- ಇಳಿಕೆ ಕಂಡಿದ್ದ ಕೇಸ್ ಒಂದೇ ದಿನದಲ್ಲಿ ಏರಿಕೆ
- ಒಂದೇ ದಿನ 20 ಮಂದಿ ಸಾವು
ಬೆಂಗಳೂರು: ಕೆಲವು ದಿನಗಳಿಂದ ತಣ್ಣಗಾಗಿದ್ದ ಕರೋನಾ ರಾಜ್ಯದಲ್ಲಿ ಮತ್ತೆ ತನ್ನ ಎರಡನೇ ಅವತಾರ ತೋರಿಸಲು ಶುರು ಮಾಡಿದ್ದಾನೆ. ಶನಿವಾರ ಒಂದೇ ದಿನ 1,781 ಸೋಂಕು ದೃಢಪಟ್ಟಿದ್ದು, ಒಟ್ಟು 871342 ಪ್ರಕರಣಗಳು ವರದಿಯಾಗಿವೆ.
20 ಜನರು ಬಲಿಯಾಗಿದ್ದು, ಒಟ್ಟು ಬಲಿಯಾದವರ ಸಂಖ್ಯೆ 11,641ಕ್ಕೆ ಏರಿಕೆಯಾಗಿದೆ. ಈ ಮೂಲಕ ರಾಜ್ಯದಲ್ಲಿ 24,714 ಸಕ್ರಿಯ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಚಳಿ ಹೆಚ್ಚಾದಂತೆ ಕರೋನಾ ಕೂಡ ಹೆಚ್ಚಾಗುತ್ತಿದೆ. ಡಿಸೆಂಬರ್ ವೇಳೆಗೆ ಮತ್ತಷ್ಟು ಪ್ರಕರಣಗಳು ಹೆಚ್ಚಾಗಲಿದೆ ಎಂದು ಹೇಳಲಾಗಿದೆ.