ಕಾಂಗ್ರೆಸ್ ನಾಯಕ ಉಮೇಶ್ ಹಾಲಗದ್ದೆ ಬಿಜೆಪಿಗೆ!
– ಯಡಿಯೂರಪ್ಪ, ಆರಗ, ವಿಜಯೇಂದ್ರ, ರಾಘವೇಂದ್ರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ
– ರಾಘವೇಂದ್ರ ಅವರ ಅಭಿವೃದ್ಧಿ ಕೆಲಸ ಮೆಚ್ಚಿ ಪಕ್ಷ ಸೇರ್ಪಡೆ: ಉಮೇಶ್
NAMMUR EXPRESS NEWS
ತೀರ್ಥಹಳ್ಳಿ/ಹೊಸನಗರ: ಕಾಂಗ್ರೆಸ್ ನಾಯಕ ಡಾ.ಆರ್. ಎಂ.ಮಂಜುನಾಥ ಗೌಡ ಆಪ್ತ, ಹೊಸನಗರ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಹಾಲಗದ್ದೆ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಮುನ್ನವೇ ಶಾಕ್ ಸಿಕ್ಕಿದೆ. ಬಿಜೆಪಿಗೆ ಹೊಸ ನಗರ ಕಾಂಗ್ರೆಸ್ ನಾಯಕ ಉಮೇಶ್ ಹಾಲಗದ್ದೆ ಹೊಸನಗರ ತಾಲೂಕು ಪ್ರಭಾವಿ ನಾಯಕರಾಗಿದ್ದು, ಒಂದು ಬಾರಿ ಪಟ್ಟಣ ಪಂಚಾಯತ್ ಅಧ್ಯಕ್ಷರು, 2 ಬಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಸಂಸದ ರಾಘವೇಂದ್ರ ಸೇರಿದಂತೆ ಜಿಲ್ಲಾ, ತಾಲೂಕು ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಶಿವಮೊಗ್ಗ ಕಾಂಗ್ರೆಸ್ ಪಕ್ಷದಲ್ಲಿ ಮಿಂಚಿನ ಬೆಳವಣಿಗೆ
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರ ಶಿಕಾರಿಪುರದ ನಿವಾಸದಲ್ಲಿ ಅವರ ಸಮ್ಮುಖದಲ್ಲಿ ಹೊಸನಗರದ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಹೊಸನಗರ ಪಟ್ಟಣ ಪಂಚಾಯಿತಿಗೆ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾದ ಮಾಜಿ ಅಧ್ಯಕ್ಷರು, ಮಂಜುನಾಥ ಗೌಡರ ಆಪ್ತರಾಗಿದ್ದ ಹಾಲಗದ್ದೆ ಉಮೇಶ್ ಅವರು ಹಾಗೂ ಅವರ ಬೆಂಬಲಿಗರು ಬಿಜೆಪಿ ಸೇರ್ಪಡೆಗೊಂಡರು. ಮಾಜಿ ಶಾಸಕ ಹರತಾಳು ಹಾಲಪ್ಪ, ಪ್ರಮುಖರಾದ ಹಕ್ರೆ ಮಲ್ಲಿಕಾರ್ಜುನ್ , ಸುರೇಶ್ ಬಿ.ಸ್ವಾಮಿರಾವ್, ಹೊಸನಗರ ಬಿಜೆಪಿ ಅಧ್ಯಕ್ಷರಾದ ಸುಬ್ರಮಣ್ಯ, ಜಿಲ್ಲಾ ನಾಯಕರಾದ ಗಣಪತಿ ಬೆಳಗೋಡು, ಎಂ.ಬಿ.ಚನ್ನವೀರಪ್ಪ, ತೀರ್ಥಹಳ್ಳಿ ಬಿಜೆಪಿ ನಾಯಕರಾದ ಪೂರ್ಣೇಶ್, ಚಂದ್ರವಳ್ಳಿ ಸೋಮಶೇಖರ್, ಅನಿಲ್ ವಿಧಾತ, ಲೋಕೇಶ್ ಟೆಂಕಬೈಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಾಘವೇಂದ್ರ ಅವರ ಅಭಿವೃದ್ಧಿ ಚಿಂತನೆಗೆ ಬೆಂಬಲ
ನಮ್ಮೂರ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಹಾಲಗದ್ದೆ ಉಮೇಶ್, ರಾಘವೇಂದ್ರ ಅವರ ಅಭಿವೃದ್ಧಿ ಕೆಲಸಗಳು, ಹೊಸನಗರ ಸಾಗರ ಭಾಗಕ್ಕೆ ತಂದ ಯೋಜನೆಗಳು, ನಾಯಕತ್ವಕ್ಕೆ ಬೆಂಬಲಿಸಿ ಪಕ್ಷ ಸೇರಿದ್ದೇನೆ. ಹೊಸನಗರ, ಸಾಗರ ಭಾಗದಲ್ಲಿ ಅತೀ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕೊಲ್ಲೂರು ಕೇಬಲ್ ಕಾರ್, ರಸ್ತೆ ಝೆಡ್ ಸೇತುವೆಗಳು ಹೊಸನಗರಕ್ಕೆ ಹೊಸ ಭರವಸೆ ಮೂಡಿಸಿವೆ. ಹೀಗಾಗಿ ತಾಲೂಕು ಅಭಿವೃದ್ಧಿ ದೃಷ್ಟಿಯಿಂದ ಪಕ್ಷ ಸೇರಿದ್ದೇನೆ ಎಂದ ಅವರು ಕಾಂಗ್ರೆಸ್ ಪಕ್ಷಕ್ಕೆ ನನ್ನ ಸೇವೆ ಬೇಕಾಗಿರಲಿಲ್ಲ ಎಂದೂ ಬೇಸರ ವ್ಯಕ್ತಪಡಿಸಿದರು.