-ಇಲ್ಲಿದೆ ಸೂಕ್ತ ಸಲಹೆಗಳು
ಕೀಟೋ ಎನ್ನುವುದು ಇಂದು ಬೊಜ್ಜು ದೇಹದವರಿಗೆ ತೂಕ ಇಳಿಸಲು ಇರುವ ಒಂದು ಆಹಾರ ಪದ್ಧತಿ.
ಆಧುನಿಕ ಯುಗದಲ್ಲಿ ಪ್ರತಿಯೊಬ್ಬರ ದೇಹದಲ್ಲೂ ಬೊಜ್ಜು ಆವರಿಸಿಕೊಂಡು ಬಿಟ್ಟಿದೆ. ಇದಕ್ಕಾಗಿ ಅವರು ಹಲವಾರು ರೀತಿಯ ಪಥ್ಯ, ಆಹಾರ ಕ್ರಮ ಹಾಗೂ ವ್ಯಾಯಾಮ ಮಾಡುವರು. ಆದರೆ ಎಲ್ಲರಿಗೂ ತಾವು ನಿರೀಕ್ಷೆ ಮಾಡಿದಂತಹ ಫಲ ಸಿಗುವುದಿಲ್ಲ.
ಹೀಗಾಗಿ ಒಂದನ್ನು ಬಿಟ್ಟು, ಮತ್ತೊಂದನ್ನು ಪ್ರಯತ್ನಿಸುತ್ತಿರುವರು. ಅದರಲ್ಲೂ ಹೆಚ್ಚಿನ ಜನರು ಬೊಜ್ಜು ಕರಗಿಸಲು ಕೀಟೋ ಆಹಾರ ಕ್ರಮದ ಮೊರೆ ಹೋಗಿರುವರು. ಇದರಿಂದ ಹಲವಾರು ಲಾಭಗಳು ಇದ್ದರೂ ಕೆಲವರು ಇದನ್ನು ಪಾಲಿಸಿದರೆ, ಅವರಿಗೆ ದೇಹದಲ್ಲಿ ವ್ಯತಿರಿಕ್ತ ಪರಿಣಾಮಗಳು ಕಂಡುಬರುತ್ತಿವೆ.
ಕಡಿಮೆ ಕಾರ್ಬ್ಸ್ ಮತ್ತು ಅಧಿಕ ಕೊಬ್ಬು ಇರುವಂತಹ ಈ ಆಹಾರ ಕ್ರಮವು ತೂಕ ಇಳಿಸಲು ಸಹಕಾರಿ ಆಗಿರುವುದು ಮಾತ್ರವಲ್ಲದೆ ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು. ಆದರೆ ದೀರ್ಘ ಸಮಯ ಅಧಿಕ ಕೊಬ್ಬು ಇರುವಂತಹ ಆಹಾರ ಸೇವನೆ ಮಾಡಿದರೆ ಅದು ದೇಹಕ್ಕೆ ಬೇರೆ ಅಡ್ಡ ಪರಿಣಾಮಗಳನ್ನು ಬೀರಬಹುದು.
ದೀರ್ಘಕಾಲ ತನಕ ಅಧಿಕ ಕೊಬ್ಬು ಇರುವ ಆಹಾರ ಸೇವನೆ ಮಾಡಿದರೆ ಅದರಿಂದ ಕಿಡ್ನಿಯಲ್ಲಿ ಕಲ್ಲು ಬರುವುದು ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಕೆಲವೊಂದು ಆರೋಗ್ಯ ಸಮಸ್ಯೆಗಳು ಇರುವ ಜನರು ಕೀಟೋ ಆಹಾರ ಕ್ರಮವನ್ನು ಕಡೆಗಣಿಸಬೇಕು ಎಂದು ಆಹಾರ ತಜ್ಞರು ಹೇಳುವರು.