ರಾತ್ರಿ ಕಾಳಿಂಗ ಸರ್ಪ ಹಿಡಿಯುವ ಆಪರೇಷನ್!
– ಯಡೂರು ಕೊಳವಾಡಿ ಗ್ರಾಮದಲ್ಲಿ ಘಟನೆ
– 12 ಅಡಿ ಕಾಳಿಂಗ ಸರ್ಪ ಹಿಡಿದ ಸ್ನೇಕ್ ಚಂದ್ರು, ಶೌರ್ಯ ಟೀಮ್
– ಕಾಳಿಂಗ ಹಿಡಿದಿದ್ದು ಹೇಗೆ… ಇಲ್ಲಿದೆ ನೋಡಿ ರಿಪೋರ್ಟ್
NAMMUR EXPRESS NEWS
ತೀರ್ಥಹಳ್ಳಿ: ( Thirthahalli ) ಹಾವು ಕಂಡರೆ ಭಯವೇ ಹೆಚ್ಚು. ಅದ್ರಲ್ಲೂ ಹಗಲು ಹಾವು ಕಂಡ್ರೆ ಬಿದ್ದು ಓಡುತ್ತೇವೆ. ಆದರೆ ಯಡೂರು ಬಳಿ ರಾತ್ರಿ ಕಾಳಿಂಗ ಸರ್ಪ ಹಿಡಿದು ಕಾಡಿಗೆ ಬಿಡಲಾಗಿದೆ. ಹೌದು. ( Yadur ) ಯಡೂರು ಕೊಳವಾಡಿ ( Kolavadi ) ಗ್ರಾಮದಲ್ಲಿ ಬುಧವಾರ ಘಟನೆ ನಡೆದಿದ್ದು 12 ಅಡಿ ಕಾಳಿಂಗ ಸರ್ಪ ಹಿಡಿದ ಸ್ನೇಕ್ ಚಂದ್ರು, ಶೌರ್ಯ ಟೀಮ್ ಸ್ಥಳೀಯರ ಆತಂಕ ದೂರ ಮಾಡಿದ್ದಾರೆ.
ಕಾಳಿಂಗ ಹಿಡಿದಿದ್ದು ಹೇಗೆ?: ಯಡೂರು ಕೊಳವಾಡಿಯ ರಾಜೇಗೌಡ ಎಂಬುವರ ಮನೆಯಲ್ಲಿ ಕಾಳಿಂಗ ಸರ್ಪ ಸೇರಿಕೊಂಡಿತ್ತು. ತೀರ್ಥಹಳ್ಳಿ ಕೈಮರದ ಸ್ನೇಕ್ ಚಂದ್ರು, ಶೌರ್ಯ ಟೀಮ್ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ಹೋಗಿ ರಾತ್ರಿಯೆ ಹಾವನ್ನು ಹಿಡಿದಿದ್ದಾರೆ.
ಇದನ್ನೂ ಓದಿ : ಜಲಪಾತ ಸಿನಿಮಾಕ್ಕೆ ವಿಜಯಪ್ರಕಾಶ್ ಎಂಟ್ರಿ!
HOW TO APPLY : NEET-UG COUNSELLING 2023