ಯಡೂರು ಸೊಸೈಟಿಗೆ ದಾಖಲೆಯ ಸಾಧನೆ ಹೆಜ್ಜೆ!
– ಯಡೂರು ಸೊಸೈಟಿ ನೂತನ ಕಟ್ಟಡ ಉದ್ಘಾಟನೆ
– ಸಚಿವ ಮಧು ಬಂಗಾರಪ್ಪ, ಆರಗ, ಕಿಮ್ಮನೆ, ಆರ್.ಎಂ ಸಾಥ್
– ಸೊಸೈಟಿ ಸಾಧನೆಗೆ ಗಣ್ಯರ ಮೆಚ್ಚುಗೆ: ಅರ್ಥಪೂರ್ಣ ಕಾರ್ಯಕ್ರಮ
NAMMUR EXPRESS NEWS
ಯಡೂರು /ಹೊಸನಗರ: ಯಡೂರಿನ ಕೃಷಿ ಪ್ರಾಥಮಿಕ ಸಹಕಾರ ಸಂಘದ ನೂತನ ಕಟ್ಟಡ ಶನಿವಾರ ಉದ್ಘಾಟನೆಗೊಂಡಿದೆ. ಶಿಕ್ಷಣ ಸಚಿವ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟನೆ ಮಾಡಿದ್ದು ಈ ಸಂದರ್ಭದಲ್ಲಿ ಪ್ರಮುಖ ನಾಯಕರಾದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ , ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಮಂಜುನಾಥ್ ಗೌಡ ಸೇರಿದಂತೆ ಬಹುತೇಕ ನಾಯಕರು, ಸೊಸೈಟಿ ಅಧ್ಯಕ್ಷರು, ಸ್ಥಳೀಯರು ಹಾಜರಿದ್ದರು. ಇದು ಯಡೂರು ಸೊಸೈಟಿಯ ಸಾಧನೆಗೆ ಮೈಲಿಗಲ್ಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಬಳಿಕ ಶ್ರೀ ಗುತ್ತಿರೇಣುಕಾಂಬ ಸಭಾ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸೊಸೈಟಿ ಕಟ್ಟಡಕ್ಕೆ ಅಂದಿನ ಸಹಕಾರ ಸಚಿವರು ನನ್ನ ಮಾತನ್ನು ಸ್ವೀಕರಿಸಿ ತಕ್ಷಣ ಹಣ ಮಂಜೂರು ಆದೇಶ ನೀಡಿದ್ದರು. ಅದರಿಂದ ಅನುಕೂಲವಾಗಿದೆ ಎಂದರು. ಆರಗ ಜ್ಞಾನೇಂದ್ರ ಮಾತನಾಡುತ್ತಾ, ವ್ಯವಹಾರವನ್ನು ಸರಿಯಾಗಿ ನೋಡಿಕೊಂಡರೆ ಅದರಿಂದ ಆಗುವ ಅನುಕೂಲಗಳನ್ನು ನಾವೇ ಪಡೆಯಬಹುದು. ಸಾಲ ತೆಗೆದುಕೊಳ್ಳುವ ಮತ್ತು ಕಟ್ಟುವ ಕ್ರಮ ಸರಿಯಾಗಿದ್ದಷ್ಟೂ ಒಳ್ಳೆಯದು ಎಂದಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್ ಎಂ ಮಂಜುನಾಥ ಗೌಡರು, ಮೂರು ಲಕ್ಷಗಳವರೆಗೆ ಇದ್ದಂತಹ ಬಡ್ಡಿರಹಿತ ಸಾಲವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಐದು ಲಕ್ಷಕ್ಕೆ ಏರಿಸುವ ಜೊತೆಗೆ ವಿವಿಧ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ರೈತ ಸಹಕಾರಿ ಯೋಜನೆಗಳನ್ನು ಕಲ್ಪಿಸುವ ಮೂಲಕ ಚುನಾವಣೆಯ ಭರವಸೆಗಳನ್ನು ಈಡೇರಿಸಿದ್ದಾರೆ. ಇವುಗಳ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದರು.
ಜಿಪಂ ಸಿಇಒ ಲೋಖಂಡೆ, ಸೊಸೈಟಿ ಅಧ್ಯಕ್ಷರಾದ ಶಶಾಂಕ್ ಕೊಳವಾಡಿ, ಪ್ರಮುಖರಾದ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಎಂ. ಪರಮೇಶ್ವರ್, ಜೆ. ಎನ್ ಸುಧೀರ್, ಡಿಸಿಸಿ ಬ್ಯಾಂಕ್ ಪ್ರಭಾರ ಸಿಇಒ ವಾಸುದೇವ್, ಸುಳುಗೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರುತಿ ಶೇಷಾದ್ರಿ, ಯಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಪ್ರಕಾಶ್, ಮಾಸ್ತಿಕಟ್ಟೆ ಖೈರಗುಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಬಿ. ಕೃಷ್ಣಮೂರ್ತಿ, ನಿರ್ದೇಶಕರಾದ ನಾಗೇಶ್ ಗೌಡ, ಮಂಜುನಾಥ ಹೊಸಗದ್ದೆ, ಟೀಕಪ್ಪ ಗೌಡ ಹುಮ್ಮಡಗಲ್ಲು , ಪುರುಷೋತ್ತಮ ಜಗನಕೊಪ್ಪ, ರಮೇಶ್ ಅಚ್ಚುಮನೆ, ಪ್ರಶಾಂತ ಹಂದಿಗೆಮನೆ, ವಿನೋದ ರಾಜಶೇಖರ ಗಿಣಿಕಲ್ಲು, ಸತ್ಯ ಪ್ರೇಮ ಯೋಗೇಂದ್ರ ಮೇಲಿನಬೈಸೆ, ಸರಸ್ವತಿ ರತ್ನಾಕರ್ ಕೊಳವಾಡಿ, ಯಶೋದ ಚಂದ್ರಶೇಖರ್ ಸುಳಗೋಡು, ಶಿವಕುಮಾರ್ ಎಸ್ ಕ್ಷೇತ್ರ ಅಧಿಕಾರಿಗಳು, ವೃತ್ತಿಪರ ನಿರ್ದೇಶಕರು, ಸೊಸೈಟಿ ಮಾಜಿ ಅಧ್ಯಕ್ಷರಾದ ಮಹೇಶ್ ಮಾಗಲು, ನಿರ್ದೇಶಕರಾದ ಮಹಮ್ಮದ್ ಶರೀಫ್, ಸೊಸೈಟಿ ಸಿಇಒ ಸಂತೋಷ್ ಹೊಸಗದ್ದೆ, ಕೆ ಆರ್ ಚೇತನ,, ವಿಜೇತ್ ಗೌಡ ಕೊಳೂರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಸಹಕಾರ ರಂಗದಲ್ಲಿ ರಾಜಕೀಯ ಮಾಡಬಾರದು
ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ನೂತನ ಕಟ್ಟಡ ಉದ್ಘಾಟನೆ ಮಾಡಿ ಬಳಿಕ ಸಭಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇನ್ನೂ ರೈತರು ಉಳಿದಿರುವುದಕ್ಕೆ ಕಾರಣವೇ ಈ ಸಹಕಾರಿ ಸಂಘಗಳು. ಜಾಗ ಮಂಜೂರಾತಿಗೆ ಕಾರಣರಾದ ಮಾಜಿ ಸಚಿವ ಮಹದೇವಪ್ರಸಾದ್ ಅವರ ಸಹಕಾರವನ್ನು ಸ್ಮರಿಸುತ್ತಾ, ರಾಜಕಾರಣ ಮಾಡದೇ ಸಂಘಗಳನ್ನು ಉಳಿಸಿಕೊಂಡ ಬಂದಿರುವ ಬಗ್ಗೆ, ಈ ಸಂಘಗಳು ಒದಗಿಸುವ ಸಹಕಾರಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಶಾಲಾ ಸೌಲಭ್ಯ ಮತ್ತು ನಿರ್ವಹಣೆಯ ಬಗ್ಗೆಯೂ ಹೆಚ್ಚಿನ ಒತ್ತು ಕೊಡುವುದಾಗಿ ಹೇಳುತ್ತಾ ಶುಭ ಕೋರಿದರು.