ಜ.12,13,14ರಂದು ಹೊಸನಗರದಲ್ಲಿ ಕೃಷಿ ಮೇಳ
– ಮಲೆನಾಡ ಕೃಷಿ ಕ್ಷೇತ್ರದ ಅನಾವರಣ
– ಟೀಂ ಆತ್ರೇಯ ಅವರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ: ಶಾಖಾಹಾರಿ ಚಲನಚಿತ್ರದ ಸಾಂಗ್ ರಿಲೀಸ್
NAMMUR EXPRESS NEWS
ಹೊಸನಗರ: ಜೆಸಿಐ ಹೊಸನಗರ ಡೈಮಂಡ್, ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಹಯೋಗದೊಂದಿಗೆ ಹೊಸ ನಗರದ ನೆಹರೂ ಮೈದಾನದಲ್ಲಿ ಜನವರಿ 12,13,14ರಂದು 3 ದಿನಗಳ ಕಾಲ ‘ಸುಗ್ಗಿ ಹಬ್ಬ-2024’ ರಾಜ್ಯಮಟ್ಟದ ಕೃಷಿ ಮೇಳ ‘ವನ್ನು ಆಯೋಜಿಸಿದೆ. ಜ.12ರ ಸಂಜೆ 5 ಗಂಟೆಗೆ ಡಿಸಿಸಿಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡರ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ಜಿಲ್ಲಾ ಮಂತ್ರಿ ಮಧು ಬಂಗಾರಪ್ಪ ಕೃಷಿ ಮೇಳವನ್ನು ಉದ್ಘಾಟಿಸುವರು. ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಗತಿಪರ ರೈತರನ್ನು ಸನ್ಮಾನಿಸುವರು.
ಶಾಸಕ ಆರಗ ಜ್ಞಾನೇಂದ್ರ ನಿವೃತ್ತ ಸೈನಿಕರನ್ನು ಗೌರವಿಸುವರು ತೋಟಗಾರಿಕಾ ಕುಲಪತಿ ಆರ್.ಸಿ. ಜಗದೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸುಧೀರ್ ಜಿ.ಎನ್. ಎಂ.ಎಂ. ಪರಮೇಶ್, ಅಡಿಕೆ ಮಾರಾಟ ಸಹಕಾರ ಸಂಘ ನಿ., ಅಧ್ಯಕ್ಷ ಡಿ.ವಿ.ವಿನಯ್ ಕುಮಾರ್, ಮಾಮ್ ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ಶಿಮುಲ್ ನಿರ್ದೇಶಕ ವಿದ್ಯಾಧರ ಹೆಚ್.ಎಸ್.ಡಿಆರ್ಸಿಎಸ್ ವ್ಯವಸ್ಥಾಪಕ ನಿರ್ದೇಶಕ ಜಿ.ವಾಸುದೇವ್, ಕ್ಲಾಸ್ ಒನ್ ಕಂಟ್ರಾಕ್ಟರ್ ಸಿ.ವಿ. ಚಂದ್ರಶೇಖರ್, ಪ.ಪಂ.ಮುಖ್ಯಾಧಿಕಾರಿ ಮಾರುತಿ, ಕೀಳೆಂಬಿ ಮೀಡಿಯಾ ಎಂ.ಡಿ. ರಾಜೇಶ್ ಕೀಳಂಬಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜ.12ರ ಸಂಜೆ ಸಭಾಕಾರ್ಯಕ್ರಮದ ನಂತರ ಗಂಗಾವತಿ ಪ್ರಾಣೇಶ್ ತಂಡದಿಂದ ”ನಗೆಹಬ್ಬ” ಹಾಗೂ ಜನವರಿ 13ರ ಸಂಜೆ ಐದು ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಇದೇ ವೇದಿಕೆಯಲ್ಲಿ ಶಾಖಾಹಾರಿ ಚಿತ್ರತಂಡದಿಂದ ಚಲನಚಿತ್ರದ ಸಾಂಗ್ ರಿಲೀಸ್ ಕೂಡ ನಡೆಯಲಿದೆ.
ಟೀಂ ಆತ್ರೇಯ ಅವರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಜರುಗುವುದು ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮಾಜಿ ಸಚಿವ ಹರತಾಳು ಹಲಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜ.14ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಕೃಷಿ ವಿಚಾರ ಗೋಷ್ಟಿ ಜರುಗುವುದು. ಹೊಸನಗರ ಜೆಸಿಐ ಡೈಮಂಡ್ ಅಧ್ಯಕ್ಷ ಜೆಸಿ ಮಧುಸೂದನ ನಾವಡ ಮತ್ತು ಪದಾಧಿಕಾರಿಗಳು ಸರ್ವರನ್ನೂ 3 ದಿನಗಳ ಕೃಷಿ ಮೇಳಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.