ಮಗಳ ಅರೋಗ್ಯಕ್ಕಾಗಿ ಸಾಲದ ಸುಳಿಯಲ್ಲಿ ಸಿಲುಕಿದ ಕುಟುಂಬ!
– ಹೊಸನಗರ ಪೊಲೀಸರಿಂದ ಮಾನವೀಯ ಸೇವೆ
– ದುಡಿದ ದುಡ್ಡೆಲ್ಲ ಚಿಕಿತ್ಸೆಗೆ ಖಾಲಿ… ಸಹಾಯ ಮಾಡಿ..
ಮಾನವೀಯತೆ ಉಳಿಯಲಿ ಅಭಿಯಾನ
NAMMUR EXPRESS NEWS
ಹೊಸ ನಗರ: ಸುಮಾರು 36 ವರ್ಷಗಳಿಂದ ನರ ದೌರ್ಬಲ್ಯದಿಂದ ಬಳಲುತ್ತಿರುವ ಮಗಳ ಆರೈಕೆಯಲ್ಲಿ ಸಾಲದ ಸುಳಿಯಲ್ಲಿ ಸಿಲುಕಿರುವ ಗವಟೂರಿನ ಬಡ ಕುಟುಂಬದ ನೋವಿಗೆ ಹೊಸ ನಗರ ಪಟ್ಟಣದ ಪೊಲೀಸರು ಹೆಗಲು ಕೊಟ್ಟಿದ್ದಾರೆ.
ಹೊಸನಗರ ಪಟ್ಟಣದ ಗವಟೂರು ನಿವಾಸಿ ಆಟೋ ದೇವಪ್ಪಗೌಡ ಅವರು 36 ವರ್ಷಗಳಿಂದ ನರದೌರ್ಬಲ್ಯದಿಂದ ಬುದ್ಧಿಮಾಂದ್ಯಕ್ಕೆ ಒಳಗಾದ ಮಗಳು ಅನಿತಾಳ ಆರೈಕೆ ಮಾಡುತ್ತಿದ್ದು,ಚಿಕಿತ್ಸೆ ನೀಡಿದರೆ ಗುಣಮುಖಳಾಗುವ ಆಶಾವಾದದಿಂದ ಲಕ್ಷ ಲಕ್ಷ ಖರ್ಚು ಮಾಡಿದ ಬಡಕುಟುಂಬ ಇಂದು ಸಾಲದ ಸುಳಿಗೆ ಸಿಲುಕಿತ್ತು. ಸೂಕ್ತ ಚಿಕಿತ್ಸೆ ನೀಡದೇ ಮಗಳ ಅನಾರೋಗ್ಯವು ಮತ್ತಷ್ಟು ಉಲ್ಬಣಗೊಂಡಿತ್ತು.
ಈ ಬಗ್ಗೆ ಮಾಹಿತಿಯನ್ನರಿತ ಪಟ್ಟಣದ ಪೊಲೀಸ್ ಸಿಬ್ಬಂದಿಗಳಾದ ಮಂಜಪ್ಪ ಹೊನ್ನಾಳ್ (ಹೆಚ್ ಸಿ) ,ನವೀನ್, ತ್ರಿವೇಣಿ ತಕ್ಷಣ ರಿಪ್ಪನ್ಪೇಟೆಯ ನೂತನ ಪಿಎಸ್ಐ ಎಸ್ ಪಿ ಪ್ರವೀಣ್ ಗಮನಕ್ಕೆ ತಂದಿದ್ದಾರೆ.
ಬಡಕುಟುಂಬದ ಬಗ್ಗೆ ಡಿವೈಎಸ್ಪಿ ಗಜಾನನ ವಾಮನ ಸುತಾರ ,ಮತ್ತು ಸಿಪಿಐ ಗಿರೀಶ್ ರವರ ಗಮನಕ್ಕೆ ತಂದ ಪಿಎಸ್ ಐ ಪ್ರವೀಣ್ ಠಾಣೆಯ ಎಲ್ಲಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಸಹಕಾರದಿಂದ ಇಂದು ಗವಟೂರಿನ ಆಟೋ ದೇವಪ್ಪಗೌಡರವರ ಮನೆಗೆ ತೆರಳಿ ಧನಸಹಾಯ ಮಾಡುವುದರೊಂದಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.
ಹೊಸನಗರ ಪಟ್ಟಣದ ಪೊಲೀಸರು ಸಮಾಜಕ್ಕೊಂದು ಉತ್ತಮ ಸಂದೇಶ ನೀಡಿದ್ದಾರೆ.
ದುಡಿದ ದುಡ್ಡೆಲ್ಲ ಚಿಕಿತ್ಸೆಗೆ ಖಾಲಿ!
36 ವರ್ಷಗಳಿಂದ ನರದೌರ್ಬಲ್ಯದಿಂದ ಬುದ್ಧಿಮಾಂದ್ಯಕ್ಕೆ ಒಳಗಾದ ಮಗಳ ಆರೈಕೆ ಮಾಡುತ್ತಿರುವ ಪಾಲಕರು ಇದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಗವಟೂರು ಗ್ರಾಮದ ನಿವಾಸಿ ಎನ್ ಸಿ ದೇವಪ್ಪಗೌಡ ಹಾಗೂ ಪತ್ನಿ ಪ್ರೇಮ ಅವರ ಕೊರಗು.
ಮಗಳು ಅನಿತಾ ಹುಟ್ಟಿ ಎಂಟು ವರ್ಷವಾದರೂ ಮಾತು ಬರಲಿಲ್ಲನರ ದೌರ್ಬಲ್ಯದಿಂದ ಬುದ್ಧಿಮಾಂದ್ಯವಾಗಿದೆ. ಸೂಕ್ತ ಚಿಕಿತ್ಸೆ ಕೊಡಿಸಿದರೆ ಚೇತರಿಕೆ ಕಾಣಬಹುದು ಎಂಬ ವೈದ್ಯರ ಭರವಸೆಯ ಮಾತಿಗೆ ಅರೆ ಹೊಟ್ಟೆ ಉಂಡು, ಮಗಳ ಆರೈಕೆಗೆ ಮುಂದಾದಾಗ
ಆರೋಗ್ಯದಲ್ಲಿ ಸ್ವಲ್ಪ ಚೇತರಿಗೆ ಕಂಡು ತಕ್ಕಮಟ್ಟಿಗೆ ನಡೆದಾಡು ವಂತಾದ ಮಗಳನ್ನು ಕಂಡು ಬಡತನದ ಭವಣೆ ಮರೆತು 36 ವರ್ಷಗಳಿಂದ ಮಗಳ ಆರೈಕೆ ಮಾಡಿಕೊಂಡು ಬಂದಿದ್ದಾರೆ.
ಅನಿತಾಳ ಚಿಕಿತ್ಸೆಗೆ ಲಕ್ಷ ಲಕ್ಷ ಹಣ ಖರ್ಚು ಮಾಡಿದ ವೃದ್ಧ ಆಟೋ ಚಾಲಕರಾದ ದೇವಪ್ಪ ಗೌಡ ರವರು ಸಾಲದ ಸುಳಿಯಲ್ಲಿ ಸಿಲುಕಿ ಕಂಗಲಾಗಿ ಚಿಕಿತ್ಸೆ ನೀಡಲು ಸಾಧ್ಯವಾಗದಂತಹ ಸ್ಥಿತಿಗೆ ಬಂದ ಹಿನ್ನಲೆಯಲ್ಲಿ ಮಗಳಿಗೆ ಅನಾರೋಗ್ಯ ಮತ್ತಷ್ಟು ಉಲ್ಬಣಗೊಂಡಿದೆ.
ಬಡಪಾಯಿ ದೇವಪ್ಪಗೌಡರಿಗೆ ಹೆಣ್ಣು ಮಗಳ ನಂತರ ಒಬ್ಬ ಗಂಡು ಮಗ ಇದ್ದಾನೆ.ಬೆಂಗಳೂರಿನಲ್ಲಿ ಚಾಲಕ ವೃತ್ತಿ ಮಾಡಿ, ಚೂರು ಪಾರು ಸಂಪಾದನೆ ಉಳಿಸಿ ಮನೆಗೆ ನೆರವಾಗಲಿ ಎಂದು ಬ್ಯಾಂಕ್ ಸಾಲ ಮಾಡಿ,ವಾಹನ ಖರೀದಿಸಿ ಬಾಡಿಗೆಗೆ ಬಿಟ್ಟರೆ, ಕೋವಿಡ್ ಸಮಯದಲ್ಲಿ ಉದ್ಯೋಗವಿಲ್ಲದೆ ನಷ್ಟ ಅನುಭವಿಸಿ,ಬ್ಯಾಂಕ್ ಕಂತು ಕಟ್ಟಲಾಗದೆ ಸುಮಾರು 12 ಲಕ್ಷ ಸಾಲದ ಹೊರೆಯಾಗಿದೆ.
ತಮ್ಮ ದುಡಿಮೆಯ ಬಹುಪಾಲು ಹಣವನ್ನು ಮಗಳು ವನಿತಾಳ ಚಿಕಿತ್ಸೆ ಗೆ ಖರ್ಚು ಮಾಡಿರುವ ಇವರು ಮಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಹಣಕಾಸಿನ ತೊಂದರೆಯಾಗಿದ್ದು ಕಳೆದ ಆರು ತಿಂಗಳಿಂದ ಕಾಯಿಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮಗಳು ಹಾಸಿಗೆ ಹಿಡಿದಿದ್ದಾಳೆ.
ಮಗಳ ಬುದ್ಧಿ ಭ್ರಮಣೆ ವಿಕೋಪಕ್ಕೆ ತಿರುಗಿ, ಅತಿರೇಕವಾದ ಹಾರಾಟ ಚೀರಾಟ ಗಳನ್ನು ನಿಯಂತ್ರಿಸುವುದು ವಯೋವೃದ್ಧ ತಂದೆ ತಾಯಿಗಳಿಗೆ ದುಸ್ತರವಾಗಿ ಪ್ರತಿನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಎದುರಾಗಿದೆ.
ಈಗಾಗಲೇ ಹತ್ತಾರು ಆಸ್ಪತ್ರೆ, ನರ್ಸಿಂಗ್ ಹೋಮ್ ಗಳಲ್ಲಿ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಹೆಚ್ಚಿನ ಚಿಕಿತ್ಸೆ ಕೊಡಿಸಲು ಹಣಕಾಸಿನ ತೊಂದರೆ ಎದುರಾಗಿದೆ.
ಈಗಾಗಲೇ ಮಗಳ ಆರೈಕೆಗೆ ಪರಿಚಿತರಿಂದ, ವಿವಿಧ ಸಂಘ-ಸಂಸ್ಥೆಗಳಿಂದ ಮಾಡಿದ ಲಕ್ಷಾಂತರ ರೂಗಳ ಸಾಲ ತೀರಿಸುವುದೇ ದೊಡ್ಡ ಹೊರೆಯಾಗಿದೆ.
ಯಾರಾದರೂ ದಾನಿಗಳು ಆರ್ಥಿಕ ಸಹಾಯ ಮಾಡಿದರೆ, ಮಗಳಿಗೆ ಇನ್ನು ಉತ್ತಮವಾದ ಚಿಕಿತ್ಸೆ ಕೊಡಿಸುವ ಹಂಬಲ ಅವರದು..ತಮ್ಮ ಕೈಯಲ್ಲಾದ ಆರ್ಥಿಕ ಸಹಾಯ ಮಾಡಲು ಇಚ್ಛಿಸುವರು :
ಈ ಕೆಳಕಂಡ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಲು ಕೋರಿಕೆ : ಪ್ರೇಮ ಎನ್.ಡಿ.
ಭಾರತೀಯ ಸ್ಟೇಟ್ ಬ್ಯಾಂಕ್(sbi)
ರಿಪ್ಪನ್ ಪೇಟೆ ಶಾಖೆ
ಖಾತೆ ಸಂಖ್ಯೆ : 64188102751
Ifsc : SBIN0040976
ಹೊಸನಗರ ತಾಲೂಕು ಶಿವಮೊಗ್ಗ ಜಿಲ್ಲೆ
Phone pay number – 9060968943
ಹೆಚ್ಚಿನ ಮಾಹಿತಿಗೆ ದೇವಪ್ಪ ಗೌಡ ರವರ ಮೊಬೈಲ್ ನಂಬರ್ 9972752219 ಗೆ ಕರೆ ಮಾಡಿ.
ಇದನ್ನೂ ಓದಿ : ತುಂಬಿದ ನದಿಯಲ್ಲಿ ಮರ ಹಿಡಿದು ಜೀವ ಉಳಿಸಿಕೊಂಡ ಅಜ್ಜಿ!
HOW TO APPLY : NEET-UG COUNSELLING 2023