ಸಾಗರದ ಶೃಂಗೇರಿ ಶಂಕರಮಠದಲ್ಲಿ ದಸರಾ ಉತ್ಸವ!
* 25 ವರ್ಷ ಪೂರೈಸಿದ ಮಠ: ಶರನ್ನವರಾತ್ರಿ ವಿಶೇಷ ಧಾರ್ಮಿಕ
* ಅ.3ರಿಂದ 12ವರೆಗೆ ದಸರಾ ಉತ್ಸವ
* ವಿಜಯ ದಶಮಿ ಅಂಗವಾಗಿ ವಿಶೇಷ ಪೂಜೆ
NAMMUR EXPRESS NEWS
ಸಾಗರ: ಸಾಗರ ಪಟ್ಟಣದ ಶೃಂಗೇರಿ ಶಂಕರಮಠ 25 ವರ್ಷ ಪೂರೈಸುತ್ತಿದ್ದು,ಅ.3ರಿಂದ 12ವರೆಗೆ ಶರನ್ನವರಾತ್ರಿ ಉತ್ಸವದ ಸಂದರ್ಭದಲ್ಲಿ ವಿಶೇಷವಾಗಿ ಧಾರ್ಮಿಕ, ಹೋಮಹವನಾದಿ, ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀ ಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವರಾತ್ರಿ ಅಂಗವಾಗಿ ಅ.3ರಂದು ದಕ್ಷಿಣಾಮೂರ್ತಿ ಹವನ, ಅ.4ರಂದು ದುರ್ಗಾಸೂಕ್ತ ಹವನ, ಅ.5ರಂದು ಲಕ್ಷ್ಮೀನಾರಾಯಣ ಹೃದಯ ಹವನ ನಡೆಯಲಿದ್ದು, ಮಧ್ಯಾಹ್ನ 12ಕ್ಕೆ ಕನ್ನಡದಿಂದ ಬೈಲ್ ಲಿಪಿಗೆ ತರ್ಜುಮೆಕಾರ ಬೆಂಗಳೂರಿನ ಶಶಿಕಲಾ ಮೂರ್ತಿ ಮತ್ತು ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಕೆ.ವಿ.ಜಯರಾಮ್ ಅವರಿಗೆ ಶಾರದಾ ಪ್ರಸಾದಮ್ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದರು.
ಅ.6ರಂದು ಮಹಾಗಣಪತಿ ಉಪನಿಷತ್ ಹವನವಿದ್ದು, ಬೆಳಗ್ಗೆ 11.30ರಿಂದ ಸದಾನಂದ ಶರ್ಮ ವಿರಚಿತ ‘ಮಧು ಕೈಟಭರ ಸಂಹಾರ’ ಗಮಕ ವಾಚನ, 7ರಂದು ಲಲಿತಾ ಸಹಸ್ರ ಹವನ, ಬಳಿಕ ಮಹಿಷಾಸುರ ಮರ್ದಿನಿ ಕುರಿತ ಗಮಕ ವಾಚನ ನಡೆಯಲಿದೆ.
ಅ.8ಕ್ಕೆ ಧನ್ವಂತರಿ ಹವನ, ನಂತರ ನಿಶುಂಭರ ಸಂಹಾರ ಗಮಕ ವಾಚನ, ಅ.9ರಂದು ಸರಸ್ವತಿ ಮೂಲಮಂತ್ರ ಹವನ, ಬಳಿಕ ಖ್ಯಾತ ಜ್ಯೋತಿಷಿ ವಿದ್ವಾನ್ ಕಮಲಾಕರ ಭಟ್ರಿಂದ ಉಪನ್ಯಾಸ ಇರುತ್ತದೆ. ಅ.10ರಂದು ಶ್ರೀಸೂಕ್ತ ಹವನ, ಅ.11ರಂದು ನವಚಂಡಿಕಾ ಹವನ, ಅ.12ರಂದು ವಿಜಯ ದಶಮಿ ಅಂಗವಾಗಿ ವಿಶೇಷ ಪೂಜೆ ನಡೆಯಲಿದೆ ಎಂದರು.
ಸುಧೀಗೋಷ್ಠಿಯಲ್ಲಿ ಮಾ.ಸ.ನಂಜುಂಡಸ್ವಾಮಿ, ಸವಿತಾ ಶ್ರೀಪಾದ್, ಐ.ವಿ.ಹೆಗಡೆ, ಪ್ರಭಾ ವೆಂಕಟೇಶ್, ಕಸ್ತೂರಿ ಕೃಷ್ಣಮೂರ್ತಿ ಆಚಾರ್ ಹಾಜರಿದ್ದರು.