ವರಾಹಿ ಲಯನ್ಸ್ 25ನೇ ವರ್ಷಕ್ಕೆ ನೂತನ ಸಾರಥಿಗಳು!
– 3ನೇ ಬಾರಿಗೆ ಅಧ್ಯಕ್ಷರಾಗಿ ಲಯನ್ ಎಚ್ ವಾಸಪ್ಪ ಮಾಸ್ತಿ ಕಟ್ಟೆ ಅಧಿಕಾರ ಸ್ವೀಕಾರ
– ಲೀಲಾವತಿ ವಿ ರಾವ್ ಅವರಿಗೆ ಕಾರ್ಯದರ್ಶಿ ಹುದ್ದೆ
NAMMUR EXPRESS NEWS
ಹೊಸನಗರ: ಹೊಸ ನಗರ ತಾಲೂಕು ವರಾಹಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಮೂರನೇ ಬಾರಿಗೆ ಲಯನ್ ಎಚ್ ವಾಸಪ್ಪ ಮಾಸ್ತಿ ಕಟ್ಟೆ ಅಧಿಕಾರ ಸ್ವೀಕರಿಸಿದ್ದಾರೆ. ಮಾಸ್ತಿ ಕಟ್ಟೆ ಖೈರಗುಂದ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಜಿಲ್ಲೆ 317 ಸಿ, ಪ್ರಾಂತ್ಯ7 ರ, ಪ್ರಾಂತೀಯ ಅಧ್ಯಕ್ಷರಾದ ಎಂ ಜೆ ಎಫ್ ಲಯನ್ ವೇದಮೂರ್ತಿ ,ಶಿರಾಳಕೊಪ್ಪ ಇವರು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಲಯನ್ಸ್ ಸಂವಿಧಾನದಂತೆ ಪ್ರಮಾಣವಚನ ಬೋಧಿಸುವುದರ ಮೂಲಕ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾಸ್ತಿಕಟ್ಟೆಯಂತಹ ಪುಟ್ಟ ಗ್ರಾಮದಲ್ಲಿ ನಿರಂತರ 24 ವರ್ಷಗಳ ಕಾಲ ಲಯನ್ಸ್ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದ ಎಲ್ಲರನ್ನು ಅಭಿನಂದಿಸಿ ದರು.
ಮಲೆನಾಡಿನ ದಟ್ಟ ಅರಣ್ಯದ ಪ್ರದೇಶವಾಗಿರುವ ಈ ಭಾಗದಲ್ಲಿ ಅನೇಕ ಡ್ಯಾಮ್ ಗಳು ನಿರ್ಮಾಣವಾಗಿದ್ದು ಈ ಭಾಗದ ಜನರು ತ್ಯಾಗಮಯಿಗಳಾಗಿದ್ದು ಅನೇಕ ಸಮಸ್ಯೆಗಳು ನಡುವೆ ಬದುಕನ್ನು ಕಟ್ಟಿಕೊಂಡಿದ್ದು ಶ್ಲಾಘನೀಯ ಎಂದರು.
ವರಾಹಿ ಲಯನ್ಸ್ ಕ್ಲಬ್ ನಾ ಕಂಡಂತೆ ಲಯನ್ಸ್ ಜಿಲ್ಲೆಯಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಸೇವೆಗಳನ್ನು ನೀಡುತ್ತಾ ಬಂದಿದ್ದು ಜಿಲ್ಲೆಯಲ್ಲಿ ಈ ಹಿಂದೆ ಹಿಂದೆ ಟಾಪ್ ಹತ್ತರಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿತ್ತು .ಅತ್ಯಂತ ಕ್ರಿಯಾಶೀಲ ಸದಸ್ಯರು ಇರುವ ಈ ತಂಡದಲ್ಲಿ ಬಹಳಷ್ಟು ಜನ ಹಿರಿಯ ಸದಸ್ಯರಿದ್ದು ಅವರೆಲ್ಲರ ಸಹಕಾರದಿಂದ, ಅನುಭವದ ಮೂಲಕ ಈ ಕ್ಲಬ್ಬನ್ನು ಮುನ್ನಡೆಸಿಕೊಂಡು ಬಂದಿದ್ದಾರೆ ಎಂದರು.
24 ವರ್ಷ ತುಂಬಿ 25ಕ್ಕೆ ಕಾಲಿಡುತ್ತಿರುವ ಈ ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ಸಾರಥ್ಯ ವಹಿಸಿಕೊಂಡಿರುವ ಲಯನ್ ಎಚ್ ವಾಸಪ್ಪ ಇವರು 25ನೇ ವರ್ಷದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿದ್ದು ಅವರಿಗೆ ಲಯನ್ಸ್ ಕ್ಲಬ್ನ ಬೆಳ್ಳಿಹಬ್ಬವನ್ನು ಆಚರಿಸುವ ಒಂದು ಸುವರ್ಣ ಅವಕಾಶ ಒದಗಿ ಬಂದಿದ್ದು ಅವರು ಅತ್ಯುತ್ತಮವಾಗಿ ಬೆಳ್ಳಿ ಹಬ್ಬವನ್ನು ಆಚರಿಸುವ ಭರವಸೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾ ಈ ಕಾರ್ಯಕ್ರಮಕ್ಕೆ ಕಬ್ಬಿನ ಎಲ್ಲಾ ಸದಸ್ಯರು ಕೈಜೋಡಿಸಬೇಕೆಂದು ಕರೆ ನೀಡಿದರು. ವರಾಹಿ ಕ್ಲಬ್ ವತಿಯಿಂದ ಮಾಸ್ತಿಕಟ್ಟೆಯ ಆಟೋ ಚಾಲಕರನ್ನು ಗುರುತಿಸಿ ಅವರ ಸೇವೆಯನ್ನು ನೆನಪಿಸಿ ಆಹಾರದ ಕಿಟ್ಟುಗಳನ್ನು ನೀಡಿದರು.
ನೂತನ ಅಧ್ಯಕ್ಷರಾದ ಲಯನ್ ಎಚ್ ವಾಸಪ್ಪ ಮಾತನಾಡಿ ಮೂರನೇ ಬಾರಿಗೆ ಅಧ್ಯಕ್ಷನಾಗಲು ಅವಕಾಶ ನೀಡಿದ ವರಾಹಿ ಕ್ಲಬ್ಬಿನ ಸರ್ವ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು. ಪ್ರಾಂತ್ಯ ಅಧ್ಯಕ್ಷರಾಗಿ ಅತ್ಯುತ್ತಮ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟ ಲಯನ್ ಹೆಚ್ ಕೆ ವಿದ್ಯಾನಂದ ರಾವ್ ಅವರಿಗೆ ಅಭಿನಂದನೆ ಸಲ್ಲಿಸಿದರು. ವರಾಯಿ ಕ್ಲಬ್ಬಿನ ನೂತನ ಕಾರ್ಯದರ್ಶಿಯಾಗಿ ಲಯನ್ ಲೀಲಾವತಿ ವಿ ರಾವ್ ಹಾಗೂ ಖಜಾಂಚಿಯಾಗಿ ಲಯನ್ ವೈ ಕೆ ವೆಂಕಟೇಶ್ ಹೆಗ್ಗಡೆ ಹಾಗೂ ಎಲ್ಲಾ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು.
ಪ್ರಾಂತೀಯ ಅಧ್ಯಕ್ಷರು ನೂತನ ಅಧ್ಯಕ್ಷರಿಗೆ ಹಾಗೂ ನಿಕಟಪೂರ್ವ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು. ಹಾಗೂ ಜಿಲ್ಲಾ ಅವಾರ್ಡ್ ನೈಟ್ ನಲ್ಲಿ ಪಡೆದ ವಾರಾಹಿ ಕ್ಲಬ್ಬಿನ ಅವಾರ್ಡ್ ಗಳನ್ನು ವಿತರಿಸಿದರು.ಪ್ರಾಂತೀಯ ಅಧ್ಯಕ್ಷರನ್ನು ನಿಕಟ ಪೂರ್ವ ಪ್ರಾಂತೀಯ ಅಧ್ಯಕ್ಷರಾದ ಲಯನ್ ಎಚ್ ಕೆ ವಿದ್ಯಾನಂದ ರಾವ್ ಪರಿಚಯಿಸಿ ಮಾತನಾಡಿದರು. ನೂತನ ಅಧ್ಯಕ್ಷರನ್ನು ಲಯನ್ ಕಾರ್ತಿಕ್ ಅವರು ಸಭೆಗೆ ವಿಶೇಷವಾಗಿ ಪರಿಚಯಿಸಿದರು ವಲಯ ಅಧ್ಯಕ್ಷರಾದ ಲಯನ್ ಪ್ರಸನ್ನ ಕುಮಾರ್, ಲಯನ್ ಶಿವರಾಜ್ ಗೌಡ, ನಿಕಟ ಪೂರ್ವ ಕಾರ್ಯದರ್ಶಿ ಲಯನ್ ವೆಂಕಟೇಶ್ ಗೌಡ, ಖಜಾಂಚಿ ಲಯನ್ ಬಿ ಟಿ ಸಂಪತ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು. ಸುಂದರಾಂಗಿ ನಾಗೇಶ್ ಪ್ರಾರ್ಥಿಸಿದರು. ಲ. ವೈ ಕೆ ವೆಂಕಟೇಶ್ ಹೆಗ್ಗಡೆ ಸ್ವಾಗತಿಸಿದರು. ಲ. ಅಶ್ವಿನಿ ಹೆಗಡೆ ನಿರೂಪಿಸಿದರು.ಲಯನ್ ಲೀಲಾವತಿ ವಿ ರಾವ್ ಎಲ್ಲರನ್ನು ವಂದಿಸಿದರು.
ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ
HOW TO APPLY : NEET-UG COUNSELLING 2023