ಹುಂಚದಲ್ಲಿ ನೀರು ನಾಯಿಗಳ ಹಿಂಡು!
– ಮುತ್ತಿನಕೆರೆ ಬಳಿ ನೀರುನಾಯಿಗಳ ಹಿಂಡು ಪ್ರತ್ಯಕ್ಷ
– ಹೊಸನಗರ ತಾಲೂಕಿನ ಹುಂಚ: ಏನಿದು ವಿಶೇಷ?
NAMMUR EXPRESS NEWS
ಹೊಸನಗರ: ರಿಪ್ಪನ್ಪೇಟೆ ಸಮೀಪದ ಇತಿಹಾಸ ಪ್ರಸಿದ್ದ ಹುಂಚ ಮುತ್ತಿನಕೆರೆಯಲ್ಲಿ ನೀರು ನಾಯಿಗಳ ಹಿಂಡು ಏಕಾಏಕಿ ಪ್ರತ್ಯಕ್ಷವಾಗಿವೆ. ಪುರಾಣ ಪ್ರಸಿದ್ದವಾಗಿರುವ ಹುಂಚದ ಮುತ್ತಿನಕೆರೆಯು ಕೋಡೂರು – ನಾಗರಹಳ್ಳಿ ಮಾರ್ಗದಲ್ಲಿದ್ದು, ಈ ಕೆರೆಯಲ್ಲಿ ದಿಢೀರ್ ನೀರು ನಾಯಿಗಳು ಕೆರೆಯ ನೀರಿನಲ್ಲಿ ಗುಂಪು ಗುಂಪಾಗಿ ಕಾಣಿಸಿಕೊಂಡಿರುವುದು ರಸ್ತೆಯಲ್ಲಿ ಸಂಚರಿಸುವವರಲ್ಲಿ ಭಯ ಹುಟ್ಟಿಸಿವೆ. ಕಾಡಿನ ಕೆರೆಯಲ್ಲಿ ಕಾಣಸಿಗುವ ಈ ನೀರು ನಾಯಿಗಳು ನಾಡಿನಲ್ಲಿ ಕಂಡಿವೆ. ಕಳೆದ ವರ್ಷ ಮಳೆಯ ಕೊರತೆಯಿಂದಾಗಿ ಅಂತರ್ಜಲ ಸಹ ಕ್ಷೀಣಿಸಿ ಕೆರೆಕಟ್ಟೆಗಳು ಒಣಗಿ ಹೋಗಿದ್ದು ಬಿಸಿಲ ತಾಪದಿಂದಾಗಿ ಕಾಡುಪ್ರಾಣಿಗಳು ನಾಡಿಗೆ ಬರುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ.