ಪ್ರೊ ಕಬಡ್ಡಿಗೆ ಗಗನ್ ಗೌಡ!
– ಉಜಿರೆಯ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿಯ ಸಾಧನೆ
– ಹೊಸನಗರ ತಾಲೂಕಿನ ಹುಡುಗ ಈಗ ಸ್ಟಾರ್ ಆಟಗಾರ
NAMMUR EXPRESS NEWS
ಉಜಿರೆ: ಕರಾವಳಿ ಕ್ರೀಡಾಪಟುವೊಬ್ಬ ಇದೀಗ ಪ್ರೊ ಕಬಡ್ಡಿಗೆ ಆಯ್ಕೆ ಆಗಿದ್ದು ಕರಾವಳಿ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಎಸ್.ಡಿ. ಎಂ ಕಬಡ್ಡಿ ತಾರೆ ಗಗನ್ ಗೌಡ ಅವರು ಪ್ರೊ ಕಬಡ್ಡಿ 10ನೇ ಆವೃತ್ತಿಗೆ ಆಯ್ಕೆ ಆಗಿದ್ದಾರೆ.
ಎಸ್ ಡಿಎಂ ಉಜಿರೆ ವಿದ್ಯಾಸಂಸ್ಥೆಯ ಕಬಡ್ಡಿ ಆಟಗಾರ ಗಗನ್ ಗೌಡ ಮುಂದೆ ಬರಲಿರುವ ಪ್ರೊ ಕಬಡ್ಡಿ ಹತ್ತನೇ ಆವೃತಿಯಲ್ಲಿ ಯುಪಿ ಯೋಧ ತಂಡದ ಪರವಾಗಿ ಆಡಲಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನವರಾಗಿದ್ದು, ದೈಹಿಕ ಶಿಕ್ಷಕ ಕೃಷ್ಣಾನಂದ ರಾವ್ ಅವರ ಗರಡಿಯಲ್ಲಿ ಪಳಗಿದ್ದಾರೆ. ಹಲವು ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ಮೈಸೂರಿನಲ್ಲಿ ನಡೆದ ಯುವ ಕಬ್ಬಡಿ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ನೇರವಾಗಿ ಪ್ರೊ ಕಬಡ್ಡಿ ಹತ್ತನೇ ಆವೃತ್ತಿಯಲ್ಲಿ ಯುಪಿ ಯೋಧ ತಂಡದ ಸ್ಟಾರ್ ಆಟಗಾರರಾಗಿ ಆಯ್ಕೆಯಾಗಿದ್ದಾರೆ.ಪ್ರೊ ಕಬಡ್ಡಿ ಹತ್ತನೇ ಆವೃತ್ತಿಗೆ ಯು ಪಿ ಯೋಧ ತಂಡದ ಪಾಲದ ಮೊದಲ ಆಟಗಾರ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ. ಹೊಸನಗರ ತಾಲೂಕು ಹಾಲುಗುಡ್ಡೆಯ ಶ್ರೀ ರಾಜು ಹೆಚ್ಎಸ್ ಹಾಗೂ ಶ್ರೀಮತಿ ಪೂರ್ಣಿಮಾ ದಂಪತಿಗಳ ಪುತ್ರ. ಇವರು ರಿಪ್ಪಿನಪೇಟೆಯಲ್ಲಿ ಶಿಕ್ಷಣ ಪಡೆದು ಬಳಿಕ ಎಸ್ ಡಿ ಎಂ ಸೇರಿದ್ದರು. ಮಲೆನಾಡು ಮತ್ತು ಕರಾವಳಿಯ ಸಾಧಕ ಕ್ರೀಡಾಪಟುವಿಗೆ ಈಗ ಶುಭಾಶಯಗಳ ಮಹಾಪುರ ಹರಿದು ಬರುತ್ತಿದೆ. ಎನಿ ವೇ ಬೆಸ್ಟ್ ಆಫ್ ಲಕ್ ಗಗನ್ ಗೌಡ.
ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!
HOW TO APPLY : NEET-UG COUNSELLING 2023