಸಿದ್ಧವಾಗುತ್ತಿದೆ.
ಡಾ.ಗಣೇಶ್ ನಾಯಕ್ ನೇತೃತ್ವದ ವೈದ್ಯರು ಮತ್ತು ಸಿಬ್ಬಂದಿಯ ತಂಡ, ಮೆಡಿಕಲ್, ಲ್ಯಾಬೋರೋಟರಿ, ತುರ್ತು ಘಟಕ, ಆಪ್ತ ಸಮಾಲೋಚನೆ, ವಿಶೇಷ ಬೆಡ್ ವ್ಯವಸ್ಥೆ ಸೇರಿ ಎಲ್ಲಾ ವ್ಯವಸ್ಥೆಗಳನ್ನು ಆಸ್ಪತ್ರೆ ಹೊಂದಿದೆ.
ತೀರ್ಥಹಳ್ಳಿಯಲ್ಲಿ ಈಗಾಗಲೇ ಮೇಳಿಗೆ, ಅನುರಾಧ, ಮಾನಸ, ಪ್ರಶಾಂತಿ ಚಿಕಿತ್ಸಾಲಯ, ಆಶ್ವಿನಿ ಕ್ಲಿನಿಕ್, ಪೂಜ್ಯಪಾದ ಸೇರಿದಂತೆ ಅನೇಕ ಆಸ್ಪತ್ರೆಗಳಿವೆ. ಮಲ್ನಾಡ್ ಡಯಾಗ್ನಿಸಿಸ್ ಸೆಂಟರ್, ನ್ಯಾಷಿನಲ್ನಂತಹ ಲ್ಯಾಬೋರೋಟರಿ ಆರೋಗ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿವೆ. ಬಡ, ಮಧ್ಯಮ ವರ್ಗದವರಿಗೆ ಉತ್ತಮ ಸೇವೆ ನೀಡುವ ಸರ್ಕಾರಿ ಆಸ್ಪತ್ರೆಯೂ ಇದೆ. ಈ ನಡುವೆ ಕಿರಣ್ ಹೆಲ್ತ್ ಕೇರ್ ಆರೋಗ್ಯ ಸೇವೆ ನೀಡಲು ಸಜ್ಜಾಗಿದೆ.