ಮಾಸ್ತಿಕಟ್ಟೆಯಲ್ಲಿ ಲಯನ್ಸ್ ರಜತ ಸಂಭ್ರಮ!
– ವರಾಹಿ ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮ
– ಮಲೆನಾಡಿನ ಸಾಧಕರಿಗೆ ಸನ್ಮಾನ ಸಮಾರಂಭ
– ನಮ್ಮೂರ್ ಎಕ್ಸ್ ಪ್ರೆಸ್, ಮಲೆನಾಡು ವಾಯ್ಸ್ ಪತ್ರಿಕೆಗಳಿಗೆ ಪ್ರಶಸ್ತಿ ಗರಿ
NAMMUR EXPRESS NEWS
ಹೊಸನಗರ: ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯು 25ನೇ ವರ್ಷದ ಸಂಭ್ರಮದಲ್ಲಿ ಬೆಳ್ಳಿ ಹಬ್ಬ ಸಂಭ್ರಮ ಹಾಗೂ ವರಾಹಿ ಮಾಸ್ತಿಕಟ್ಟೆ ಸ್ನೇಹ ಸಂಬಂಧ ಕಾರ್ಯಕ್ರಮವನ್ನು ಫೆಬ್ರವರಿ 11ರ ಭಾನುವಾರ ಸಂಜೆ 4 ಗಂಟೆಗೆ ಮಾಸ್ತಿಕಟ್ಟೆಯ ಕೆಪಿಸಿ ಕಾಲೋನಿಯ ವರಾಹಿ ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದೆ. ಈಗಾಗಲೇ ಅಂತಿಮ ಸಿದ್ಧತೆ ಮುಗಿದಿದೆ. ಸರ್ವರನ್ನು ಆಯೋಜಕರು ಸ್ವಾಗತಿಸಿದ್ದಾರೆ. ಕಾರ್ಯಕ್ರಮದಲ್ಲಿ ಜಯರಾಮ್ ಶೆಟ್ಟಿ ಕುಂದಾಪುರ ದಂಪತಿ, ಬಿದನೂರು ಸಹೋದರಿಯರಾದ ದಾಕ್ಷಾಯಿಣಿ, ಜ್ಯೋತಿ, ನಿವೃತ್ತ ಶಿಕ್ಷಕರಾದ ಮಂಜುಳಮ್ಮ ಆನಂದ ರೆಡ್ಡಿ, ನಮ್ಮೂರ್ ಎಕ್ಸ್ಪ್ರೆಸ್ ಮುಖ್ಯಸ್ಥರಾದ ರಾಘವೇಂದ್ರ ತೀರ್ಥಹಳ್ಳಿ, ಮಲೆನಾಡು ವಾಯ್ಸ್ ಪತ್ರಿಕೆ ಸಂಪಾದಕ ನಗರ ರಾಘವೇಂದ್ರ, ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಧರ್ಮೇಶ್ ಸಿರಿಬೈಲ್ ಇವರಿಗೆ ಸನ್ಮಾನ ಸಮಾರಂಭ ನಡೆಯಲಿದೆ.
ಕಾರ್ಯಕ್ರಮಗಳ ವೈಶಿಷ್ಟ್ಯತೆ :
– ಸ್ಮರಣ ಸಂಚಿಕೆ ಪುಸ್ತಕ ಬಿಡುಗಡೆ
– ಪೂಜ್ಯ ಸ್ವಾಮೀಜಿಗಳು ಹಾಗೂ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಉಪನ್ಯಾಸ ಹಾಗೂ ವಿಶೇಷ ಭಾಷಣಕಾರರನ್ನು ಒಳಗೊಂಡ ಅತ್ಯುತ್ತಮ ವೇದಿಕೆ ಕಾರ್ಯಕ್ರಮ
– ಮಲೆನಾಡಿನ ವೈಭವ ಸೂಚಿಸುವ ವಿಶೇಷ ಹಸಿರು ರಂಗಸಜ್ಜಿಕೆ
– ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಗೌರವ ಸಮರ್ಪಣೆ, ಲಯನ್ಸ್ ಸೇವಾ ಯೋಜನೆ ಅನುಷ್ಠಾನ
– ಮಾಸ್ತಿಕಟ್ಟೆಯ ಮೂಲ ನಿವಾಸಿಗಳಾಗಿ ಹಾಗೂ ಅನೇಕ ರೀತಿಯಲ್ಲಿ ನಮ್ಮೂರ ನಂಟು ಹೊಂದಿರುವ ನೂರಾರು ಜನರನ್ನು ಒಂದೆಡೆ ಸೇರಿಸುವ ವರಹಿ ಮಾಸ್ತಿ ಕಟ್ಟೆ ಸ್ನೇಹ ಸಂಬಂಧ ಎಂಬ ಬಾಂಧವ್ಯದ ಸಮ್ಮಿಲನ ಕಾರ್ಯಕ್ರಮ
– ಮಲೆನಾಡ ಗಾನ ಕೋಗಿಲೆ ಖ್ಯಾತಿಯ ಕಲಾವಿದೆ ದಿವ್ಯ ರಾಮಚಂದ್ರ ಮತ್ತು ಸಂಗಡಿಗರು, ಬೆಂಗಳೂರು ಇವರಿಂದ ಅಮೋಘ ಗಾನ ವೈಭವ ಕಾರ್ಯಕ್ರಮ ಹಾಗೂ ಸ್ಥಳೀಯವಾಗಿ ಕೆಲವು ಸೀಮಿತ ಮನರಂಜನೆ ಕಾರ್ಯಕ್ರಮಗಳ ಅಳವಡಿಕೆ.
– ಮಲೆನಾಡ ವಿಶೇಷ ಅಡುಗೆಯ ಸಸ್ಯಹಾರ ಮತ್ತು ಮಾಂಸಹಾರ ಭೋಜನ ವ್ಯವಸ್ಥೆ.
– ಆಗಮಿಸಿದ ಸರ್ವರನ್ನು ಒಳಗೊಂಡ ವಿಶೇಷ ಛಾಯಾಚಿತ್ರ ಮಾಡಲಾಗುವುದು.
ನಂದಿನಿ ಸಂಜೆ 4ಕ್ಕೆ ಪ್ರಾರಂಭವಾಗಿ,ಸಂಜೆ 4 ರಿಂದ 5:00 ಚಹಾ ತಿಂಡಿ ಹಾಗೂ ಸಂಜೆ 5 ಗಂಟೆಯಿಂದ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ರಾತ್ರಿ 8.30 ಕ್ಕೆ ಭೋಜನ ವ್ಯವಸ್ಥೆಯೊಂದಿಗೆ ವಿಶೇಷ ಮನರಂಜನ ಕಾರ್ಯಕ್ರಮ, ಮಲೆನಾಡ ಗಾನಕೋಗಿಲೆ ದಿವ್ಯ ರಾಮಚಂದ್ರ ಹಾಗೂ ಸಂಗಡಿಗರು ಬೆಂಗಳೂರು ಇವರಿಂದ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಮಾಹಿತಿ
– ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವವರು ಮುಂಚಿತವಾಗಿ ತಮ್ಮವರ ಹೆಸರನ್ನು ನೋಂದಾಯಿಸಿ ಪ್ರವೇಶ ಪತ್ರ ಪಡೆದುಕೊಳ್ಳುವುದು
– ಈ ನೋಂದಣಿ ಗೌರವ ಪ್ರವೇಶ ಪತ್ರ ಪಡೆದ ಪ್ರತಿ ಕಾರ್ಡಿಗೆ ಗರಿಷ್ಠ ಇಬ್ಬರಿಗೆ ಅವಕಾಶ ನೀಡಲಾಗುವುದು
– ಕಾರ್ಯಕ್ರಮಕ್ಕೆ ಆಗಮಿಸುವ ಸರ್ವರು ನಿಗದಿತ ಸಮಯಕ್ಕೆ ಬರುವುದರ ಮೂಲಕ ಕಾರ್ಯಕ್ರಮ ಸಕಾಲಕ್ಕೆ ನಡೆಸಲು ಸಹಕರಿಸುವುದು
– ಕಾರ್ಯಕ್ರಮದಲ್ಲಿ ಗೌರವ ಪ್ರವೇಶ ಪಡೆದ ಪ್ರತೀ ಕಾರ್ಡಿನ ನೋಂದಣಿ ಸಂಖ್ಯೆಗಳನ್ನು ಒಟ್ಟುಗೂಡಿಸಿ ಚೀಟಿ ಎತ್ತುವುದರ ಮೂಲಕ ಕನಿಷ್ಠ 10 ಜನರನ್ನು ಆಯ್ಕೆಗೊಳಿಸಿ ವೇದಿಕೆಯಲ್ಲಿ ಅಭಿನಂದಿಸಲಾಗುವುದು.
– ಈ ಕಾರ್ಯಕ್ರಮ ನಿಮ್ಮಿಂದಲೇ, ನಿಮಗೋಸ್ಕರ ನಡೆಸುವ ನಮ್ಮೂರಿನ ಪ್ರೀತಿ ಗೌರವದ ಹೆಮ್ಮೆಯ ಕಾರ್ಯಕ್ರಮವಾಗಿದ್ದು ತಮ್ಮೆಲ್ಲರ ಸಂಪೂರ್ಣ ಸಹಕಾರ ಬಯಸುತ್ತೇವೆ.
– ಆಗಮಿಸುವ ಸರ್ವರನ್ನು ಪ್ರೀತಿ, ವಿಶ್ವಾಸ, ಅಭಿಮಾನ ಆದರದಿಂದ ಬರಮಾಡಿಕೊಳ್ಳುವ ಕರ್ತವ್ಯ ನಮ್ಮದು.