– ಹೊಸನಗರದ ತುಂಗಾ ಅಡಿಕೆ ಮಾರಾಟ ಸೊಸೈಟಿ ನೂತನ ಸಾರಥಿಗಳು!
– ಅಧ್ಯಕ್ಷರಾಗಿ ವಿನಯ್ ದುಮ್ಮ, ಉಪಾಧ್ಯಕ್ಷರಾಗಿ ನಗರ ಮಾಲ್ತೇಶ್ ಅವಿರೋಧ ಆಯ್ಕೆ
NAMMUR EXPRESS NEWS
ಹೊಸನಗರದ ತುಂಗಾ ಅಡಿಕೆ ಮಾರಾಟ ಸೊಸೈಟಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಯುವ ಸಹಕಾರಿಗಳಾದ ವಿನಯ್ ಧುಮ್ಮಹಾಗೂ ಉಪಾಧ್ಯಕ್ಷರಾಗಿ ನಗರ ಮಾಲ್ತೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ಅಪೆಕ್ಸ್ ಬ್ಯಾಂಕ್,ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಡಾ ಆರ್ ಎಂ ಮಂಜುನಾಥ ಗೌಡ ಅವರ ಮಾರ್ಗದರ್ಶನದಂತೆ ನೂತನ ಸಾರಥಿಗಳ ಆಯ್ಕೆ ನಡೆದಿದೆ. ಎಲ್ಲಾ ನಿರ್ದೇಶಕರು, ಸಮಸ್ತ ಷೇರುದಾರರು, ಜನತೆಗೆ ನೂತನ ಪದಾಧಿಕಾರಿಗಳು ಕೃತಜ್ಞತೆ ಅರ್ಪಿಸಿದ್ದಾರೆ.