ಹೊಸನಗರದಲ್ಲಿ ನಾರಾಯಣ ಗುರುಗಳ ಜಯಂತಿ
– ಈಡಿಗರ ಸಂಘ, ಎಸ್.ಎನ್.ಜಿ.ವಿ, ಬಿಲ್ಲವ ಸಮಾಜ, ಶ್ರೀ ನಾರಾಯಣ ಗುರು ಸಹಕಾರ ಸಂಘ, ಶ್ರೀ ಜೇನುಕಲ್ಲಮ್ಮ ಸಹಕಾರಿ ಸಂಘ, ಆರ್ಯ ಈಡಿಗ ಎಂಪ್ಲಾಇಸ್ ಕ್ರಿಯಾ ವೇದಿಕೆ ಸಹಯೋಗ
NAMMUR EXPRESS NEWS
ಹೊಸನಗರ: ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯನ್ನು ಹೊಸನಗರದಲ್ಲಿ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು.
ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು, ಎಂಬ ವಿಶ್ವ ಸಂದೇಶ ಸಾರಿದ, ಮಹಾನ್ ಮಾನವಾತವಾದಿ, ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಎಂಬ ಘೋಷಣೆ ಯೊಂದಿಗೆ ಶೋಷಿತ ವರ್ಗದ ಮಹಾನ್ ಶಕ್ತಿ, ಅಕ್ಷರ ಬ್ರಹ್ಮ ಎಂದೇ ಖ್ಯಾತಿ ಪಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಯನ್ನು ಹೊಸನಗರದ ಆರ್ಯ ಈಡಿಗ ಭವನದಲ್ಲಿ ನೇರವೇರಿಸಲಾಯಿತು.
ತಾಲೂಕು ಆಳಿತ, ಆರ್ಯ ಈಡಿಗರ ಸಂಘ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ (SNGV), ಬಿಲ್ಲವ ಸಮಾಜ, ಶ್ರೀ ನಾರಾಯಣ ಗುರು ಸಹಕಾರ ಸಂಘ, ಶ್ರೀ ಜೇನುಕಲ್ಲಮ್ಮ ಸಹಕಾರಿ ಸಂಘ ಹಾಗೂ ಆರ್ಯ ಈಡಿಗ ಎಂಪ್ಲಾಇಸ್ ಕ್ರಿಯಾ ವೇದಿಕೆ ಪಾಲ್ಗೊಳ್ಳುವಿಕೆ ಯೊಂದಿಗೆ ನೆರವೇರಿತು. ಕಾರ್ಯಕ್ರಮ ದಲ್ಲಿ ವಿಶೇಷ ಅತಿಥಿ ಗಳಾಗಿ ಆಗಮಿಸಿದ ತೀರ್ಥಹಳ್ಳಿ ಕಾಲೇಜು ಉಪನ್ಯಾಸಕರಾದ ಸತೀಶ್ ಜಿ ಕೆ ರವರು , ಮಾತನಾಡಿ, ದೇವರ ನಾಡು ಎಂದೇ ಹೆಸರಾದ ಕೇರಳದ ಒಂದು ಅತ್ಯಂತ ಬಡ ಹಾಗೂ ಶೋಷಿತ ಸಮಾಜ ವಾದ ಈಳವ ಹುಟ್ಟಿದ ಬ್ರಹ್ಮಶ್ರೀ ನಾರಾಯಣ ಗುರುಗಳು ತಮ್ಮ 30 ನೇ ವಯಸ್ಸಿನಲ್ಲಿ ಯೇ ಶೋಷಿತ ಜನರ ಪರ ಸಂಘಟನಾತ್ಮಕ ವಾದ ರೀತಿಯಲ್ಲಿ ಹೋರಾಟ ನಡೆಸಿ, ಮಹಾನ್ ವ್ಯಕ್ತಿಯಾಗಿ ನಿಂತವರು ಎಂದರು.
ಇಂದಿನ ನಾವುಗಳು ಜಾಗ್ರತರಾಗಿ , ಸಮಾಜದ ಬಗ್ಗೆ ಅರಿವು ಪಡೆದು, ಯಾವುದೇ ರೀತಿಯ ಶೋಷಣೆ ವಿರುದ್ದ ದೈರ್ಯ ದಿಂದ ಹೋರಾಟ ಮಾಡುತ್ತಾ ಸಂಘಟನೆ ಮೂಲಕ ಶಕ್ತಿಯುತರಾಗಿ, ವಿದ್ಯೆ ಪಡೆದು ಸ್ವತಂತ್ರ ರಾಗಿ ಬದುಕುವ ಮೂಲಕ ನಮ್ಮ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದರ ಮೂಲಕ ಶ್ರೀ ನಾರಾಯಣ ಗುರುಗಳ ತತ್ವ ಆದರ್ಶ ಗಳನ್ನು ಅನುಸರಿಸಿ ನಡೆಯ ಬೇಕಾದ ಅಗತ್ಯವಿದೆ ಎಂದರು.
ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಬಿ ಪಿ ರಾಮ ಚಂದ್ರ ಅದ್ಯಕ್ಷತೆ ವಹಿಸಿದ್ದರು. ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತಾಲೂಕು ಅದ್ಯಕ್ಷ ಲಯನ್ ಹೆಚ್ ವಾಸಪ್ಪ, ಮಹಿಳಾ ಅದ್ಯಕ್ಷೇ ಪೂರ್ಣಿಮಾ ಮೂರ್ತಿ ರಾವ್, ಬಿಲ್ಲವ ಸಮಾಜದ ಸುಮತಿ ಆರ್ ಪೂಜರ್, ಶ್ರೀ ಎರಗಿ ಉಮೇಶ್, ಸಹಕಾರಿ ಸಂಘದ ಅಧ್ಯಕ್ಷರಾದ ಮುರಳೀಧರ ಜಿ ಈ, ಸತ್ಯ ನಾರಾಯಣ, ಕ್ರಿಯಾ ವೇದಿಕೆಯ ಪುಟ್ಟ ಸ್ವಾಮಿ, ಶ್ರೀ ರೇಣುಕೇಶ್ , ನೇರಳೆ ರಮೇಶ್ ಇದ್ದರು. ಲೇಖನ ಮೂರ್ತಿ ಎಲ್ಲರನ್ನು ಸ್ವಾಗತಿಸಿದರು. ಮುರಳೀಧರ ವಂದಿಸಿದರು.
ವರದಿ: ಲಯನ್ ಹೆಚ್ ವಾಸಪ್ಪ, ಮಾಸ್ತಿಕಟ್ಟೆ