ಹೊಸನಗರಕ್ಕೆ ಹೊಸ ತಹಶೀಲ್ದಾರ್
– ರಾಜಕುಮಾರ್ ನೂತನ ತಹಸೀಲ್ದಾರ್ ಆಗಿ ನೇಮಕ
– ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಪ್ರಭಾರ ಸೇವೆಗೆ ಮೆಚ್ಚುಗೆ
NAMMUR EXPRESS NEWS
ಹೊಸನಗರ : ಹೊಸನಗರ ನೂತನ ತಹಶೀಲ್ದಾರ್ ಆಗಿ ರಾಜಕುಮಾರ್ ಮರತೂರಕರ ಅವರನ್ನು ಸರ್ಕಾರ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ. ಹೊಸನಗರದಲ್ಲಿ ಪ್ರಭಾರ ತಹಶೀಲ್ದಾರರಾಗಿ ಇದುವರೆಗೆ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಅವರು ಕೆಲಸ ಮಾಡುತ್ತಿದ್ದರು. ಈಗ ರಾಜಕುಮಾರ್ ಮರತೂರಕರ ನೇಮಕದಿಂದಾಗಿ ತಾಲೂಕು ಆಡಳಿತಕ್ಕೆ ಚುರುಕು ಸಿಗಬಹುದೆಂಬ ನಿರೀಕ್ಷೆ ಮೂಡಿದೆ. ಇನ್ನು ಜನರಿಗೆ ಸ್ಪಂದನೆ ಮಾಡುತ್ತಿದ್ದ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಪ್ರಭಾರ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಶಿವಮೊಗ್ಗದ ಮೂವರು ಸೇರಿ ರಾಜ್ಯದಲ್ಲಿ ಒಟ್ಟು 22 ತಹಶೀಲ್ದಾರ್’ಗಳ ಸ್ಥಳ ನಿಯೋಜನೆ ಮಾಡಲಾಗಿದೆ. ತೀರ್ಥಹಳ್ಳಿಗೆ ಜೆ.ಬಿ.ಜಕ್ಕನಗೌಡ, ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗೆ ಚುನಾವಣೆ ತಹಶೀಲ್ದಾರ್, ಆರ್.ವಿ. ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ.
ಹೊಸನಗರ ಜನರಿಗೆ ಹಲವು ನಿರೀಕ್ಷೆ
ಹೊಸನಗರ ತಾಲೂಕು ಜನ ಮೂಲ ಸೌಲಭ್ಯ ಕೊರತೆಯಿಂದ ನಲುಗುತ್ತಿದ್ದಾರೆ. ಅವರಿಗೆ ಇದೀಗ ಹೊಸ ತಹಸೀಲ್ದಾರ್ ಸೇವೆ ಅಗತ್ಯ ಇದೆ. ಜತೆಗೆ ಶರಾವತಿ ಮುಳುಗಡೆ, ಎಲೆ ಚುಕ್ಕಿ ರೋಗ ಸೇರಿ ರೈತರ ಬದುಕು ಬೀದಿಗೆ ಬಿದ್ದಿದೆ. ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ.