ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?
NAMMUR EXPRESS NEWS
2024 ಜುಲೈ 12ರ ಶುಕ್ರವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.?
ಮೇಷ ರಾಶಿ : ನಿಮ್ಮ ವೇಗದ ಮಾತು ಇತರರಿಗೆ ಅರ್ಥವಾಗದೇ ಇರಬಹುದು. ನಿಮ್ಮ ಪಾಲಿಗೆ ಅನುಕೂಲತೆಯನ್ನು ಒದಗಿಸಿಕೊಟ್ಟೀತು. ಸಹೋದ್ಯೋಗಿಗಳಿಂದ ನೀವು ಕಛೇರಿಯಲ್ಲಿ ಸಹಾಯ ಪಡೆಯುವ ಸಾಧ್ಯತೆ ಇದೆ. ಪುಣ್ಯ ಕರ್ಮವು ನಿಮ್ಮನ್ನು ಆಪತ್ತಿನಿಂದ ರಕ್ಷಿಸುವುದು. ನೀವು ಸುಲಭವಾಗಿ ಎದುರಿಸಬಲ್ಲಿರಿ. ನೀವು ಆತ್ಮವಿಶ್ವಾಸದಿಂದ ಮುನ್ನಡೆಯಿರಿ.
ವೃಷಭ ರಾಶಿ : ಒತ್ತಡ ಮಾಡಿಕೊಂಡು ಕಾರ್ಯವನ್ನು ಮಾಡುವುದು ಬೇಡ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ ಕಷ್ಟಪಡುವರು. ಬಂಧುಗಳು ನಿಮ್ಮನ್ನು ನಿರ್ಲಕ್ಷ್ಯ ಮಾಡಬಹುದು. ನಿಮ್ಮ ಯೋಚನೆಗಳು ಬಹಳ ಬಲಿಷ್ಠವೆಂದು ಅರ್ಥವಾಗುವ ದಿನ ಇಂದು. ಉದ್ಯೋಗದಲ್ಲಿ ನಿಧಾನಗತಿ ಇರಲಿದೆ. ನಿಮ್ಮನ್ನು ನಿರ್ಲಕ್ಷಿಸಿದರೆ ನಿಮಗೇನು ಆಗದು. ಸಹೋದ್ಯೋಗಿಗಳು ನಿಮಗೆ ತೊಂದರೆ ಕೊಡಬಹುದು. ನಿಮ್ಮ ಕೆಲಸವು ಸಮಯಕ್ಕೆ ಸರಿಯಾಗಿ ಮುಗಿಯದು. ಅಧಿಕ ಖರ್ಚಿನಲ್ಲಿ ನಿಮ್ಮ ಗುರಿಯನ್ನು ಸಾಧಿಸಬಹುದಾಗಿದೆ.
ಮಿಥುನ ರಾಶಿ : ಅನ್ಯರಿಂದ ಅಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ನೀವು ಧೈರ್ಯವನ್ನು ಬಿಡಲಾರಿರಿ. ವೃತ್ತಿಜೀವನದಲ್ಲಿ ಕೆಲವು ದೊಡ್ಡ ಬದಲಾವಣೆಗಳು ನಿಮ್ಮ ಪರವಾಗಿರಲಿದೆ. ಎಷ್ಟೋ ವರ್ಷದ ಸಾಲವು ಇಂದು ಮುಕ್ತಾಯವಾಗಲಿದೆ. ಕೆಲಸದ ಒತ್ತಡವು ಅಧಿಕವಿದ್ದರೂ ಇಂದಿನ ಕೆಲಸವನ್ನು ಇಂದೇ ಮುಗಿಸುವುದು ಉತ್ತಮ. ನಿಮ್ಮ ಮಾತುಗಳ ಮೇಲೆ ಗಮನವಿರಲಿ. ಯಾವುದೋ ಆಲೋಚನೆಯಲ್ಲಿ ಮಗ್ನರಾಗುವಿರಿ.
ಕಟಕ ರಾಶಿ : ನಿಮ್ಮ ಪ್ರಾಮಾಣಿಕತೆಯನ್ನು ತೋರಿಸುವ ಅವಶ್ಯಕತೆ ಇಲ್ಲ. ಸಾಮಾಜಿಕವಾಗಿ ಯಾವುದೇ ಕೆಲಸವನ್ನು ಮಾಡಲು ಅದರ ಬಗ್ಗೆ ಮಾಹಿತಿ ತಿಳಿದಿರಲಿ. ಸ್ವಂತ ಉದ್ಯಮದಲ್ಲಿ ಹೆಚ್ಚು ಪರಿಶ್ರಮ ಇರಬೇಕಾಗಿ ಬರಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ. ಸಣ್ಣ ಪುಟ್ಟ ಅವಮಾನವಾಗುವ ಸಾಧ್ಯತೆ ಇದೆ. ಅಮೂಲ್ಯವಾದ ವಸ್ತುವು ಕಣ್ಮರೆಯಾಗಿ ಅನಂತರ ಸಿಗಲಿದೆ. ಇಂದು ನೀವು ಬಹಳ ಎಚ್ಚರಿಕೆಯಿಂದ ಇರಿ. ನಿಮ್ಮನ್ನು ಕೆಣಕುವ ಸಂಭವವಿದೆ.
ಸಿಂಹ ರಾಶಿ : ಕಾರ್ಯದ ಸ್ಥಳದಲ್ಲಿ ಪ್ರತಿಯೊಬ್ಬರೂ ನಿಮ್ಮ ಕೆಲಸವನ್ನು ಪ್ರಶಂಸಿಸುವರು. ಇಂದು ನಿಮ್ಮ ಸಮಯ ವ್ಯರ್ಥವಾಗಿ ಸುಮ್ಮನೇ ಅಲೆದಾಡವಾಗಬಹುದು. ಸಾಲ ಮಾಡಬೇಕಾದ ಸ್ಥಿತಿಯು ಬರಬಹುದು. ಯಾವ ನಕಾರಾತ್ಮಕ ಚಿಂತೆನೆಗೂ ಕಿವಿಗೊಡದೇ ನಿಮ್ಮ ನಿಷ್ಠೆಯಿಂದ ಕಾರ್ಯವನ್ನು ಸಾಧಿಸುವಿರಿ. ತಾಯಿಯ ಜೊತೆ ಸಿಟ್ಟು ಮಾಡಿಕೊಳ್ಳುವ ಸಂದರ್ಭ ಬರಬಹುದು. ಸಂಶೋಧಕರು ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಕೊಳ್ಳುವರು. ಪ್ರೀತಿಪಾತ್ರರ ಜೊತೆ ಮುಜುಗರ ಇಟ್ಟಕೊಳ್ಳಬೇಕಾಗಬಹುದು.
ಕನ್ಯಾ ರಾಶಿ : ನಿಮ್ಮ ಸಂಕಷ್ಟಕ್ಕೆ ಯಾರನ್ನೋ ದೂರುತ್ತ ಇರುವುದು ಸರಿಯಲ್ಲ. ನಿಮ್ಮ ಹಣೆಯಲ್ಲಿ ಬರೆದಿದ್ದರೆ ಅದು ಆಗುತ್ತದೆ ಎಂಬ ವಿಶ್ವಾಸವಿರಲಿ. ಉದ್ಯೋಗಸ್ಥರಿಗೆ ಆತುರ ಮತ್ತು ಅತಿಯಾದ ಆತ್ಮವಿಶ್ವಾಸ ಎರಡೂ ನಿಮಗೆ ಅಪಾಯಕಾರಿ. ಮಿತ್ರರು ನಿಮಗೆ ಅವಶ್ಯಕತೆ ಇರುವ ಸಹಾಯ ಮಾಡುವರು. ಪ್ರೇಮಪಾಶದಲ್ಲಿ ಬಂಧಿಯಾಗಿದ್ದರೆ ದುಃಖಪಡಬೇಕಾದ ಸನ್ನಿವೇಶವು ಬರಬಹುದು. ಮಕ್ಕಳ ಕಾರಣದಿಂದ ನಿಮಗೆ ಕಷ್ಟವಾಗುವುದು.
ತುಲಾ ರಾಶಿ : ಇಂದು ಮೇಲಧಿಕಾರಿಗಳಿಂದ ಹಲವು ರೀತಿಯ ಒತ್ತಡವನ್ನು ನೀವು ಅನುಭವಿಸುವಿರಿ. ಸ್ಥಿರಾಸ್ತಿಯಿಂದ ನಿಮಗೆ ಸಾಲವು ದೊರೆಯಬಹುದು. ಮಿತ್ರರ ಜೊತೆ ಮಾಡಿದ ವಿವಾದವು ಮನಸ್ತಾಪವನ್ನು ಕೊಟ್ಟೀತು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯು ಇರಲಿದೆ. ಬಂಧುಗಳ ಜೊತೆ ಧನವ್ಯವಹಾರವನ್ನು ಮಾಡುವಿರಿ. ನೀವು ಹೊಸ ಮನೆಯ ನಿರ್ಮಾಣದ ಬಗ್ಗೆ ಯೋಚಿಸಲಿದ್ದೀರಿ. ವಿದ್ಯುತ್ ಉಪಕರಣಗಳು ನಿಮ್ಮ ಧನವನ್ನು ಖಾಲಿ ಮಾಡಿಸಿಯಾವು
ವೃಶ್ಚಿಕ ರಾಶಿ : ನಿಮ್ಮ ಕಠಿಣ ಪರಿಶ್ರಮವು ಕೆಲಸಕ್ಕೆ ಬಾರದು. ಯುಕ್ತಿಯಿಂದ ನಿರ್ವಹಿಸುವ ಚಾಣಾಕ್ಷತೆ ಬೇಕು. ಕೆಲಸದ ಸ್ಥಳದಲ್ಲಿ ಕೆಲವು ಬದಲಾವಣೆಗಳು ನಿಮ್ಮ ಇಂದಿನ ಕೆಲಸವನ್ನು ನಿಧಾನಗೊಳಿಸಬಹುದು. ಪ್ರಯಾಣಕ್ಕೆ ಸಂಬಂಧಿಸದಂತೆ ತೊಂದರೆ ಬರಬಹುದು. ಅಪರಿಚಿತರ ಸಹಾಯವು ನಿಮಗೆ ದೊರೆಯಬಹದು. ನಂಬಿಕಸ್ಥರನ್ನು ವಿನಾಕಾರಣ ಕಳೆದುಕೊಳ್ಳುವಿರಿ. ಸಜ್ಜನರಿಗೆ ಅಪಮಾನ ಮಾಡಲು ಹೋಗಬೇಡಿ. ನಿಮಗೆ ಇಂದು ಸಿಗುವ ಸೂಚನೆಗಳು ಸಮೃದ್ಧಯ ಸಂಕೇತವಾಗಿರಬಹುದು.
ಧನುಸ್ಸು ರಾಶಿ : ಇಂದು ನಿಮ್ಮ ಮನೆಯ ದುರಸ್ತಿಯ ಕಡೆ ಯೋಚಿಸುಬಿರಿ. ವಾಹನದ ವ್ಯಾಪಾರಿಗಳು ಪ್ರಗತಿ ಕಾಣುವುದು. ಕೆಲಸದ ಸ್ಥಳದಲ್ಲಿ ಕೆಲವು ಉತ್ತಮ ಅವಕಾಶಗಳು ಲಭಿಸುತ್ತವೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಕುಟುಂಬದವರ ಸಹಕಾರ ಇರಲಿದೆ. ಇಂದು ನಿಮಗೆ ಸಂಪತ್ತು, ಗೌರವಗಳು ಸಿಗುವ ಸಾಧ್ಯತೆ ಇದೆ. ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗಬಹುದು. ಪ್ರೇಮಿಗಳಾಗಿದ್ದರೆ ನಿಮ್ಮ ನಡುವೆ ಅಹಂಕಾರದ ಘರ್ಷಣೆ ಇರಲಿದೆ. ಹೊಸ ಉದ್ಯೋಗದಲ್ಲಿ ಉತ್ಸಾಹವು ಹೆಚ್ಚಿರಲಿದೆ.
ಮಕರ ರಾಶಿ : ನಿಮ್ಮ ಪ್ರಮುಖ ದಾಖಲೆಗಳನ್ನು ಯಾರಿಗೂ ಹಸ್ತಾಂತರಿಸುವುದು ಬೇಡ. ಉದ್ಯಮಿಗಳು ಕಾನೂನು ತೊಡಕಿಗೆ ನೇರವಾಗಿ ಪ್ರವೇಶಿಸಿ ಸರಿ ಮಾಡಿಕೊಳ್ಳುವರು. ಕಲಾವಿದರಿಗೆ ಅವಕಾಶಗಳು ಸಿಗಲಿದೆ. ಕೆಲಸವನ್ನು ಬದಲಾಯಿಸುವಿರಿ. ನಿಮ್ಮ ಸ್ನೇಹಿತರಿಗೆ ನಿಮ್ಮಿಂದ ಹೆಚ್ಚಿನ ಸಲಹೆ ಕೊಡುವಿರಿ. ನಿಮ್ಮ ಸಹಾಯವನ್ನು ಅವರು ಬಯಸಬಹುದು. ದಾಂಪತ್ಯದಲ್ಲಿ ಮನಸ್ತಾಪವು ಅಧಿಕವಾಗಬಹುದು. ಆಸಕ್ತಿ ಕಡಿಮೆ ಇದ್ದರೂ ಕರ್ತವ್ಯವನ್ನು ಮಾಡಬೇಕಾದೀತು.
ಕುಂಭ ರಾಶಿ : ಇಂದು ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದೇ ಕಾರ್ಯತತ್ಪರರಾಗುವಿರಿ. ನಿಮ್ಮ ಕೆಲವು ಆಸೆಗಳನ್ನು ಈಡೇರಿಸಲು ದಾರಿ ಮಾಡಿಕೊಳ್ಳುವಿರಿ. ವ್ಯಾಪಾರದಲ್ಲಿ ಲಾಭಗಳಿಸಲು ಹೊಸ ಅವಕಾಶಗಳು ಕಾಣಿಸಿಕೊಂಡೀತು. ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ. ಧರ್ಮದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಹೋದರನ ವರ್ತನೆಗಳು ನಿಮಗೆ ಅಸಮಾಧಾನವನ್ನು ತರುವರು. ಅನಿರೀಕ್ಷಿತ ಧನಾಗಮನವು ಸಂತೋಷವನ್ನು ಕೊಡಬಹುದು.
ಮೀನ ರಾಶಿ : ನೀವು ಉದ್ಯಮಿಗಳ ಜೊತೆ ಹೊಸ ಯೋಜನೆಯನ್ನು ಪಡೆಯುವ ತವಕದಲ್ಲಿ ಇರುವಿರಿ. ದೈಹಿಕ ವಿಶ್ರಾಂತಿಯ ಜೊತೆ ಮಾನಸಿಕ ದೃಢತೆಯೂ ಅಗತ್ಯವಾಗಿ ಹೆಚ್ಚಿಸಿಕೊಳ್ಳಬೇಕು. ಹೊಸ ಕೆಲಸವನ್ನು ಮಾಡಲು ಬಯಸಿದರೆ ಸಮಯವು ನಿಮಗೆ ಉತ್ತಮವಾಗಿರುತ್ತದೆ. ಆಂತರಿಕ ಬಲದ ವೃದ್ಧಿಯಾಗುವುದು. ಪ್ರಮುಖ ವ್ಯಕ್ತಿಗಳ ಜೊತೆ ಸಂಬಂಧಗಳು ಹತ್ತಿರವಾಗಬಹುದು. ಸಂಪತ್ತಿನ ಮೂಲವು ಹೆಚ್ವಾಗಬಹುದು.