3 ದಶಕದ ರಸ್ತೆ ಬೇಡಿಕೆಗೆ ನಿರ್ಲಕ್ಷ
– ಚುನಾವಣಾ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ
– ಮತ್ತಿಕೈ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಘಟನೆ
NAMMUR EXPRESS NEWS
ಹೊಸನಗರ: 3 ದಶಕದಿಂದ ರಸ್ತೆಗಾಗಿ ಬೇಡಿಕೆ ಇದ್ದರು ಕೂಡ ನಿರ್ಲಕ್ಷ ತೋರಿದ ಹಿನ್ನೆಲೆಯಲ್ಲಿ ಚುನಾವಣಾ ಬಹಿಷ್ಕಾರದ ನಿರ್ಧಾರ ಕೈಗೊಂಡ ಘಟನೆ ಮತ್ತಿಕೈ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಮತ್ತಿಕೈ ಗ್ರಾಪಂ ವ್ಯಾಪ್ತಿಯ ತುತ್ತಿಕೊಡ್ಲು, ಸಂಸೆಕೈ, ತೌಡುಗೊಳ್ಳಿ ಗ್ರಾಮಸ್ಥರು ಚುನಾವಣ ಬಹಿಷ್ಕಾರದ ತೀರ್ಮಾನ ಕೈಗೊಂಡು ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮೂರು ಗ್ರಾಮಗಳಿಂದ 35ಕ್ಕು ಹೆಚ್ಚು ಕುಟುಂಬಗಳಿದ್ದು 3 ಕಿಮೀ ರಸ್ತೆ ಇಂದಿಗೂ ಮಣ್ಣು ರಸ್ತೆ ಯಾಗಿ ಉಳಿದುಕೊಂಡಿದೆ. ಹಿಂದಿನಿಂದಲೂ ಆಯ್ಕೆಯಾದ ಎಲ್ಲಾ ಜನಪ್ರತಿನಿಧಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸೆಕೈ ಭಾಗದ ರಸ್ತೆಯಲ್ಲಿ ಧರೆಕುಸಿತದ ಭೀತಿ ಇದ್ದು ತಡೆಗೋಡೆ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ನೆರೆ ಪರಿಹಾರದಲ್ಲಿ ಅನುದಾನ ಇಡದಿದ್ದರು ಕೂಡ ಜಿಪಂ ಸಿಇಒ ಭೇಟಿ ಮಾಡಿ ರೂ.2 ಲಕ್ಷ ಅನುದಾನ ತಡೆಗೋಡೆ ನಿರ್ಮಾಣಕ್ಕೆ ನಿಗದಿ ಪಡಿಸಲಾಗಿತ್ತು. ಆದರೆ ತಿಂಗಳ ನಂತರ ಕ್ರಿಯಾಯೋಜನೆಗೆ ತಡೆ ಹಿಡಿಯಲಾಗಿದೆ ಎಂದು ಆರೋಪಿಸಿದರು.
ಕೂಡಲೇ ರಸ್ತೆ ಅಭಿವೃದ್ಧಿ ಪಡಿಸಬೇಕು ಮತ್ತು ತಡೆಗೋಡೆ ನಿರ್ಮಿಸಬೇಕು. ಇದು 200 ಕ್ಕು ಹೆಚ್ಚು ಜನಸಂಖ್ಯೆ ಇರುವ ಮೂರು ಗ್ರಾಮಗಳ ಬೇಡಿಕೆಯಾಗಿದ್ದು ಕೂಡಲೇ ಸ್ಪಂದಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ. ಈ ವೇಳೆ ಚಂದ್ರಶೇಖರ್ ತುತ್ತಿಕೊಡ್ಲು, ಭಾಸ್ಕರ ತುತ್ತಿಕೊಡ್ಲು, ಕೃಷ್ಣಮೂರ್ತಿ ಸಂಸೆಕೈ, ಗಣೇಶ ಸಂಸೆಕೈ, ವೆಂಕಟರಮಣ ಭಟ್ ಸಂಸೆಕೈ, ಪಿ.ಎಂ.ರಮೇಶ ತೌಡುಗೊಳ್ಳಿ, ಟಿ.ಡಿ.ಶ್ರೀಕಾಂತ್ ತೌಡುಗೊಳ್ಳಿ ಇದ್ದರು.